ಉಸಿರಾಟದ ತೊಂದರೆಯಿಂದ ಬಳಲುತ್ತಿರುವ ಖರ್ಗೆ
ಬೆಂಗಳೂರು:- ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರು ಅನಾರೋಗ್ಯದ ಹಿನ್ನೆಲೆಯಲ್ಲಿ ಎಂಎಸ್ ರಾಮಯ್ಯ ಆಸ್ಪತ್ರೆಗೆ ದಾಖಲಾಗಿದ್ದಾರೆ ಉಸಿರಾಟದ ತೊಂದರೆಯಿಂದ ಬಳಲುತ್ತಿರುವ ಮಲ್ಲಿಕಾರ್ಜುನ ಖರ್ಗೆ ನಿನ್ನೆ ರೆಗ್ಯುಲರ್ ಚಕಪ್ ಗೆ ಆಸ್ಪತ್ರೆಗೆ ತೆರಳಿದ್ದರು ಕೆಲ ಆರೋಗ್ಯ ತಪಾಸಣೆ ಬಳಿಕ ನಿನ್ನೆ ರಾತ್ರಿಯಿಂದ ಆಸ್ಪತ್ರೆಯಲ್ಲಿ ಖರ್ಗೆ ಅವರು ವಿಶ್ರಾಂತಿ ಪಡೆಯುತ್ತಿದ್ದಾರೆ ಎಂದು ತಿಳಿದುಬಂದಿದೆ
ಬಿಹಾರ ಚುನಾವಣೆ ಸರಣಿ ಪ್ರವಾಸದ ಓಡಾಟ ಹೆಚ್ಚಿದ ಹಿನ್ನೆಲೆ ಇದರಿಂದ ಆಯಾಸಗೊಂಡಿದ್ದರು ಎನ್ನಲಾಗುತ್ತಿದೆ ಅನಾರೋಗ್ಯದ ಕಾರಣದಿಂದ ಉಸಿರಾಟದ ಸಮಸ್ಯೆ ಉಂಟಾಗಿದೆ ಎಂದು ರದಿಯಾಗಿದೆ



