Subscribe to Updates
Get the latest creative news from FooBar about art, design and business.
Author: PrasakthaNews
ರಮನಾಥ್ ರೈ ಅವರನ್ನು ಸೋಲಿಸಿದ್ದು ನೋವು ತರಿಸಿದೆ ಬಂಟ್ವಾಳ:- 2028ಕ್ಕೆ ನಾವೇ ಅಧಿಕಾರಕ್ಕೆ ಬಂದೇ ಬರ್ತಿವಿ ನಾವು ಅಧಿಕಾರದಲ್ಲಿದ್ದಾಗ ಕಂಬಳಕ್ಕೆ ಏನು ಪ್ರೋತ್ಸಾಹ ನೀಡಬೇಕೋ ಅದಕ್ಕೆ ಪ್ರೋತ್ಸಾಹ ನೀಡುತ್ತೇವೆ ಕಂಬಳಕ್ಕೆ ಹಣಕಾಸಿನ ನೆರವನ್ನೂ ಕೊಡ್ತೇವೆ ರಮನಾಥ್ ರೈ ಅವರನ್ನು ಸೋಲಿಸಿದ್ದು ಬೇಸರ ತಂದಿದೆ ಮುಂದಿನ ಚುನಾವಣೆಯಲ್ಲಿ ರೈ ಅವರೇ ಅಭ್ಯರ್ಥಿಯಾಗ್ತಾರೆ ಅವರನ್ನು ಮತ್ತೆ ಗೆಲ್ಲಿಸಿ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದ್ದಾರೆ ಬಂಟ್ವಾಳದ ನಾವೂರು ಕೊಡಿಬೈಲು ಎಂಬಲ್ಲಿ ಮಾಜಿ ಸಚಿವ ಬಿ ರಮನಾಥ್ ರೈ ನೇತೃತ್ವದಲ್ಲಿ ಶನಿವಾರ ನಡೆದ ಮೂಡೂರು ಪಡೂರು ಜೋಡುಕರೆ ಬಂಟ್ವಾಳ ಕಂಬಳದ ಸಭಾ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು ಬೆಂಜನಪದವಿನಲ್ಲಿ ಹತ್ತು ಕೋಟಿ ರೂ ಮಂಜುರಾಗಿತ್ತು ಅದನ್ನು ಅನುಷ್ಟಾನ ಮಾಡಲು ಸಾಧ್ಯವಾಗಿಲ್ಲ ಮತ್ತೊಮ್ಮೆ ಕ್ರೀಡಾಂಗಣ ನಿರ್ಮಾಣಕ್ಕೆ ನನಗೆ ಅವಕಾಶವನ್ನು ಮಾಡಿಕೊಡಬೇಕು ಎಂದು ಪ್ರಾಸ್ತವಿಕವಾಗಿ ಮಾತನಾಡಿದ ಮಾಜಿ ಸಚಿವ ರಮನಾಥ್ ರೈ ಮನವಿ ಮಾಡಿದರು ಇದಕ್ಕೆ ಸ್ಪಂದಿಸಿದ ಸಿಎಂ ಈ ಬಾರಿ ಕ್ರೀಡಾಂಗಣ ನಿರ್ಮಾಣಕ್ಕೆ ನೆರವು…
