ನ್ಯಾಯಮೂರ್ತಿ ಗವಾಯಿ ಅವರು ತೋರಿದ ಶಾಂತತೆಯನ್ನು ಮೆಚ್ಚಿದ ಪ್ರಧಾನಿ
ನವದೆಹಲಿ:- ಭಾರತದ ಮುಖ್ಯ ನ್ಯಾಯಮೂರ್ತಿ ಬಿ ಆರ್ ಗವಾಯಿ ಮೇಲೆ ಶೂ ಎಸೆತ ಘಟನೆ ದೇಶಾದ್ಯಂತ ತೀವ್ರ ಚರ್ಚೆ ಹಾಗೂ ಆಕ್ರೋಶಕ್ಕೆ ಕಾರಣವಾಗಿರುವಂತೆಯೇ ಪ್ರಧಾನಿ ಶ್ರೀ ನರೇಂದ್ರ ಮೋದಿಯವರು ಧ್ವನಿಗೊಡಿಸಿದ್ದಾರೆ.
ಈ ಘಟನೆ ಹಿನ್ನಲೆಯಲ್ಲಿ ಬಿ ಆರ್ ಗವಾಯಿ ಜೊತೆಗೆ ಮಾತನಾಡಿರುವುದಾಗಿ ಪ್ರಧಾನಿ ತಿಳಿಸಿದ್ದಾರೆ.
ಸುಪ್ರೀಂಕೋರ್ಟ್ ನಲ್ಲಿ ಇಂದು ಬೆಳಿಗ್ಗೆ ನಡೆದ ಘಟನೆ ಎಲ್ಲಾ ಭಾರತೀಯರನ್ನು ಕೇರಳಿಸಿದೆ ನಮ್ಮ ಸಮಾಜದಲ್ಲಿ ಇಂತಹ ಖಂಡನೀಯ ಕ್ರತ್ಯಗಳು ನಡೆಯುತ್ತಿರುವುದು ಸಂಪೂರ್ಣ ಖಂಡನೀಯವಾಗಿದ್ದು ಎಂದರು
ಇಂತಹ ಪರಿಸ್ಥಿತಿಯಲ್ಲಿ ನ್ಯಾಯಮೂರ್ತಿ ಗವಾಯಿ ಅವರು ತೋರಿದ ಶಾಂತತೆಯನ್ನು ನಾನು ಮೆಚ್ಚಿದ್ದೇನೆ.ಇದು ನ್ಯಾಯದ ಮೌಲ್ಯಗಳಿಗೆ ಮತ್ತು ನಮ್ಮ ಸಂವಿಧಾನದ ಆತ್ಮವನ್ನು ಬಲಪಡಿಸುವ ಅವರ ಬದ್ಧತೆಯನ್ನು ಎತ್ತಿ ತೋರಿಸುತ್ತದೆ ಎಂದು ಪ್ರಧಾನಿ ಮೋದಿ ಹೇಳಿದ್ದಾರೆ



