ಕಾಡುಮಠ ವಾರ್ಡಿನ ಕುಚ್ಚಿನಡ್ಕ ನಾಗರಿಕರ ಬಹುಕಾಲದ ಬೇಡಿಕೆಗೆ ಸ್ಪಂದನೆ ದೊರೆತಿದ್ದು, ಮಳೆಗಾಲ ಬಂತೆಂದರೆ ನಡೆದಾಡುವುದಕ್ಕೂ ಕಷ್ಟವಾಗುತ್ತಿದ್ದ ಮಣ್ಣಿನ ರಸ್ತೆ ಇದೀಗ ಕಾಂಕ್ರೀಟೀಕರಣಗೊಂಡು ಸುಗಮ ವಾಹನ ಸಂಚಾರಕ್ಕೆ ದಾರಿ ಮಾಡಿಕೊಟ್ಟಿದೆ. ಈ ಅಭಿವೃದ್ಧಿ ಕಾಮಗಾರಿ ಸ್ಥಳೀಯರ ದಿನನಿತ್ಯದ ಜೀವನಕ್ಕೆ ದೊಡ್ಡ ಮಟ್ಟದ ನೆರವು ದೊರೆತಿದೆ. ಗ್ರಾಮಾಭಿವೃದ್ಧಿಯತ್ತ ಇನ್ನೊಂದು ಮಹತ್ವದ ಹೆಜ್ಜೆಯಾಗಿದೆ.
ಕೊಳ್ನಾಡು ಗ್ರಾಮದ ಕಾಡುಮಠ ವಾರ್ಡಿನ ಅಗರಿ–ಕುಚ್ಚಿನಡ್ಕ ರಸ್ತೆಯ ಕಾಂಕ್ರೀಟೀಕರಣಕ್ಕಾಗಿ ₹5 ಲಕ್ಷ ಅನುದಾನವನ್ನು ವಿನಿಯೋಗಿಸಿ ಕಾಮಗಾರಿ ಅನುಷ್ಠಾನಗೊಳಿಸಿದ ಜನಪ್ರಿಯ ವಿಧಾನಪರಿಷತ್ ಶಾಸಕರಾದ *ಶ್ರೀ ಮಂಜುನಾಥ ಭಂಡಾರಿ* ಅವರ ಕಾರ್ಯ ಶ್ಲಾಘನೀಯವಾಗಿದೆ. ಈ ಅನುದಾನಕ್ಕೆ ಸರ್ವಸಹಕಾರ ನೀಡಿದ ರಾಜೀವ್ ಗಾಂಧಿ ಪಂಚಾಯತ್ ರಾಜ್ ಸಂಘಟನೆಯ ಜಿಲ್ಲಾಧ್ಯಕ್ಷರಾದ *ಶ್ರೀ ಕುಳಾಲು ಸುಭಾಶ್ಚಂದ್ರ ಶೆಟ್ಟಿಯವರ* ಸರ್ವ ಸಹಕಾರವೂ ಅಭಿವೃದ್ಧಿ ಕಾರ್ಯಕ್ಕೆ ಮತ್ತಷ್ಟು ಬಲ ತುಂಬಿ,ಅಭಿವೃದ್ಧಿಯ ಹರಿಕಾರರಾಗಿ ತನ್ನ ಚಾಕಚಕ್ಯತೆಯನ್ನು ಮೆರೆದಿದ್ದಾರೆ.ಇವರಿಗೆ ನಾಗರೀಕರ ಪರವಾಗಿ ಈ ಸಂದರ್ಭದಲ್ಲಿ ಅಭಿನಂದನೆ ಸಲ್ಲಿಸಲಾಯಿತು.
ನೂತನ ಕಾಂಕ್ರೀಟ್ ರಸ್ತೆಯನ್ನು ಗ್ರಾ.ಪಂಚಾಯತ್ ಅದ್ಯಕ್ಷರು ಉದ್ಘಾಟಿಸಿದರು.
ಈ ಅಭಿವೃದ್ಧಿ ಕಾರ್ಯದಲ್ಲಿ ಕೊಳ್ನಾಡು ಗ್ರಾಮ ಪಂಚಾಯತ್ ಅಧ್ಯಕ್ಷರಾದ *ಶ್ರೀ ಅಶ್ರಫ್ ಕೆ. ಸಾಲೆತ್ತೂರು* ಹಾಗೂ ಉಪಾಧ್ಯಕ್ಷರಾದ *ಕೆ.ಎ. ಅಸ್ಮ ಹಸೈನಾರ್ ತಾಳಿತ್ತನೂಜಿ*,ಯುವ ಕಾಂಗ್ರೇಸ್ ಮುಖಂಡ *ಹಪೀಝ್ ಸಾಲೆತ್ತೂರು* ಇವರ ಮತ್ತು ಸಹಕಾರಕ್ಕೂ ಸ್ಥಳೀಯ ನಾಗರೀಕರು ಕೃತಜ್ಞತೆ ಸಲ್ಲಿಸಿದರು.
ಈ ಸಂದರ್ಭದಲ್ಲಿ ಬೂತ್ ಸಮಿತಿಯ ಅದ್ಯಕ್ಷರಾದ *ಮಹಮ್ಮದ್ ರಪೀಕ್* ಕುಚ್ಚಿನಡ್ಕ,ಜಿಲ್ಲಾ ಅಲ್ಪಸಂಖ್ಯಾತ ಘಟಕದ ಉಪಾದ್ಯಕ್ಷರಾದ *ಲತೀಪ್ ಪರ್ತಿಪ್ಪಾಡಿ*,ಸಾಲೆತ್ತೂರು ಗ್ರಾಮ ಪಂಚಾಯತ್ ಮಾಜಿ ಅದ್ಯಕ್ಷರಾದ *ಹಸೈನಾರ್ ಮೆದು*
ಪಾಣೆಮಂಗಳೂರು ಬ್ಲಾಕ್ ಪ್ರಧಾನ ಕಾರ್ಯದರ್ಶಿ ಜಾನ್ ಡಿಸೋಜ
ಪಾಣೆಮಂಗಳೂರು ಕಿಸಾನ್ ಘಟಕದ ಅದ್ಯಕ್ಷರಾದ *ಶ್ರೀ ಸೋಮಶೇಖರ ಗೌಡ ತಾಳಿತ್ತನೂಜಿ*,ಕರ್ನಾಟಕ ಸರಕಾರ ದಕ್ಷಿಣ ಕನ್ನಡ ಜಾಗೃತಿ ಸಮಿತಿಯ ಸದಸ್ಯರಾದ *ಹಸೈನಾರ್ ತಾಳಿತ್ತನೂಜಿ*,*ಉಮ್ಮರ್*,*ಅಬೂಬಕ್ಕರ್* ಸೇರಿದಂತೆ ಸ್ಥಳೀಯ ಫಲಾನುಭವಿಗಳು ಉಪಸ್ಥಿತರಿದ್ದರು..