ಕರ್ನಾಟಕ ಸರ್ಕಾರ ಮಂಡಿಸಿದ ಇಂದಿನ ಬಜೆಟ್ ಜನಪರ ಮತ್ತು ಅಭಿವೃದ್ಧಿ ಪರವಾಗಿದೆ. ರೈತರು, ಮಹಿಳೆಯರು, ಯುವಕರು ಹಾಗೂ ಮಧ್ಯಮ ವರ್ಗದ ಜನರಿಗೆ ನೀಡಿದ ಯೋಜನೆಗಳು ಸ್ವಾಗತಾರ್ಹವಾಗಿವೆ. ಜೊತೆಗೆ ಕರಾವಳಿ ಪ್ರದೇಶದ ಪ್ರವಾಸೋದ್ಯಮ, ಮೀನುಗಾರಿಕೆ, ಪೊಲೀಸ್ ಠಾಣೆಗಳ ಬಲವರ್ಧನೆ, ಕೃಷಿ, ಅರಣ್ಯ, ಆರೋಗ್ಯ, ಮುಜರಾಯಿ ಹಾಗೂ ಅಲ್ಪಸಂಖ್ಯಾತರ ಅಭಿವೃದ್ಧಿಗೆ ,ವಸತಿ ,ಶಿಕ್ಷಣ ಕ್ಷೇತ್ರಕ್ಕೆ ಸೇರಿದಂತೆ ಎಲ್ಲಾ ವರ್ಗದ ಸಮುದಾಯದ ಕಲ್ಯಾಣಕ್ಕಾಗಿ ವಿಶೇಷ ಆದ್ಯತೆ ಸಂತಸ ಸಂಗತಿಯಾಗಿದೆ. ರಾಜ್ಯದ ಸಮಗ್ರ ಹಾಗು ಕರಾವಳಿ ಅಭಿವೃದ್ಧಿಗೆ ಈ ಬಜೆಟ್ ಮಹತ್ವದ ಹೆಜ್ಜೆಯಾಗಿದೆ. – ಬಿ. ರಮಾನಾಥ ರೈ ಕೆಪಿಸಿಸಿ ಉಪಾಧ್ಯಕ್ಷರು ಹಾಗೂ ಮಾಜಿ ಸಚಿವರು, ಕರ್ನಾಟಕ ಸರ್ಕಾರ
ಆಡ್ಯಾರ್‌ನ Barakah International School and College ಸಂಸ್ಥೆಗೆ ಹೆಮ್ಮೆಯ ಕ್ಷಣ ಒಲಿದಿದೆ. ಸಂಸ್ಥೆಯ ಪದವಿ ಕಾಲೇಜಿನ ವಿದ್ಯಾರ್ಥಿನಿ ಐಷಾ ಅವರು Mangalore Universityಯ ಬಿ.ಎ. ವಿಭಾಗದಲ್ಲಿ 5ನೇ ರ‍್ಯಾಂಕ್ ಗಳಿಸುವ ಮೂಲಕ ಸಂಸ್ಥೆಯ ಕೀರ್ತಿಪತಾಕೆಯನ್ನು ಮತ್ತೊಮ್ಮೆ ಎತ್ತಿಹಿಡಿದಿದ್ದಾರೆ. ಐಷಾ ಅವರು ಅಶ್ರಫ್ ಅಲಿ ಹಾಗೂ ರಮ್ಲತ್ ದಂಪತಿಯ ಪುತ್ರಿಯಾಗಿದ್ದು, ಅಲ್ತಾಫ್ ಉಮರ್ ಅವರ ಪತ್ನಿಯಾಗಿದ್ದಾರೆ. ಈಗಾಗಲೇ ಶ್ರೇಷ್ಠ ಶೈಕ್ಷಣಿಕ ಸಾಧನೆ ಮೆರೆದಿರುವ ಅವರು, ಮಂಗಳೂರು ವಿಶ್ವವಿದ್ಯಾಲಯದಲ್ಲೇ ಇಂಗ್ಲಿಷ್ ಸಾಹಿತ್ಯದಲ್ಲಿ ಸ್ನಾತಕೋತ್ತರ ಪದವಿಯನ್ನು(M.A) ಅಭ್ಯಾಸಿಸುತ್ತಿದ್ದಾರೆ. ಅವರ ಪರಿಶ್ರಮ, ನಿಯಮಿತ ಅಧ್ಯಯನ ಹಾಗೂ ಗುರಿ ಸಾಧನೆಗೆ ಹೊಂದಿರುವ ನಿಷ್ಠೆಯೇ ಈ ಸಾಧನೆಗೆ ಬೆನ್ನೆಲುಬಾಗಿದೆ. ಬರಕಾ ಪದವಿ ಕಾಲೇಜಿನಲ್ಲಿ ವಿದ್ಯಾಭ್ಯಾಸ ಮಾಡುತ್ತಿರುವ ಅವಧಿಯಲ್ಲಿಯೇ ಐಷಾ ಅವರು ತಮ್ಮ ಪ್ರತಿಭೆ, ಶಿಸ್ತು ಮತ್ತು ಅಧ್ಯಯನಾಸಕ್ತಿಯಿಂದ ಶಿಕ್ಷಕರ ಮೆಚ್ಚುಗೆ ಗಳಿಸಿದ್ದರು. ವಿಶ್ವವಿದ್ಯಾಲಯ ಮಟ್ಟದಲ್ಲಿ ರ‍್ಯಾಂಕ್ ಗಳಿಸಿರುವುದು ಅವರ ವೈಯಕ್ತಿಕ ಸಾಧನೆಯಷ್ಟೇ ಅಲ್ಲದೆ, ಸಂಸ್ಥೆಯ ಶೈಕ್ಷಣಿಕ ಗುಣಮಟ್ಟಕ್ಕೂ ಸಾಕ್ಷಿಯಾಗಿದೆ. ಬರಕಾ ಇಂಟರ್‌ನ್ಯಾಷನಲ್ ಶಾಲೆ ಮತ್ತು…
ಬಂಟ್ವಾಳ : ನೇರಳಕಟ್ಟೆಯ ಯಂಗ್ ಚಾಲೆಂಜರ್ಸ್ ಕ್ರೀಡಾ ಮತ್ತು ಸಾಂಸ್ಕೃತಿಕ ಸಂಘ ಇದರ ವತಿಯಿಂದ ವೈ.ಸಿ.ಜಿ.2026 ಹೊನಲು ಬೆಳಕಿನ ಕ್ರೀಡಾ ಕೂಟವು ಶನಿವಾರ ಸಂಜೆ ನೇರಳಕಟ್ಟೆಯಲ್ಲಿ ನಡೆಯಿತು. ಕಾರ್ಯಕ್ರಮವನ್ನು ಪತ್ರಕರ್ತ ಲತೀಫ್ ನೇರಳಕಟ್ಟೆ ಉದ್ಘಾಟಿಸಿದರು. ವೈಸಿಜಿ ಅದ್ಯಕ್ಷ ಉಪೇಂದ್ರ ಆಚಾರ್ಯ ಅಧ್ಯಕ್ಷತೆ ವಹಿಸಿದ್ದರು. ಕ್ರೀಡಾ ಕೂಟದಲ್ಲಿ ಭಾಗವಹಿಸಿದ್ದ ಮಾಜಿ ಸಚಿವ ಬಿ.ರಮಾನಾಥ ರೈ, ಬಂಟ್ವಾಳ ಶಾಸಕ ರಾಜೇಶ್ ನಾಯ್ಕ್, ಅರುಣ್ ಕುಮಾರ್ ಪುತ್ತಿಲ, ನೆಟ್ಲಮುಡ್ನೂರು ಗ್ರಾಮ ಪಂಚಾಯತ್ ಮಾಜಿ ಅಧ್ಯಕ್ಷ ಸತೀಶ್ ಪೂಜಾರಿ, ಸದಸ್ಯ ಶ್ರೀಧರ್ ರೈ, ಯುವ ಮುಖಂಡ ನಿರಂಜನ್ ರೈ ಶುಭ ಹಾರೈಸಿದರು. ಸಮಾರೋಪ ಸಮಾರಂಭದ ಅಧ್ಯಕ್ಷತೆ ವಹಿಸಿದ್ದ ನೇರಳಕಟ್ಟೆ ಡಿ.ಕೆ.ಶ್ರಧ್ಧಾ ಕೇಂದ್ರದ ಡಿ.ಕೆ.ಸ್ವಾಮೀಜಿ ವಿಜೇತರಿಗೆ ಬಹುಮಾನ ವಿತರಿಸಸಿದರು. ಯುವ ಮುಖಂಡ ಫಾರೂಕ್ ಬಯಬೆ, ನೆಟ್ಲಮುಡ್ನೂರು ಗ್ರಾಮ ಪಂಚಾಯತ್ ಮಾಜಿ ಸದಸ್ಯರಾದ ಅಶೋಕ್ ರೈ, ಧನುಂಜಯ ಗೌಡ, ಪ್ರೇಮಾ ಜಯಕರ ದೇವಾಡಿಗ, ನೇರಳಕಟ್ಟೆ ಸಿ.ಎ.ಬೇಂಕ್ ಉಪಾಧ್ಯಕ್ಷ ಡಿ.ತನಿಯಪ್ಪ ಗೌಡ, ನಾಟಿ ವೈದ್ಯ ಗಂಗಾಧರ ಪಂಡಿತ್,…
ಕಾಡುಮಠ ವಾರ್ಡಿನ ಕುಚ್ಚಿನಡ್ಕ ನಾಗರಿಕರ ಬಹುಕಾಲದ ಬೇಡಿಕೆಗೆ ಸ್ಪಂದನೆ ದೊರೆತಿದ್ದು, ಮಳೆಗಾಲ ಬಂತೆಂದರೆ ನಡೆದಾಡುವುದಕ್ಕೂ ಕಷ್ಟವಾಗುತ್ತಿದ್ದ ಮಣ್ಣಿನ ರಸ್ತೆ ಇದೀಗ ಕಾಂಕ್ರೀಟೀಕರಣಗೊಂಡು ಸುಗಮ ವಾಹನ ಸಂಚಾರಕ್ಕೆ ದಾರಿ ಮಾಡಿಕೊಟ್ಟಿದೆ. ಈ ಅಭಿವೃದ್ಧಿ ಕಾಮಗಾರಿ ಸ್ಥಳೀಯರ ದಿನನಿತ್ಯದ ಜೀವನಕ್ಕೆ ದೊಡ್ಡ ಮಟ್ಟದ ನೆರವು ದೊರೆತಿದೆ. ಗ್ರಾಮಾಭಿವೃದ್ಧಿಯತ್ತ ಇನ್ನೊಂದು ಮಹತ್ವದ ಹೆಜ್ಜೆಯಾಗಿದೆ. ಕೊಳ್ನಾಡು ಗ್ರಾಮದ ಕಾಡುಮಠ ವಾರ್ಡಿನ ಅಗರಿ–ಕುಚ್ಚಿನಡ್ಕ ರಸ್ತೆಯ ಕಾಂಕ್ರೀಟೀಕರಣಕ್ಕಾಗಿ ₹5 ಲಕ್ಷ ಅನುದಾನವನ್ನು ವಿನಿಯೋಗಿಸಿ ಕಾಮಗಾರಿ ಅನುಷ್ಠಾನಗೊಳಿಸಿದ ಜನಪ್ರಿಯ ವಿಧಾನಪರಿಷತ್ ಶಾಸಕರಾದ *ಶ್ರೀ ಮಂಜುನಾಥ ಭಂಡಾರಿ* ಅವರ ಕಾರ್ಯ ಶ್ಲಾಘನೀಯವಾಗಿದೆ. ಈ ಅನುದಾನಕ್ಕೆ ಸರ್ವಸಹಕಾರ ನೀಡಿದ ರಾಜೀವ್ ಗಾಂಧಿ ಪಂಚಾಯತ್ ರಾಜ್ ಸಂಘಟನೆಯ ಜಿಲ್ಲಾಧ್ಯಕ್ಷರಾದ *ಶ್ರೀ ಕುಳಾಲು ಸುಭಾಶ್ಚಂದ್ರ ಶೆಟ್ಟಿಯವರ* ಸರ್ವ ಸಹಕಾರವೂ ಅಭಿವೃದ್ಧಿ ಕಾರ್ಯಕ್ಕೆ ಮತ್ತಷ್ಟು ಬಲ ತುಂಬಿ,ಅಭಿವೃದ್ಧಿಯ ಹರಿಕಾರರಾಗಿ ತನ್ನ ಚಾಕಚಕ್ಯತೆಯನ್ನು ಮೆರೆದಿದ್ದಾರೆ.ಇವರಿಗೆ ನಾಗರೀಕರ ಪರವಾಗಿ ಈ ಸಂದರ್ಭದಲ್ಲಿ ಅಭಿನಂದನೆ ಸಲ್ಲಿಸಲಾಯಿತು. ನೂತನ ಕಾಂಕ್ರೀಟ್ ರಸ್ತೆಯನ್ನು ಗ್ರಾ.ಪಂಚಾಯತ್ ಅದ್ಯಕ್ಷರು ಉದ್ಘಾಟಿಸಿದರು. ಈ ಅಭಿವೃದ್ಧಿ ಕಾರ್ಯದಲ್ಲಿ…
