ಜಮಾಹತ್ ಆಡಳಿತ ಸಮಿತಿ ಕಾರ್ಯದರ್ಶಿ ಖಾದರ್ ನಾರ್ಶ ಹೇಳಿಕೆ
ಬಂಟ್ವಾಳ ತಾಲೂಕಿನ ಕೊಳ್ನಾಡು ಗ್ರಾಮದ ರಹ್ಮಾನಿಯ ಜುಮಾ ಮಸೀದಿ ನಾರ್ಶ ಇಲ್ಲಿನ 84 ಜಮಾತ್ ಸದಸ್ಯರನ್ನು ಹೊಂದಿರುವ ಮಹಲ್ಲಿಗೆ ಹಲವಾರು ಮಹಲ್ಲಿನ ಕಾಝಿ, 1000ಕ್ಕಿಂತಲೂ ಅಧಿಕ ಮಸೀದಿ ಮತ್ತು ವಿಧ್ಯಭ್ಯಾಸ ಕೇಂದ್ರದ ರೂವಾರಿಗಳು, ಕೇರಳದ ಕೋಝಿಕೋಡಲ್ಲಿ 125 ಎಕ್ರೆ ಜಾಗದಲ್ಲಿ ನಾಲೇಜ್ ಸಿಟಿ, ಶರಿಯ ಸಿಟಿ, ಯೂನಿಯನ್ ಮೆಡಿಕಲ್ ಕಾಲೇಜು ಸ್ಥಾಪಿಸುತ್ತಿರುವ ರೂವಾರಿಗಳು, ಅನಾಥ ಮಕ್ಕಳನ್ನು ದತ್ತು ಪಡೆದು ಅವರಿಗೆ ಆಶ್ರಯ ನೀಡಿ ಅವರಿಗೆ ಉತ್ತಮ ವಿಧ್ಯಭ್ಯಾಸ ನೀಡುತ್ತಿರುವ ಇಂಡಿಯನ್ ಗ್ರ್ಯಾಂಡ್ ಮುಫ್ತಿ ಸುಲ್ತಾನುಲ್ ಉಲಮಾ ಎ.ಪಿ ಅಬೂಬಕ್ಕರ್ ಮುಸ್ಲಿಯಾರ್ ನಾರ್ಶ ರಹ್ಮಾನಿಯ ಜುಮಾ ಮಸೀದಿಯ ಕಾಝಿಯಾಗಿ ದಿನಾಂಕ:30/12/2025ರಂದು ಅಧಿಕಾರ ವಹಿಸಿ ಕೊಲ್ಲಲಿದ್ದಾರೆ, ಜಮಾತ್ ಸಮಿತಿಯ ಅಧ್ಯಕ್ಷರಾದ ಹಮೀದ್ ನಾರ್ಶ ರವರ ನೇತೃತ್ವದಲ್ಲಿ ನಾಳೆ ಮರ್ಕಝ್ಗೆ ತೆರಲಿ ಅಂಗೀಕಾರ ಪಡೆಯುವ ಕಾರ್ಯಕ್ರಮ ನಡೆಯಲಿದೆ, ನಾಳಿನ ಕಾಝಿ ಅಂಗೀಕಾರ ಕಾರ್ಯಕ್ರಮದಲ್ಲಿ ಜಮಾತ್ ಖತೀಬ್ ಅಲ್ ಹಾಜ್ ಸುಲೈಮಾನ್ ಮುಸ್ಲಿಯಾರ್ ಮತ್ತು ಜಮಾತ್ ಆಡಳಿತ ಸಮಿತಿಯ ಪದಾಧಿಕಾರಿಗಳು, ಜಮಾತ್ ಸದಸ್ಯರು ಭಾಗವಹಿಲಿದ್ದಾರೆ ಎಂದು ಜಮಾತ್ ಆಡಳಿತ ಸಮಿತಿ ಕಾರ್ಯದರ್ಶಿ ಖಾದರ್ ನಾರ್ಶ ಪ್ರಕಟನೆಯಲ್ಲಿ ತಿಳಿಸಿರುತ್ತಾರೆ.



