ಪುತ್ತೂರು:- ಮದುವೆಯಾಗುವುದಾಗಿ ನಂಬಿಸಿ ಯುವತಿಯನ್ನು ಗರ್ಭವತಿನ್ನಾಗಿಸಿ ವಂಚಿಸಿರುವ ಯುವಕ ನಾಪತ್ತೆಯಾದ ಪ್ರಕರಣದ ಸಂತ್ರಸ್ಥೆ ಮತ್ತು ಮಗುವಿಗೆ ನ್ಯಾಯ ದೊರಕಿಸಿಕೊಡುವ ನಿಟ್ಟಿನಲ್ಲಿ ಸಂತ್ರಸ್ತೆಯ ಮನಗೆ ಇಂದು ಕರ್ನಾಟಕ ರಾಜ್ಯ ಹಿಂದುಳಿದ ವರ್ಗಗಳ ಆಯೋಗದ ಸದಸ್ಯರಾದ ಶ್ರೀಮತಿ ಪ್ರತಿಭಾ ಕುಳಾಯಿ ಅವರು ಭೇಟಿ ಸಂತ್ರಸ್ತೆ ಮತ್ತು ಮನೆಯವರಿಗೆ ಧೈರ್ಯ ತುಂಬಿದರು
ಈ ಸಂದರ್ಭದಲ್ಲಿ ಸುದ್ದಿಗಾರರ ಜೊತೆಗೆ ಮಾತನಾಡಿದ ಪ್ರತಿಭಾ ಕುಳಾಯಿ ಅವರು ಈ ಘಟನೆ ಇಡೀ ನಾಗರೀಕ ಸಮಾಜ ತಲೆತಗ್ಗಿಸುವ ಘಟನೆಯಾಗಿದೆ ಮತ್ತು ಈ ವಿಚಾರ ಮತ್ತು ಘಟನೆಯ ಬಗ್ಗೆ ಸಂತ್ರಸ್ತೆ ಮತ್ತು ಮಗುವಿಗೆ ನ್ಯಾಯ ದೊರಕಿಸಿಕೊಡುವ ನಿಟ್ಟಿನಲ್ಲಿ ಎಲ್ಲಾ ರೀತಿಯ ಸಹಕಾರ ನೀಡಲಿದ್ದೇನೆ ಎಂದರು
ಸಂತ್ರಸ್ತೆಯನ್ನು ಭೇಟಿ ಮಾಡಿದ ತಕ್ಷಣ ಮಹಿಳಾ ಹಕ್ಕುಗಳ ಆಯೋಗದ ಅಧ್ಯಕ್ಷರಾದ ಶ್ರೀಮತಿ ನಾಗಲಕ್ಷ್ಮಿ ಚೌಧರಿ ದ.ಕ.ಜಿಲ್ಲೆಯ ಪೋಲಿಸ್ ವರಿಷ್ಟಾಧಿಕಾರಿಗಳಿಗೆ ಕರೆ ಮಾಡಿ ತಕ್ಷಣ ಈ ಪ್ರಕರಣದಲ್ಲಿ ಸಂತ್ರಸ್ತೆಗೆ ನ್ಯಾಯ ಸಿಗುವಂತೆ ಒತ್ತಾಯ ಮಾಡಿದರು
ಸ್ಥಳದಲ್ಲಿ ಸಂತ್ರಸ್ತೆಯವರಿಗೆ ವೈಯುಕ್ತಿಕ ನೆಲೆಯಲ್ಲಿ ಧನಸಹಾಯ ಮಾಡುವ ಮೂಲಕ ಮುಂದಿನ ದಿನಗಳಲ್ಲಿ ಸಂಪೂರ್ಣ ಖರ್ಚು ವೆಚ್ಚವನ್ನು ನೀಡುವ ಬಗ್ಗೆ ಭರವಸೆ ನೀಡಿದರು
ಈ ಸಂದರ್ಭದಲ್ಲಿ ಮಹಾನಗರ ಪಾಲಿಕೆಯ ಸದಸ್ಯರಾದ ನವೀನ್ ಡಿಸೋಜ, ಯುವ ಕಾಂಗ್ರೆಸ್ ಪಕ್ಷದ ಮಿಥುನ್ ಶೆಟ್ಟಿ ಕೋಡಿಂಬಾಡಿ ಹಾಗೂ ಮಂಗಳೂರಿನ ಮಹಿಳಾ ಹೋರಾಟಗಾರರು ಜೊತೆಗಿದ್ದರು