ಕರ್ನಾಟಕ—ಕನ್ನಡದ ಉಸಿರು, ಸಂಸ್ಕೃತಿ ಮತ್ತು ಬದುಕಿನ ನೆಲೆ. ಆದರೆ ಇಂದು ಈ ಮಣ್ಣಿನಲ್ಲೇ ಕೇಳಬೇಕಾದ ಪ್ರಶ್ನೆಗಳು ಅತ್ಯಂತ ಗಂಭೀರವಾಗಿವೆ. ಒಂದು ಕಡೆ ಆಂಗ್ಲ ಮಾಧ್ಯಮದ ಹೆಸರಿನಲ್ಲಿ ಬೃಹತ್ ಗಾಜಿನ ಗೋಡೆಗಳ ಕಟ್ಟಡಗಳು ತಲೆ ಎತ್ತುತ್ತಿದ್ದರೆ, ಇನ್ನೊಂದೆಡೆ ಕನ್ನಡದ ಅಸ್ಮಿತೆಯಾದ ಸರ್ಕಾರಿ ಶಾಲೆಗಳು ಮೂಲಸೌಕರ್ಯವಿಲ್ಲದೆ ಸೊರಗುತ್ತಿವೆ. ೧. ಕರ್ನಾಟಕದಲ್ಲಿಲ್ಲದಿದ್ದರೆ ಮತ್ಯಾವ ಮೂಲೆಯಲ್ಲಿ ಕನ್ನಡ? ನಾವು ಇಂದು ಎದುರಿಸುತ್ತಿರುವ ಅತ್ಯಂತ ಆತಂಕಕಾರಿ ಪ್ರಶ್ನೆ ಇದು: “ಕರ್ನಾಟಕದಲ್ಲಿ ಕನ್ನಡ ಕಲಿಸದಿದ್ದರೆ, ಕನ್ನಡಿಗರು ಕನ್ನಡ ಮಾತನಾಡದಿದ್ದರೆ, ಪ್ರಪಂಚದ ಮತ್ಯಾವ ಮೂಲೆಯಲ್ಲಿ ಕನ್ನಡ ಮಾತನಾಡಲು ಸಾಧ್ಯ? ಫ್ರಾನ್ಸ್‌ನಲ್ಲಿ ಫ್ರೆಂಚ್, ಜರ್ಮನಿಯಲ್ಲಿ ಜರ್ಮನ್ ಕಲಿಸುವುದು ಅಲ್ಲಿನ ಹೆಮ್ಮೆ. ಆದರೆ ನಮ್ಮಲ್ಲಿ ಕನ್ನಡ ಕಲಿಸುವುದು ‘ಹಿಂದುಳಿದಿರುವಿಕೆ’ಯ ಸಂಕೇತವಾಗಿ ಮಾರ್ಪಡುತ್ತಿರುವುದು ದುರಂತ. ನಮ್ಮ ನೆಲದಲ್ಲೇ ನಾವು ಅನ್ಯ ರಾಜ್ಯದವರಿಗೆ ಕನ್ನಡ ಕಲಿಸುವ ಬದ್ಧತೆ ತೋರದಿದ್ದರೆ ಮತ್ತು ನಮ್ಮ ಮಕ್ಕಳನ್ನು ಕನ್ನಡದಿಂದ ದೂರವಿಟ್ಟರೆ, ಮುಂದಿನ ತಲೆಮಾರಿಗೆ ಈ ಭಾಷೆ ಕೇವಲ ಇತಿಹಾಸದ ಪುಟಗಳಿಗೆ ಸೀಮಿತವಾಗುತ್ತದೆ. ಕರ್ನಾಟಕದ ಪ್ರತಿ ಇಂಚು ಮಣ್ಣಿನಲ್ಲೂ ಕನ್ನಡದ ಧ್ವನಿ ಮೊಳಗದಿದ್ದರೆ,…
ಪಕ್ಷದ ನಿಷ್ಟಾವಂತ ಕಾರ್ಯಕರ್ತನಿಗೆ ಒಲಿದ ಅವಕಾಶ* ಕೋಳ್ನಾಡು: ದಕ್ಷಿಣ ಕನ್ನಡ ಜಿಲ್ಲಾ ಕಾಂಗ್ರೆಸ್ ಪ್ರಚಾರ ಸಮಿತಿಯ (ಗ್ರಾಮಾಂತರ) ವತಿಯಿಂದ ಪಾಣೆಮಂಗಳೂರು ಬ್ಲಾಕ್ ಕಾಂಗ್ರೆಸ್ ಪ್ರಚಾರ ಸಮಿತಿಯ ಅಧ್ಯಕ್ಷರನ್ನಾಗಿ ಕೋಳ್ನಾಡು ಗ್ರಾಮದ ಕಾಂಗ್ರೆಸ್ ಮುಖಂಡರಾದ ಶ್ರೀ ಎ.ಬಿ. ಅಬ್ದುಲ್ಲಾ ಅವರನ್ನು ನೇಮಕ ಮಾಡಲಾಗಿದೆ. ಮಾಜಿ ಮಂತ್ರಿಗಳಾದ ಶ್ರೀ ಬಿ. ರಮನಾಥ್ ರೈ ಅವರ ಶಿಫಾರಸಿನ ಮೇರೆಗೆ ಹಾಗೂ ಕೆಪಿಸಿಸಿ ಪ್ರಚಾರ ಸಮಿತಿಯ ಅಧ್ಯಕ್ಷರಾದ ವಿನಯ ಕುಮಾರ್ ಸೊರಕೆಯವರ ಆದೇಶದಂತೆ, ಜಿಲ್ಲಾ ಕಾಂಗ್ರೆಸ್ ಪ್ರಚಾರ ಸಮಿತಿ ಅಧ್ಯಕ್ಷರಾದ ಎಚ್. ಮಹಮ್ಮದ್ ಆಲಿ ಅವರು ಈ ನೇಮಕಾತಿ ಆದೇಶವನ್ನು ನೀಡಿದ್ದಾರೆ. *ವ್ಯಕ್ತಿ ಪರಿಚಯ*: ಪ್ರಸ್ತುತ ಸೇವೆ: ಎ.ಬಿ. ಅಬ್ದುಲ್ಲಾ ಅವರು ಪ್ರಸ್ತುತ ಬಂಟ್ವಾಳ ತಾಲೂಕು ಕೆಡಿಪಿ (KDP) ಸದಸ್ಯರಾಗಿ ಹಾಗೂ ಕೋಳ್ನಾಡು ಗ್ರಾಮ ಪಂಚಾಯತ್ ಸದಸ್ಯರಾಗಿ ಸೇವೆ ಸಲ್ಲಿಸುತ್ತಿದ್ದಾರೆ. ಅನುಭವ: ಇವರು ವಿಟ್ಲ ಪಟ್ನೂರು ವ್ಯವಸಾಯ ಸೇವಾ ಸಹಕಾರಿ ಬ್ಯಾಂಕಿನ ಮಾಜಿ ನಿರ್ದೇಶಕರಾಗಿ ಹಾಗೂ ದಕ್ಷಿಣ ಕನ್ನಡ ಜಿಲ್ಲಾ ವಕ್ಫ್…
ಐತಿಹಾಸಿಕ ಕಾರ್ಯಕ್ರಮದಲ್ಲಿ 3500 ಕ್ಕಿಂತಲೂ ಮಿಕ್ಕಿದ ಜನಸಾಗರ ಪುಣಚ:-ರೈ ಎಸ್ಟೇಟ್ ಎಜುಕೇಶನಲ್ &ಚಾರಿಟೇಬಲ್ ಟ್ರಸ್ಟ್ ವತಿಯಿಂದ ಟ್ರೆಸ್ಟ್ ನ ಪ್ರವರ್ತಕ ಶಾಸಕ ಅಶೋಕ್ ಕುಮಾರ್ ರೈ ಅವರ ನೇತೃತ್ವದಲ್ಲಿ ಅಶೋಕ ಜನಮನ 2025 ಕಾರ್ಯಕ್ರಮದ ಉಡುಗೊರೆ ವಿತರಣೆ ಕಾರ್ಯಕ್ರಮ ಪುಣಚ ಪರಿಯಾಲ್ತಡ್ಕ ಶಾಲಾ ಮೈದಾನದಲ್ಲಿ ಪೆ.15ರಂದು ನಡೆಯಿತು. ಕಾರ್ಯಕ್ರಮದಲ್ಲಿ ಸುಮಾರು 3500 ಕ್ಕಿಂತ ಮಿಕ್ಕಿದ ಜನರು ಭಾಗವಹಿಸಿದರು ಕಾರ್ಯಕ್ರಮದಲ್ಲಿ ವಿವಿಧ ಕ್ಷೇತ್ರದಲ್ಲಿ ಸಾಧನೆಗೈದ ಗ್ರಾಮದ ಇಬ್ಬರನ್ನು ಶಾಸಕರು ವೇದಿಕೆಯಲ್ಲಿ ಸನ್ಮಾನಿಸಿದರು ಕಾರ್ಯಕ್ರಮದಲ್ಲಿ ಮಾತನಾಡಿದ ಶಾಸಕ ಅಶೋಕ್ ರೈ ಅಶೋಕ ಜನಮನ ಉಡುಗೊರೆ ವಿತರಿಸುವ ಮುನ್ನ ಶಾಸಕರಾದ ಅಶೋಕ್ ಕುಮಾರ್ ರೈ ಅವರು 2025 ಅ 20 ರಂದು ಅಶೋಕ ಜನಮನ ಕಾರ್ಯಕ್ರಮದಲ್ಲಿ ಜನಸಂದಣಿ ಹಾಗೂ ಮಳೆಯ ಅಡಚಣೆಯಿಂದಾಗಿ ಹಲವಾರು ಮಂದಿ ಉಡುಗೊರೆ ಸಿಗದೇ ವಂಚಿತರಾಗಿದ್ದಾರೆ.ಎಂಬ ವಿಷಾಧವಿದೆ ಈ ನಿಟ್ಟಿನಲ್ಲಿ ಪ್ರತಿ ಗ್ರಾಮ ವ್ಯಾಪ್ತಿಯಲ್ಲಿ ಉಡುಗೊರೆಯನ್ನು ವಿತರಿಸುತ್ತೇನೆ ಎಂದರು ಕಾರ್ಯಕ್ರಮದಲ್ಲಿ ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಎಂ.ಎಸ್ ಮಹಮ್ಮದ್ ಸಂದೋಭೋರ್ಚಿತವಾಗಿ…
ಬಂಟ್ವಾಳ : ನೆಟ್ಲಮುಡ್ನೂರು ಗ್ರಾಮ ಪಂಚಾಯತ್ ಅಭಿವೃದ್ಧಿ ಅಧಿಕಾರಿ ಮತ್ತು ಸಿಬ್ಬಂದಿಗಳ ವತಿಯಿಂದ 2021-26 ನೇ ಸಾಲಿನ ಸದಸ್ಯರಿಗೆ ಗೌರವಾರ್ಪಣೆ ಕಾರ್ಯಕ್ರಮ ಪಂಚಾಯತ್ ಸಭಾಂಗಣದಲ್ಲಿ ನಡೆಯಿತು. ಪಂಚಾಯತ್ ಅಭಿವೃದ್ಧಿ ಅಧಿಕಾರಿ ಅನುಷಾ ಅವರು ಮಾತನಾಡಿ, ಪಂಚಾಯತ್ ಗೆ ಬಂದಂತಹ ಅನುದಾನಗಳನ್ನು ಸದಸ್ಯರು ತಮ್ಮ ವಾರ್ಡ್ ಗಳ ಅಭಿವೃದ್ಧಿಗೆ ಸಮರ್ಪಕವಾಗಿ ಬಳಸಿಕೊಂಡಿದ್ದಾರೆ. ಸದಾ ಕ್ರಿಯಾಶೀಲರಾಗಿ ಗ್ರಾಮದ ಅಭಿವೃದ್ಧಿಯಲ್ಲಿ ತೊಡಗಿಸಿಕೊಂಡಿದ್ದಾರೆ ಎಂದ ಅವರು ಸರ್ವ ಸದಸ್ಯರ ಸಹಕಾರವನ್ನು ಸ್ಮರಿಸಿದರು. ಗೌರವಾರ್ಪಣೆ ಸ್ವೀಕರಿಸಿದ ಪಂಚಾಯತ್ ಅಧ್ಯಕ್ಷೆ ಸಮಿತಾ ಡಿ ಪೂಜಾರಿ, ಉಪಾಧ್ಯಕ್ಷ ಸಚ್ಚಿದಾನಂದ ಪೂಜಾರಿ, ಸದಸ್ಯರಾದ ಅಬ್ದುಲ್ ಲತೀಫ್, ಶ್ರೀಧರ ರೈ, ಅಶೋಕ್ ರೈ ಮಾತನಾಡಿ ಪಂಚಾಯತ್ ಅಭಿವೃದ್ಧಿ ಅಧಿಕಾರಿ ಹಾಗೂ ಸಿಬ್ಬಂದಿಗಳು ಉತ್ತಮ ರೀತಿಯಲ್ಲಿ ಕರ್ತವ್ಯ ನಿರ್ವಹಿಸುವ ಮೂಲಕ ಉತ್ತಮ ಸಹಕಾರ ನೀಡಿದ್ದೀರಾ, ಮುಂದೆಯೂ ನಿಮ್ಮ ಕಾರ್ಯಕ್ಷಮತೆ ಇದೇ ರೀತಿ ಮುಂದುವರಿಯಲಿ, ನಮ್ಮ ಅಧಿಕಾರಾವಧಿಯಲ್ಲಿ ನಿಮ್ಮ ಮನಸ್ಸಿಗೆ ನೋವು ತರುವಂತಹ ವಿಚಾರಗಳು ನಡೆದಿದ್ದಲ್ಲಿ ಕ್ಷಮೆಯಿರಲಿ ಎಂದರು. ಸದಸ್ಯರಾದ ಧನುಂಜಯ ಗೌಡ, ಪ್ರೇಮಾ,…
