ಆಸ್ಟ್ರೇಲಿಯಾವನ್ನು ಮಣಿಸಿ ಫೈನಲ್ ಗೆ ಲಗ್ಗೆ ಇಟ್ಟ ಭಾರತ
ಮುಂಬೈ;- ಅ.30
ಮಹಿಳೆಯರ ಏಕದಿನ ಕ್ರಿಕೆಟ್ ವಿಶ್ವಕಪ್‌ನಲ್ಲಿ ಭಾರತ ಫೈನಲ್ ಗೆ ಎಂಟ್ರಿ ಕೊಟ್ಟಿದೆ
ಗುರುವಾರ ರಾತ್ರಿ ಡಿ.ವೈ ಪಾಟೀಲ ಕ್ರೀಡಾಂಗಣದಲ್ಲಿ ನಡೆದ ಮಹಿಳೆಯರ ಏಕದಿನ ಕ್ರಿಕೆಟ್ ವಿಶ್ವಕಪ್ ಟೂರ್ನಿಯ ಎರಡನೇ ಸೆಮಿಫೈನಲ್ ನಲ್ಲಿ ಆಸ್ಟ್ರೇಲಿಯಾವನ್ನು 5 ವಿಕೆಟ್ ಅಂತರದಿಂದ ಸೋಲಿಸಿದ ಭಾರತ ಫೈನಲ್ ಗೆ ಅರ್ಹತೆಯನ್ನು ಪಡೆಯಿತು
ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಮಾಡಿದ ಆಸ್ಟ್ರೇಲಿಯಾ ಲಿಚ್ ಪೀಲ್ಡ್ ಅವರ ಭರ್ಜರಿ ಶತಕ (119) ನೆರವಿನಿಂದ 50 ಓವವರ್ ಗಳಲ್ಲಿ 338 ರನ್ ಕಲೆ ಹಾಕಿತು ಭಾರತದ ಪರ ಬೌಲರ್ ದೀಪ್ತಿ ಶರ್ಮಾ ಶ್ರೀ ಚಾರಣಿ ತಲಾ 2 ವಿಕೆಟ್ ಪಡೆದು ಮಿಂಚಿದರು ಅಮಾನ್ ಜೋತ್ ಕೌರ್, ರಾಧ ಯಾದವ್ , ಕ್ರಾಂತಿ ಗೌಡ್ ತಲಾ ಒಂದೂಂದು ವಿಕೆಟ್ ಪಡೆದು ಮಿಂಚಿದರು
ಆಸೀಸ್ ಪಡೆ ನೀಡಿದ ಬೃಹತ್ ರನ್ ಬೆನ್ನತ್ತಿದ ಭಾರತದ ಪರ ಆರಂಭಿಕ ಆಟಗಾರರಾದ ಶಫಾಲಿ ಶರ್ಮ 10 ಮಾಜಿ ನಾಯಕಿ ಸ್ಮ್ರತಿ ಮಂಧಾನ 24 ರನ್ ಗಳಿಸಿ ಔಟಾದರು
ಈ ಸಂದರ್ಭದಲ್ಲಿ ಕ್ರೀಸ್ ಗೆ ಆಗಮಿಸಿದ ಭಾರತ ತಂಡದ ಭರವಸೆಯ ಆಟಗಾರ್ತಿ ಜೆಮಿಮಾ ರೋಡ್ರಿಗಸ್ ಶತಕ (127) ಹಾಗೂ ನಾಯಕಿ ಹರ್ಮನ್ ಪ್ರೀತ್ ಕೌರ್ ಅವರ ಅರ್ಧಶತಕ (89) ದೀಪ್ತಿ ಶರ್ಮಾ 24, ರಿಚಾ ಘೋಷ್ 26, ಹಾಗೂ ಅಮಾನ್ ಜೋತ್ ಕೌರ್ ಅವರ 15 ರನ್ ಗಳ ನೆರವಿನಿಂದ 48.3 ಓವರ್ ಗಳಲ್ಲಿ ಇನ್ನೂ 9 ಎಸೆತ ಬಾಕಿರುವಂತೆಯೇ ಗೆಲುವಿನ ನಗೆ ಬೀರಿತು.
ಜೆಮೀಮಾ ರೊಡ್ರಿಗಸ್ ಪಂದ್ಯಶ್ರೇಷ್ಟ ಪ್ರಶಸ್ತಿಯನ್ನು ಪಡೆದರು
ಭಾರತವು ಪೈನಲ್ ನಲ್ಲಿ ದಕ್ಷಿಣ ಆಪ್ರಿಕಾ ತಂಡವನ್ನು ಎದುರಿಸಲಿದೆ.



