ಕಾರ್ಯಕರ್ತರ ಆಕ್ರೋಶಕ್ಕೆ ಕಾರಣವಾದ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷರ ಆಯ್ಕೆ!
ಮಂಗಳೂರು:- ಒಂದು ಕಾಲದಲ್ಲಿ ಕಾಂಗ್ರೆಸ್ ಪಕ್ಷದ ಭದ್ರಕೋಟೆ ಎಂದೇ ಗುರುತಿಸಿಲ್ಪಡುತ್ತಿದ್ದ ಕರಾವಳಿ ಜಿಲ್ಲೆ ಕಳೆದ ಕೆಲವು ವರ್ಷಗಳಿಂದ ಬಿಜೆಪಿಯ ಭದ್ರಕೋಟೆಯಾಗಿ ಗುರುತಿಸಿದೆ
ಇದಕ್ಕೆ ಕಾರಣ ಹುಡುಕಿಕೊಂಡು ಹೋದರೆ ಹಲವಾರು ಕಾರಣಗಳು ಇವೆ ಎಂಬುದು ವಾಸ್ತವ
ಕೇಂದ್ರದ ಮಾಜಿ ಸಚಿವರಾದ ಬಿ ಜರ್ನಾಧನ ಪೂಜಾರಿ, ಆಸ್ಕರ್ ಪೇರ್ನಾಂಡಿಸ್, ಮಾಜಿ ಸಚಿವರಾದ ಬಿ ರಮಾನಾಥ್ ರೈ, ವಿನಯಕುಮಾರ್ ಸೊರಕೆ, ಆಭಯಚಂದ್ರ ಜೈನ್ ಇವರು ಶಾಸಕರಾಗಿ ಸಚಿವರಾಗಿದ್ದ ಸಮಯದಲ್ಲಿ ಕರಾವಳಿಯಲ್ಲಿ ಕಾಂಗ್ರೆಸ್ ಭದ್ರವಾಗಿ ಅಧಿಕಾರದಲ್ಲಿ ಇರುವ ಮೂಲಕ ಬಲಿಷ್ಟವಾಗಿತ್ತು.
ಯಾವಾಗ ಇವರು ಕರಾವಳಿ ಜಿಲ್ಲೆಯಲ್ಲಿ ಸೋತರೂ ಆವಾಗಿಂದ ಈವರೆಗೆ ಕರಾವಳಿ ಜಿಲ್ಲೆಯಲ್ಲಿ ಕಾಂಗ್ರೆಸ್ ಸಾಧನೆ ಅಷ್ಟಕಷ್ಟೇ ಎಂಬುದು ಕಾಂಗ್ರೆಸ್ ಕಾರ್ಯಕರ್ತರ ಬೇಸರಕ್ಕೆ ಕಾರಣವಾಗಿದೆ.
ಕರಾವಳಿ ಜಿಲ್ಲೆಯಲ್ಲಿ ಕಾಂಗ್ರೆಸ್ ಪಕ್ಷದ ಅಧ್ಯಕ್ಷರಾಗಿ ಕೆಲಸ ಮಾಡಿದ ದಿ. ಬ್ಲೇಸಿಯಸ್ ಡಿಸೋಜ , ಮಾಜಿ ಸಚಿವ ಬಿ ರಮಾನಾಥ್ ರೈ ಇವರ ಅವಧಿಯಲ್ಲಿ ಜಿಲ್ಲೆಯಲ್ಲಿ ಕಾಂಗ್ರೆಸ್ ಪಕ್ಷ ಬಲಿಷ್ಟವಾಗಿತ್ತು ಎಂಬುದು ಸತ್ಯವಾಗಿದೆ.
