ತೇಜಸ್ವಿಯಾದವ್ ಮುಖ್ಯಮಂತ್ರಿ ಅಭ್ಯರ್ಥಿ ಎಂದು ಘೋಷಿಸಿದ ಮಹಾಘಟಬಂಧನ್
ಪಾಟ್ನ:- ಬಿಹಾರದ ವಿಪಕ್ಷ ಮಹಾಘಟಬಂಧನ್ ಮೈತ್ರಿಕೂಟವು ತೇಜಸ್ವಿ ಯಾದವ್ ಅವರನ್ನು ಮುಖ್ಯಮಂತ್ರಿ ಅಭ್ಯರ್ಥಿಯನ್ನಾಗಿ ಮಾಡುವ ಬಗ್ಗೆ ಗುರುವಾರ ನಡೆದ ಮಹತ್ವದ ಸಭೆಯಲ್ಲಿ ಮೈತ್ರಿಕೂಟದ ಘಟಕ ಪಕ್ಷಗಳು ತೇಜಸ್ವಿ ಅವರ ನಾಯಕತ್ವವನ್ನು ಅನುಮೋದಿಸಿದ್ದು ಅವರ ಉಮೇದುವಾರಿಕೆಯನ್ನು ಅಧಿಕೃತವಾಗಿ ಘೋಷಿಸಲಾಗಿದೆ
ಪಾಟ್ನಾದಲ್ಲಿ ಗುರುವಾರ ನಡೆದ ಬಹು ನಿರೀಕ್ಷಿತ ಮಹಾಘಟಬಂಧನ್ ಜಂಟಿ ಪತ್ರಿಕಾಗೋಷ್ಠಿಯಲ್ಲಿ ನಾಯಕತ್ವದ ಘೋಷಣೆ ಮಾಡಲಾಗಿದೆ ತೇಜಸ್ವಿಯವರ ನಾಯಕತ್ವದಲ್ಲಿ ಮೈತ್ರಿಕೂಟವು ಚಲೋ ಬಿಹಾರ ಬದಲೇ ಬಿಹಾರ ಎಂಬ ಘೋಷಣೆಯೊಂದಿಗೆ ಪ್ರಚಾರ ಮಾಡಲು ತೀರ್ಮಾನ ಕೈಗೊಂಡಿದೆ
ವಿಧಾನ ಸಭೆಯ 243 ಸ್ಥಾನಗಳಲ್ಲಿ ಆರ್ಜೆಡಿ 143 ಮತ್ತು ಕಾಂಗ್ರೆಸ್ 61 ಸ್ಥಾನಗಳಲ್ಲಿ ಸ್ಪರ್ಧಿಸುತ್ತಿವೆ ಆದರೆ ಎರಡು ಪಕ್ಷಗಳು ಕನಿಷ್ಠ ಐದು ಕ್ಷೇತ್ರಗಳಲ್ಲಿ ಸ್ನೇಹಪರ ಹೋರಾಟವನ್ನೂ ಮಾಡುತ್ತಿರುವುದು ಗೊಂದಲಕ್ಕೆ ಸಾಕ್ಷಿಯಾಗಿದೆ
ಜಾತಿ ಲೆಕ್ಕಾಚಾರವನ್ನು ಮಾಡಿ ಹೊಸ ರಣತಂತ್ರ ಮಾಡಿದ ವಿಪಕ್ಷ ಮೈತ್ರಿಕೂಟ ಮಹಾಘಟಬಂಧನ್ ಉಪಮುಖ್ಯಮಂತ್ರಿ ಅಭ್ಯರ್ಥಿಯಾಗಿ ವಿಕಾಸ ಶೀಲಾ ಇನ್ಸಾನ್ ಪಕ್ಷದ ವಿಐಪಿ ಮುಖ್ಯಸ್ಥ ಮುಕೇಶ್ ಸಹಾನಿ ಅವರನ್ನು ಘೋಷಿಸಿದೆ ಮುಕೇಶ್ ಸಹಾನಿ ಅವರು ನಿಶಾದ್ ಸಮುದಾಯದ ಪ್ರಬಲ ನಾಯಕರಾಗಿ ಗುರುತಿಸಿಕೊಂಡಿದ್ದಾರೆ ಕಾಂಗ್ರೆಸ್ ಪಕ್ಷ ಹೆಚ್ಚಿನ ಸ್ಥಾನಗಳಲ್ಲಿ ಸ್ಪರ್ಧೆ ಮಾಡಿದ್ದರು ಉಪಮುಖ್ಯಮಂತ್ರಿಯ ಸ್ಥಾನ ಸಣ್ಣ ಪ್ರಾದೇಶಿಕ ಪಕ್ಷದ ನಾಯಕನಿಗೆ ಬಿಟ್ಟುಕೊಟ್ಟು ತ್ಯಾಗಕ್ಕೆ ಮುಂದಾಗಿದೆ



