ಸ್ಥಳಕ್ಕೆ ಬಂಟ್ವಾಳ ಕಂದಾಯ ಅಧಿಕಾರಿಗಳ ಭೇಟಿ
ಬಂಟ್ವಾಳ:- ಮನೆಯೊಂದರ ಗೋಡೆಯ ಮೇಲೆ ಬಂಡೆಕಲ್ಲು ಬಿದ್ದು ಹಾನಿಯಾದ ಘಟನೆ ಅ.12ರಂದು ಆದಿತ್ಯವಾರ ರಾತ್ರಿ ವೇಳೆ ನಡೆದಿದೆ.
ಆದಿತ್ಯವಾರ ರಾತ್ರಿ ಸುರಿದ ಮಿಂಚು ಸಿಡಿಲು ಮಳೆಗೆ ಅಮ್ಟಾಡಿ ಗ್ರಾಮದ ಪಡಾಮಕಿಲಮಾರ್ ಎಂಬಲ್ಲಿ ರವೀಂದ್ರ ಎಂಬವರ ವಾಸ್ಥವ್ಯದ ಮನೆಯ ಹಿಂಬದಿಯಲ್ಲಿನ ಗುಡ್ಡದಿಂದ ಬಂಡೆಕಲ್ಲು ಒಡೆದು ಉರುಳಿ ಬಿದ್ದಿದೆ.
ಮಣ್ಣಿನ ಗೋಡೆಯ ಮನೆಯಾಗಿರುವುದರಿಂದ ಗೋಡೆಗೆ ಹಾನಿಯಾಗಿದೆ.
ಸ್ಥಳಕ್ಕೆ ಬಂಟ್ವಾಳ ಕಂದಾಯ ಅಧಿಕಾರಿಗಳು ಭೇಟಿ ನೀಡಿ ಪರಿಶೀಲಿಸಿದ್ದಾರೆ.