ರಮಾನಾಥ್ ರೈ ಅವರು ಸಚಿವರಾದ ನಂತರ ತಮ್ಮ ಅಧ್ಯಕ್ಷ ಸ್ಥಾನವನ್ನು ಹರೀಶ್ ಕುಮಾರ್ ಅವರಿಗೆ ಬಿಟ್ಟು ಕೊಟ್ಟಿದ್ದರು
ಯಾವಾಗ ಹರೀಶ್ ಕುಮಾರ್ ಅವರು ಅಧ್ಯಕ್ಷರಾಗಿ ಆಯ್ಕೆ ಆದರೂ ಆವತ್ತಿನಿಂದ ಕಾಂಗ್ರೆಸ್ ಪಕ್ಷ ಪ್ರತಿ ಚುನಾವಣೆಯಲ್ಲಿ ಶೂನ್ಯ ಫಲಿತಾಂಶದ ಮೂಲಕ ಸೋಲು ಕಂಡಿದೆ
ಇತ್ತ ಸತತ ಸೋಲುಗಳಿಂದ ಕಂಗೆಟ್ಟ ಕಾಂಗ್ರೆಸ್ ಪಕ್ಷಕ್ಕೆ ಜಿಲ್ಲಾಧ್ಯಕ್ಷರು ರಾಜೀನಾಮೆ ನೀಡಿ ವರ್ಷ ಕಳೆದರೂ ನೂತನ ಅಧ್ಯಕ್ಚರ ಆಯ್ಕೆ ಮಾಡುವಲ್ಲಿ ಕಾಂಗ್ರೆಸ್ ಹೈಕಮಾಂಡ್ ವಿಫಲವಾಗಿದೆ ಎಂಬುದು ಕಾಂಗ್ರೆಸ್ ಕಾರ್ಯಕ್ರರ್ತರ ಆಕ್ರೋಶಕ್ಕೆ ಕಾರಣವಾಗಿದೆ.
ಮೂಲಗಳ ಪ್ರಕಾರ ಜಿಲ್ಲಾ ಕಾಂಗ್ರೆಸ್ ಎರಡು ವಿಭಾಗಗಳಾಗಿ ಎರಡು ಅಧ್ಯಕ್ಷರನ್ನು ನೇಮಕ ಮಾಡುವ ಬಗ್ಗೆ ಕಾಂಗ್ರೆಸ್ ಹೈಕಮಾಂಡ್ ಚಿಂತನೆ ನಡೆಸಿದ್ದು ಆದರೆ ಈ ವಿಚಾರಗಳು ಯಾವುದೇ ಪರಿಗಣನೆಗೆ ಬರುತ್ತಿಲ್ಲ ಇದು ಕೂಡ ಒಂದು ಪ್ರಮುಖ ಅಂಶವಾಗಿದೆ.
ಇದಲ್ಲದೇ ಜೊತೆಗೆ ದ.ಕ.ಜಿಲ್ಲೆಯ ಕಾಂಗ್ರೆಸ್ ಅಧೀನದಲ್ಲಿ ಇರುವ ವಿವಿಧ ಘಟಕಗಳನ್ನು ವಿರ್ಸಜಿಸಿ ನೂತನ ಸಮಿತಿ ರಚನೆ ಮಾಡಬೇಕು ಎಂಬ ಆಗ್ರಹ ಕಾಂಗ್ರೆಸ್ ಕಾರ್ಯಕರ್ತರಲ್ಲಿ ಕೇಳಿ ಬಂದಿದೆ.
ಒಟ್ಟಿನಲ್ಲಿ ದ.ಕ.ಜಿಲ್ಲೆಯ ಕಾಂಗ್ರೆಸ್ ಪಕ್ಷಕ್ಕೆ ಶೀಘ್ರವಾಗಿ ಮೇಜರ್ ಸರ್ಜರಿ ನಡೆಸಿದರೆ ಕಾಂಗ್ರೆಸ್ ಪಕ್ಷ ಮುಂಬರುವ ಚುನಾವಣೆಯಲ್ಲಿ ಗೆಲುವು ಕಾಣಲಿದೆ ಎಂಬುದು ಕಾರ್ಯಕರ್ತರ ಅಭಿಪ್ರಾಯವಾಗಿದೆ….



