ವಿಟ್ಲ:- ಇಡ್ಕಿದು ಗ್ರಾಮ ಪಂಚಾಯತ್ ನೂತನ ಅಭಿವೃದ್ಧಿ ಅಧಿಕಾರಿಯಾಗಿ ಅಧಿಕಾರ ಸ್ವೀಕರಿಸಿದ ಶ್ರೀ ಅಜಿತ್ ಕುಮಾರ್ ಅವರಿಗೆ ಇಂದು ಕೆಪಿಸಿಸಿ ಮುಖಂಡ ಹನೀಫ್ ಬಗ್ಗುಮೂಲೆ ಹಾಗೂ ಸ್ಥಳೀಯ ಸಮಾಜ ಸೇವಕ ಸಿದ್ದೀಕ್ ಸೂರ್ಯ ಅವರ ನೇತೃತ್ವದಲ್ಲಿ ಅಭಿನಂದನೆ ಸಲ್ಲಿಸಲಾಯಿತು. ಈ ಸಂದರ್ಭದಲ್ಲಿ ಅಭಿನಂದನೆ ಸ್ವೀಕರಿಸಿ ಮಾತನಾಡಿದ PDO ಅವರು ಗ್ರಾಮದ ಅಭಿವೃದ್ಧಿ ಕೆಲಸ ಕಾರ್ಯಗಳಿಗೆ ನಿಮ್ಮ ಸಹಕಾರ ಅತ್ಯಗತ್ಯ ಎಂದರು
ಈ ಸಂದರ್ಭದಲ್ಲಿ ಶಾಕೀರ್ 77 ಅಳಕೆಮಜಲು, ಯುವ ಕಾಂಗ್ರೆಸ್ ಅಧ್ಯಕ್ಷರು , ಅಶ್ರಫ್ KGN ಬೂತ್ ಅಧ್ಯಕ್ಷರು, ಅಬೂಬಕ್ಕರ್ ಕೋಲ್ಪೆ, ಸಿನಾನ್ ಅಳಕೆಮಜಲು PWD, ಜಾಬೀರ್ ಅಳಕೆಮಜಲು, ಮುನೀರ್ ಅಳಕೆಮಜಲು, ಶಾಫಿ ಸೂರ್ಯ ಸಮಾಜ ಸೇವಕರು, ಸಬೀರ್ ಕೋಲ್ಪೆ, ಸುಲೈಮಾನ್ ಕೋಲ್ಪೆ, ಅಜೀಜ್ ಕೋಲ್ಪೆ, ರಝಾಕ್ ಕೋಲ್ಪೆ, ಹಾರಿಸ್ , ಸಾದಿಕ್, ಗಪೂರ್, ಕಲಂದರ್ ಅಳಕೆಮಜಲು ಮೊದಲಾದವರು ಉಪಸ್ಥಿತರಿದ್ದರು



