
ಮಂಗಳೂರು:- ಅಮೇರಿಕಾ ಓರ್ಲ್ಯಾಂಡ್ಯೋದಲ್ಲಿ ಲಯನ್ಸ್ 317 ಡಿ ಜಿಲ್ಲಾ ಗವರ್ನರ್ ಆಗಿ ಪ್ರಮಾಣವಚನ ಸ್ವೀಕರಿಸಿ ಮಂಗಳೂರಿಗೆ ಆಗಮಿಸಿದ ಕುಡ್ಪಿ ಅರವಿಂದ ಶೆಣೈ ಮತ್ತು ಮಮತಾ ಶೆಣೈ ಅವರನ್ನು ಮಂಗಳೂರು ಲಯನ್ಸ್ ಸೇವಾ ಮಂದಿರದಲ್ಲಿ ಸ್ವಾಗತಿಸಿ ಸಮ್ಮಾನಿಸಲಾಯಿತು.



ಲಯನ್ಸ್ 317ಡಿ ಜಿಲ್ಲೆ ಗವರ್ನರ್ ಅರವಿಂದ ಶೆಣೈ ಮಾತನಾಡಿ ಶಿಸ್ತು ನಿಷ್ಠೆ ಮತ್ತು ಸೇವಾ ಮನೋಭಾವನೆ ಲಯನ್ಸ್ ಸಂಸ್ಥೆಯಲ್ಲಿ ಬಲವಾಗಿದೆ ಎಲ್ಲ ಲಯನ್ಸ್ ಸದಸ್ಯರು ತೊಡಗಿಸಿಕೊಂಡು ಇತರರನ್ನು ಪ್ರೇರೆಪಿಸಬೇಕು ಎಂದು ಹೇಳಿದರು
ದ್ವೀತಿಯ ಉಪ ಜಿಲ್ಲಾ ಗವರ್ನರ್ ಗೋವರ್ಧನ್ ಶೆಟ್ಟಿ ಸಂಪುಟ ಕಾರ್ಯದರ್ಶಿ ಚಂದ್ರೆಗೌಡ ಕೋಶಾಧಿಕಾರಿ ಬಾಲಕೃಷ್ಣ ಹೆಗ್ಡೆ ಕ್ಯಾಬಿನೆಟ್ ಸಹ ಸಂಯೋಜಕಿ ನಾನ್ಸಿ ಮಸ್ಕರೇಸನ್ ಡಿಜಿ ಸಂಯೋಜಕಿ ಜ್ಯೋತಿ ಶ್ರೀಧರ್ ರಾಜ್ ಶೆಟ್ಟಿ,
ಜಿಲ್ಲಾ ಪಿ.ಆರ್ ಒ ಸುರ್ಶನ್ ಪಡಿಯಾರ್ ವಿಟ್ಲ ಮಂಗಳೂರು ಲಯನ್ಸ್ ಕ್ಲಬ್ ಅಧ್ಯಕ್ಷ ರಾಜೇಶ್ ಕಾಮತ್ ಹೆಚ್ಚುವರಿ ಜಿಲ್ಲಾ ಕಾರ್ಯದರ್ಶಿ ಚಂದ್ರಹಾಸ್ ರೈ
ನಿಕಟಪೂರ್ವ ಜಿಲ್ಲಾ ಗವರ್ನರ್ ಉದಯಶಂಕರ ಶೆಟ್ ವಸಂತ್ ಕುಮಾರ್ ಶೆಟ್ಟಿ ರೋನಾಲ್ಡ್ ಐಸಾಕ್ ಗೋಮ್ಸ್ ಕೆ.ಪಿ ಪ್ರಭು ಕಿಶೋರ್ ರಾವ್ ಮಾಜಿ ಗವರ್ನರ್ ಭಾರತಿ ಜಿಲ್ಲೆಯ ವಿವಿಧ ಲಯನ್ಸ್ ಕ್ಲಬ್ ಗಳ ಕ್ಯಾಬಿನೆಟ್ ಸದಸ್ಯರು ಪದಾಧಿಕಾರಿಗಳು ಭಾಗವಹಿಸಿದರು
ಜಿಲ್ಲಾ ಪಿ.ಆರ್ ಒ ಸುದರ್ಶನ ಪಡಿಯಾರ್ ವಿಟ್ಲ ಸ್ವಾಗತಿಸಿ ವಂದಿಸಿದರು ಪ್ರಶಾಂತ್ ಶೆಟ್ಟಿ ನಿರೂಪಿಸಿದರು