ಬಿಹಾರದ ಜನತೆಗೆ ತೇಜಸ್ವಿ ಯಾದವ್ ಭರವಸೆ
ಪಾಟ್ನ:- ಬಿಹಾರದಲ್ಲಿ ವಿರೋಧ ಪಕ್ಷಗಳ ಮೈತ್ರಿಕೂಟ ಅಧಿಕಾರಕ್ಕೆ ಬಂದರೆ ಪ್ರತಿ ಮನೆಯ ಒಬ್ಬರಿಗೆ ಸರಕಾರಿ ನೌಕರಿ ನೀಡಲಾಗುವುದು ಎಂದು ಆರ್ ಜೆಡಿ ನಾಯಕ ತೇಜಸ್ವಿ ಯಾದವ್ ಘೋಷಿಸಿದ್ದಾರೆ.
ಈ ಭರವಸೆ ಈಡೇರಿಸಲು ಸರಕಾರ ಅಧಿಕಾರಕ್ಕೆ ಬಂದ 20 ದಿನಗಳಲ್ಲಿ ಶಾಸನ ಜಾರಿಗೆ ತರಲಾಗುವುದು ಎಂದು ಹೇಳಿದ್ದಾರೆ.
ಈ ಕುರಿತು ಸುದ್ದಿಗಾರರೊಂದಿಗೆ ಮಾತನಾಡಿದ ತೇಜಸ್ಬಿ ಯಾದವ್ ನಿರುದ್ಯೋಗ ಅತ್ಯಂತ ದೊಡ್ಡ ಸಮಸ್ಯೆ ಎಂಬ ಸಂಗತಿಯನ್ನು ಈ ನಾಚಿಕೇಡು ಸರಕಾರ 20 ವರ್ಷ ಆದರೂ ಅರ್ಥ ಮಾಡಿಕೊಳ್ಳಲೇ ಇಲ್ಲ ಒಂದು ವೇಳೆ ವಿರೋಧ ಪಕ್ಷಗಳ ಮೈತ್ರಿಕೂಟ ರಾಜ್ಯದಲ್ಲಿ ಅಧಿಕಾರಕ್ಕೆ ಬಂದರೆ ಪ್ರತಿ ಮನೆಯ ಒಬ್ಬರಿಗೆ ಸರಕಾರಿ ನೌಕರಿ ನೀಡಲಾಗುವುದು ಎಂದು ಹೇಳಿದ್ದಾರೆ.
ಎನ್ ಡಿಎ ಮೈತ್ರಿಕೂಟದ ಪಾಲುದಾರ ಪಕ್ಷಗಳಾದ ಜೆಡಿಯು ಹಾಗೂ ಬಿಜೆಪಿ ಉದ್ಯೋಗಳ ಭರವಸೆ ನೀಡಿಲ್ಲ ಬದಲಿಗೆ ನಿರುದ್ಯೋಗ ಭತ್ಯೆಯ ಭರವಸೆ ನೀಡಿದೆ ಆದರೆ ಹೊಸ ಶಾಸನದ ಮೂಲಕ ಬಿಹಾರದಲ್ಲಿ ಸರಕಾರಿ ಉದ್ಯೋಗವಿಲ್ಲದ ಕುಟುಂಬಗಳು ಒಂದೂಂದು ಸರಕಾರಿ ಉದ್ಯೋಗ ಪಡೆಯಲಿವೆ
ಸರಕಾರ ರಚನೆಯಾದ ಕೇವಲ 20 ದಿನಗಳಲ್ಲಿ ನಾವು ಈ ಶಾಸನವನ್ನು ಜಾರಿಗೆ ತರುತ್ತೇವೆ.
ಬಿಹಾರದಲ್ಲಿ ಎಲ್ಲಾ ಕುಟುಂಬಗಳಿಗೂ ಸರಕಾರಿ ನೌಕರಿಯನ್ನು ನಾವು ಖಾತರಿಗೊಳಿಸಲಿದ್ದೇವೆ ಎಂದು ಹೇಳಿದ್ದಾರೆ
ಬಿಹಾರ ವಿಧಾನ ಸಭೆಯ 243 ಸ್ಥಾನಗಳಿಗೆ ಎರಡು ಹಂತಗಳಲ್ಲಿ ಚುನಾವಣೆ ನಡೆಯಲಿದ್ದು ಕ್ರಮವಾಗಿ ನವೆಂಬರ್ 6 ಮತ್ತು 11 ರಂದು ಮತದಾನ ನಡೆಯಲಿದೆ.
ಬಳಿಕ ನವೆಂಬರ್ 14 ರಂದು ಫಲಿತಾಂಶ ಘೋಷಣೆಯಾಗಲಿದೆ.