ಮಂಗಳೂರು: *ಕನ್ನಡ ಮಾಧ್ಯಮ ಶಾಲೆಗಳ ಮೌಲ್ಯವನ್ನು ಗುರುತಿಸಬೇಕು ಮತ್ತು ಅವುಗಳನ್ನು ಉಳಿಸಲು ಎಲ್ಲರೂ ಒಗ್ಗೂಡಿ ಸಾಮೂಹಿಕ ಪ್ರಯತ್ನ ನಡೆಸುವ ಅಗತ್ಯವಿದೆ ಎಂದು ಮಾಜಿ ಸಚಿವರಾದ ರಮಾನಾಥ್ ರೈ ಅವರು ಒತ್ತಿ ಹೇಳಿದರು* ಮಂಗಳೂರಿನ ಟೌನ್ ಹಾಲಿನಲ್ಲಿ ಬುಧವಾರ ನಡೆದ ‘ಕನ್ನಡ ಶಾಲೆ ಉಳಿಸಿ ಬೆಳೆಸಿ ಅಭಿಯಾನ’ದ ರಾಜ್ಯ ಸಮಾವೇಶವನ್ನು ಉದ್ಘಾಟಿಸಿ ಅವರು ಮಾತನಾಡುತ್ತಿದ್ದರು. ಕರ್ನಾಟಕ ರಾಜ್ಯ ಕನ್ನಡ ಶಾಲೆಗಳ ಉಳಿಸಿ ಮತ್ತು ಬೆಳೆಸಿ ಅಭಿಯಾನ ಸಮಿತಿಯ 75ನೇ ಆಚರಣೆಯ ಅಂಗವಾಗಿ ಈ ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು. ಪ್ರತಿಯೊಬ್ಬರಿಗೂ ಶಿಕ್ಷಣ ದೊರೆಯುವಂತೆ ಖಚಿತಪಡಿಸಿಕೊಳ್ಳಲು ನಿರಂತರ ಪ್ರಯತ್ನಗಳು ಮುಂದುವರಿಯಬೇಕು ಎಂದು ಅವರು ಪ್ರತಿಪಾದಿಸಿದರು. ಅಭಿಯಾನದ ಉದ್ದೇಶಗಳನ್ನು ಸಾಧಿಸಲು ಸರಿಯಾದ ಯೋಜನೆಯ ಅಗತ್ಯವಿದೆ ಮತ್ತು ಎಲ್ಲರಿಗೂ ಸಮಾನ ಶಿಕ್ಷಣದ ಅವಕಾಶಗಳನ್ನು ಖಾತರಿಪಡಿಸಲು ಶ್ರಮಿಸಬೇಕು ಎಂದು ಅವರು ತಿಳಿಸಿದರು. ಶ್ರೀಮಂತ ಕುಟುಂಬಗಳ ಮಕ್ಕಳು ಹೆಚ್ಚಾಗಿ ಇಂಗ್ಲಿಷ್ ಮಾಧ್ಯಮ ಶಾಲೆಗಳಿಗೆ ದಾಖಲಾಗುತ್ತಿರುವುದರಿಂದ, ಕನ್ನಡ ಮಾಧ್ಯಮ ಶಾಲೆಗಳನ್ನು ಉಳಿಸುವ ಜವಾಬ್ದಾರಿ ಈಗ ಪ್ರಮುಖವಾಗಿ ಸಮಾಜದ ಬಡ ಮತ್ತು ಹಿಂದುಳಿದ ವರ್ಗಗಳ ಮೇಲಿದೆ…


