ತಾಲೂಕು ರಚನೆ ಬೇಡಿಕೆ ವಿಟ್ಲ ವಿಧಾನ ಸಭಾ ಕ್ಷೇತ್ರ ಮರುಸ್ಥಾಪನೆಗೆ ಒತ್ತಾಯ
ವಿಟ್ಲ:- ಸೆ.30 ವಿಟ್ಲ ಪಟ್ಟಣ ಪಂಚಾಯತ್ ಸಾಮನ್ಯ ಸಭೆ ಶನಿವಾರ ಪಟ್ಟಣ ಪಂಚಾಯತಿ ಅಧ್ಯಕ್ಷ ಕರುಣಾಕರ ನಾಯ್ತೊಟ್ಟು ಅವರ ಅಧ್ಯಕ್ಷತೆಯಲ್ಲಿ ಜರುಗಿತು.
ವಿಟ್ಲ ತಾಲೂಕು ರಚನೆ ಬೇಡಿಕೆ ಮತ್ತು ವಿಟ್ಲ ವಿಧಾನಸಭಾ ಕ್ಷೇತ್ರದ ಮರು ಸ್ಥಾಪನೆಗೆ ಸಂಬಂಧಿಸಿದರಿಗೆ ಒತ್ತಾಯಿಸಿ ನಿರ್ಣಯ ಕೈಗೊಳ್ಳಲಾಯಿತು.
ಅಧ್ಯಕ್ಷ ಕರುಣಾಕರ ಅವರು ವಿಟ್ಲದ ನಾಗರಿಕರಿಂದ ಬಂದ ಮನವಿಯನ್ನು ಸಭೆಯ ಮುಂದೆ ಇಡುತ್ತಿದ್ದಂತೆ ಪಕ್ಷಬೇಧವಿಲ್ಲದೆ ಸದಸ್ಯರು ಪ್ರಸ್ತಾವನೆ ಅಂಗೀಕರಿಸಿ ನಿರ್ಣಯವನ್ನು ಕೈಗೊಳ್ಳುವಂತೆ ಸೂಚಿಸಿದರು.
ನ್ಯಾಯಾಲಯ ಹೊರತುಪಡಿಸಿ ಎಲ್ಲಾ ಸರ್ಕಾರಿ ಇಲಾಖೆಗಳು ವಿಟ್ಲದಲ್ಲಿ ಇವೆ ತಾಲೂಕು ಅಗತ್ಯ ಇದೆ ಸಮಗ್ರ ಅಭಿವೃದ್ಧಿಗಾಗಿ ವಿಧಾನಸಭಾ ಕ್ಷೇತ್ರವನ್ನು ಮರುಸ್ಥಾಪನೆ ಮಾಡುವ ಅಗತ್ಯ ಇದೆ ಎಂದು ಅಭಿಪ್ರಾಯಪಟ್ಟರು.
ಸಭೆಯಲ್ಲಿ ಕೈಗೊಂಡ ನಿರ್ಣಯಗಳು ಅನುಷ್ಠಾನ ಆಗದ ಬಗ್ಗೆ ಹಸೈನಾರ್ ನೆಲ್ಲಿಗುಡ್ಡೆ ಅಸಮಾಧಾನ ವ್ಯಕ್ತಪಡಿಸಿದರು
ಬೀದಿ ನಾಯಿಗಳ ಹಾವಳಿ ಬಗ್ಗೆ ಮತ್ತೆ ಮತ್ತೆ ಉಂಟಾಗುವ ಟ್ರಾಫಿಕ್ ಸಮಸ್ಯೆಗಳ ಪರಿಹಾರಕ್ಕೆ ಜಯಂತ್ ಗೌಡ ಹಸೈನಾರ್ ಆರ್ ಅಶೋಕ್ ಕುಮಾರ್ ಶೆಟ್ಟಿ ಅರುಣ್ ವಿಟ್ಲ ಹರೀಶ್ ಸಿ.ಎಚ್ ಸದಸ್ಯರು ಒತ್ತಾಯಿಸಿದರು.
ಅಂಬೇಡ್ಕರ್ ಭವನಕ್ಕೆ ನಿಗದಿಯಾದ ಜಾಗದಲ್ಲಿ ಸರಕಾರಿ ರಸ್ತೆ ಇದ್ದು ಅದನ್ನು ತೆರವುಗೊಳಿಸಲು ಸೂಚಿಸಿದ ಬಗ್ಗೆ ಚರ್ಚೆ ನಡೆಯಿತು.
ಪಟ್ಟಣ ಪಂಚಾಯತ್ ಉಪಾಧ್ಯಕ್ಷ ಸಂಗೀತಾ ಪಾಣೆಮಜಲು, ಸ್ಥಾಯಿ ಸಮಿತಿಯ ಅಧ್ಯಕ್ಷ ರವಿಪ್ರಕಾಶ್, ಮುಖ್ಯಾಧಿಕಾರಿ ಕರುಣಾಕರ ವಿ ಕಂದಾಯ ವಸೂಲಿಗಾರ ಚಂದ್ರಶೇಖರ ವರ್ಮಾ , ಪಟ್ಟಣ ಪಂಚಾಯತ್ ಸದಸ್ಯರು ಸಿಬ್ಬಂದಿಗಳು ಉಪಸ್ಥಿತರಿದ್ದರು.



