ಹಲವು ಗಣ್ಯರು ಭಾಗಿ
ಗುಬ್ಬಿ:- ಗುಬ್ಬಿ ಪಟ್ಟಣದ ಹೊರ ಹೊಲಯದಲ್ಲಿನ ರಾಷ್ಟ್ರೀಯ ಹೆದ್ದಾರಿ ಸರ್ವಿಸ್ ರಸ್ತೆಗೆ ಹೊಂದಿಕೊಂಡಂತೆ ನೂತನವಾಗಿ ನಿರ್ಮಾಣವಾದ ಇಂಡಿಯನ್ ಆಯಿಲ್ ಕಂಪೆನಿಯ ಶ್ರೀ ರಾಘವೇಂದ್ರ ಪ್ಯೂಯಲ್ ಸೆಂಟರ್ ಅನ್ನು ಕೇಂದ್ರದ ರೈಲ್ವೆ ಸಚಿವ ವಿ ಸೋಮಣ್ಣ ಉದ್ಘಾಟಿಸಿದರು.
ಚೇಳೂರು ರಸ್ತೆಗೆ ಅಡ್ಡಲಾಗಿ ಬರುವ ರಾಷ್ಟ್ರೀಯ ಹೆದ್ದಾರಿ ಸರ್ವಿಸ್ ರಸ್ತೆ ಮೇಲ್ಸೆತುವೆ ಪಕ್ಕದಲ್ಲಿ ಆರಂಭವಾದ ಈ ಪೆಟ್ರೋಲ್ ಬಂಕ್ ಉದ್ಘಾಟಿಸಿ ಮಾತನಾಡಿದ ಕೇಂದ್ರದ ಜಲಶಕ್ತಿ ಸಚಿವ ವಿ.ಸೋಮಣ್ಣ ಹೆದ್ದಾರಿಯಲ್ಲಿ ಸಂಚರಿಸುವ ವಾಹನಗಳಿಗೆ ಅತ್ಯವಶ್ಯಕವಾದ ಪೆಟ್ರೋಲ್ ಮತ್ತು ಡಿಸೇಲ್ ದೂರೆಯುವ ವ್ಯವಸ್ಥೆ ಮಾಡಿರುವುದು ಪೂರಕವಾಗಿದೆ ಎಂದರು
ಚುತುಷ್ಪಥ ರಸ್ತೆ ಕಾಮಗಾರಿ ಈ ಹೆದ್ದಾರಿಗೆ ಅವಶ್ಯವಿತ್ತು ವಾಹನ ದಟ್ಟಣೆ ಹೆಚ್ಚಾದಂತೆ ಸುಗಮ ಸಂಚಾರಕ್ಕೆ ಅಡ್ಡಿಯಾಗಿತ್ತು ಈ ಜೊತೆ ನಗರ ಪಟ್ಟಣಗಳ ಹೊರ ವಲಯದಲ್ಲಿ ಸರ್ವಿಸ್ ರಸ್ತೆ ಬೃಹತ್ ವಾಹನ ಸಂಚಾರಕ್ಕೆ ಮಾರ್ಗವಾಗಿದೆ ಇಂತಹ ಮಾರ್ಗಗಳ ಮಧ್ಯೆ ಪೆಟ್ರೋಲ್ ಡೀಸೆಲ್ ಒದಗಿಸುವ ಕೆಲಸ ಈ ಬಂಕ್ ಮಾಡಲಿ ಎಂದು ಮಾಲೀಕ ಯತೀಶ್ ಅವರಿಗೆ ಶುಭ ಕೋರಿದರು
ಈ ಸಂದರ್ಭದಲ್ಲಿ ಬಿಜೆಪಿ ಜಿಲ್ಲಾಧ್ಯಕ್ಷ ರವಿ ಹೆಬ್ಬಾಕ , ಬಿಜೆಪಿ ಮುಖಂಡರಾದ ಎಸ್ ಡಿ ದಿಲೀಪ್ ಕುಮಾರ್, ಪಿ.ಬಿ ಚಂದ್ರಶೇಖರ ಬಾಬು, ಜೆಡಿಎಸ್ ಮುಖಂಡರಾದ ಕಳ್ಖಿಪಾಳ್ಯ ಲೋಕೇಶ್, ಜಿ.ಎನ್ ಬೆಟ್ಟಸ್ವಾಮಿ, ಜಿಡಿ ಸುರೇಶ ಗೌಡ, ಡಿಸಿಸಿ ಬ್ಯಾಂಕ್ ನಿರ್ದೇಶಕ ಹಾರನಹಳ್ಖಿ ಪ್ರಭಣ್ಣ, ಟಿಎಪಿಸಿಎಂಎಸ್ ಅಧ್ಯಕ್ಷ ಪಂಚಾಕ್ಷರಿ, ಎಚ್ ಟಿ ಬೈರಪ್ಪ, ಎಸ್ ವಿಜಯಕುಮಾರ್, ಪಪಂ ಸದಸ್ಯರಾದ ಮಹಮ್ಮದ್ ಸಾದಿಕ್,ಜಿ.ಆರ್ ಶಿವಕುಮಾರ್, ಬಂಕ್ ಮಾಲೀಕ ಚನ್ನಶೆಟ್ಟಿಹಳ್ಳಿ, ಯತೀಶ್, ಚನ್ನಬಸವಯ್ಯ, ಇತರರು ಇದ್ದರು



