ಬಂಟ್ವಾಳ:-ಬಂಟ್ವಾಳ ವಿಧಾನ ಸಭಾ ಕ್ಷೇತ್ರದ ಬಂಟ್ವಾಳ ಬ್ಲಾಕ್ ಹಾಗೂ ಪಾಣೆಮಂಗಳೂರು ಬ್ಲಾಕ್ ಕಾಂಗ್ರೆಸ್ ಮತ್ತು ಬಂಟ್ವಾಳ ಮೂಡ ವಲಯ ಕಾಂಗ್ರೆಸ್ ಆಶ್ರಯದಲ್ಲಿ ಜನಜಾಗೃತಿ ಅಭಿಯಾನ ಕಾರ್ಯಕ್ರಮ ಗುರುವಾರ ಜುಲೈ 31ರಂದು ಬೆಳಿಗ್ಗೆ 10:30 ಕ್ಕೆ ಬಿಸಿರೋಡಿನ ಶ್ರೀ ರಕ್ತೇಶ್ವರಿ ಸನ್ನಿಧಿ ಮುಂಭಾಗದಲ್ಲಿ ನಡೆಯಲಿದೆ
ಈ ಕಾರ್ಯಕ್ರಮದಲ್ಲಿ ಕರ್ನಾಟಕ ಪ್ರದೇಶ ಕಾಂಗ್ರೆಸ್ ವಕ್ತರಾರಾದ ಸುದೀರ್ ಕುಮಾರ್ ಮುರೂಳ್ಳಿ ಮತ್ತು ಕಾಂಗ್ರೆಸ್ ರಾಜ್ಯ ವಕ್ತಾರ ಎಂಜಿ ಹೆಗಡೆ ಇವರುಗಳು ದಿಕ್ಕೂಚಿ ಭಾಷಣಕಾರರಾಗಿ ಭಾಗವಹಿಸಲಿದ್ದಾರೆ
ಮಾಜಿ ಸಚಿವ ಬಿ ರಮನಾಥ್ ರೈ ಅವರ ನೇತ್ರತ್ವದಲ್ಲಿ ಕಾರ್ಯಕ್ರಮ ನಡೆಯಲಿದೆ ಎಂದು ಆಯೋಜಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ



