ವಿಟ್ಲ; ಲಯನ್ಸ್ ಜಿಲ್ಲಾ 317 D ಯ ಸಾರ್ವಜನಿಕ ಸಂಪರ್ಕ ಅಧಿಕಾರಿಯಾಗಿ (ಪಿಅರ್‌ಒ)2025:-26 ನೇ ಸಾಲಿಗೆ ಸುದರ್ಶನ ಪಡಿಯಾರ್ ಆಯ್ಕೆಯಾಗಿದ್ದಾರೆ.
ಇದರಲ್ಲಿ 120 ಕ್ಲಬ್ ಹಾಗೂ 4500 ಕ್ಕೂ ಅಧಿಕ ಸದಸ್ಯರಿದ್ದಾರೆ.
ಇವರನ್ನು ಜಿಲ್ಲಾ ರಾಜ್ಯಪಾಲರಾದ ಕುಡ್ಪಿ ಅರವಿಂದ ಶೆಣೈ ಇವರು ನೇಮಕ ಮಾಡಿರುತ್ತಾರೆ.
ಸುದರ್ಶನ ಪಡಿಯಾರ್ ರವರು ಲಯನ್ಸ್ ಕ್ಲಬ್ ಅಧ್ಯಕ್ಷರಾಗಿ, ಪ್ರಾಂತೀಯ ಅಧ್ಯಕ್ಷಾಗಿ,ಕ್ಲಬ್ ನ ವಿವಿಧ ಹುದ್ದೆಗಳನ್ನು ಅಲಂಕರಿಸಿರುತ್ತಾರೆ.
,ಭಾರತ ಸ್ಕೌಟ್ ಮತ್ತು ಗೈಡ್ಸ್ ನ ವಿಟ್ಲ ವಲಯ ಅಧ್ಯಕ್ಷರಾಗಿ,ರಾಜ್ಯ ಮಟ್ಟದ ಯುವಜನ ಮೇಳದ ಸಂಚಾಲಕರಾಗಿ,ವಿಟ್ಲ ಯುವಕ ಮಂಡಲದ ಅಧ್ಯಕ್ಷರಾಗಿ ,ಸಾಮಾಜಿಕ ಶೈಕ್ಷಣಿಕ ಕ್ಷೇತ್ರದಲ್ಲಿ ತನ್ನನ್ನು ಸಕ್ರಿಯವಾಗಿ ತೊಡಗಿಸಿಕೊಂಡಿದ್ದಾರೆ.
ಈ ಹಿಂದೆ ದ.ಕ.ಜಿಲ್ಲೆಯ ವಿಟ್ಲದಲ್ಲಿ ಯುವಜನಮೇಳ ಕಾರ್ಯಕ್ರಮವನ್ನು ಆಗಿನ ಜಿಲ್ಲಾ ಉಸ್ತುವಾರಿ ಸಚಿವರಾದ ಬಿ ರಮನಾಥ್ ರೈ, ಅಂದಿನ ಯುವಜನ ಕ್ರೀಡಾ ಇಲಾಖೆಯ ಸಚಿವರಾದ ಆಭಯಚಂದ್ರ ಜೈನ್ ಅವರ ಮೇಲೆ ಒತ್ತಡ ಅಂದು ಅದ್ದೂರಿಯಾದ ಯುವಜನಮೇಳ ಕಾರ್ಯಕ್ರಮವನ್ನು ಸಂಘಟಿಸಿ ಇಡೀ ರಾಜ್ಯದಲ್ಲಿ ಜನಪ್ರಿಯರಾಗಿದ್ದರು
ಸದಾ ಬಡವರ್ಗದ ಜನರ ಬಗ್ಗೆ ಸಮಾಜ ಬಗ್ಗೆ ಅಭಿವೃದ್ಧಿ ವಿಚಾರಗಳ ಬಗ್ಗೆ ಚಿಂತನೆ ಇರುವ ಸುದರ್ಶನ ಪಡಿಯಾರ್ ಅವರ ಅರ್ಹತೆಗೆ ಈಗಾಗಲೇ ಅನೇಕ ಸಂಘ ಸಂಸ್ಥೆಗಳು ಲಯನ್ಸ್ ಕ್ಲಬ್ ನಲ್ಲಿ ವಿವಿಧ ಅವಕಾಶಗಳು ಒದಗಿ ಬಂದಿರುತ್ತದೆ…



