ಶಿಕ್ಷಣ ಸಂಸ್ಕ್ರತಿ ಜತೆಗಿರಲಿ ವಜ್ರದೇಹಿ ಶ್ರೀ
ಪುತ್ತೂರು:- ಅ.21 ಮನುಷ್ಯನ ಜೀವನದಲ್ಲಿ ಸಂಸ್ಕ್ರತಿ ಎಂಬುದು ಅವಿಭಾಜ್ಯ ಅಂಗ ಸಂಸ್ಕ್ರತಿ ಸಂಸಾರದ ಜೊತೆಗೆ ಶಿಕ್ಷಣ ಸಾಗಬೇಕು
ವಿದ್ಯೆಯಿಂದ ವಿನಯ ವಿನಯಂದಿನ ಭಾತೃತ್ವ ಹಾಗೂ ಬಾತೃತ್ವದಿಂದ ಧನ ಗಳಿಸಬಹುದು ಆದರೆ ಸುಖವೂ ಧನ ಅಥವಾ ಸಂಪತ್ತನ್ನು ಹೇಗೆ ಬಳಸುತ್ತೇವೆ ಎಂಬುವುದರಿಂದ ಪ್ರಾಪ್ತವಾಗುತ್ತದೆ ಎಂದು ಗುರುಪುರ ವಜ್ರದೇಹಿ ಮಠದ ಶ್ರೀ ರಾಜಶೇಖರಾನಂದ ಸ್ವಾಮೀಜಿ ಹೇಳಿದರು.
ಅಕ್ಷಯ ಸಮೂಹ ಶಿಕ್ಷಣ ಸಂಸ್ಥೆಗಳ ವತಿಯಿಂದ ಶಾರದಾ ಪೂಜೆ ಮತ್ತು ಆಯುಧ ಪೂಜೆ ಕಾರ್ಯಕ್ರಮದಲ್ಲಿ ಅವರು ಆಶರ್ವಚನ ನೀಡಿದರು
ಅಧ್ಯಕ್ಷತೆ ವಹಿಸಿದ ಅಕ್ಷಯ ಸಮೂಹ ಶಿಕ್ಷಣ ಸಂಸ್ಥೆಗಳ ಆಡಳಿತ ಮಂಡಳಿ ಅಧ್ಯಕ್ಷ ಜಯಂತ್ ನಡುಬೈಲ್ ಮಾತನಾಡಿ ಎಲ್ಲರಿಗೂ ಉದ್ಯೋಗಾವಕಾಶ ಸಿಗಬೇಕು ಎನ್ನುವ ನಿಟ್ಟಿನಲ್ಲಿ ಪದವಿ ಶಿಕ್ಷಣದೂಂದಿಗೆ ವೃತ್ತಿಪರ ಕೋರ್ಸ್ ಆರಂಭಿಸಿದ್ದೇವೆ ನಮ್ಮ ಸಂಸ್ಥೆಯಲ್ಲಿ ಪ್ರತಿಯೊಂದು ಹಬ್ಬ ಹರಿದಿನಗಳನ್ನು ಆಚರಿಸುತ್ತಿರುವುದು ಸಂಪ್ರದಾಯವಾಗಿದೆ ಎಂದರು
ಪ್ರಾಂಶುಪಾಲ ಸಂಪತ್ ಕೆ ಪಕ್ಕಳ ಮಾತನಾಡಿದರು ಕಾಲೇಜಿನ ಆಡಳಿತ ನಿರ್ದೇಶಕಿ ಕಲಾವತಿ ಜಯಂತ್ ಆಡಳಿತ ಅಧಿಕಾರಿ ಅರ್ಪಿತ್ ಟಿ ಎ , ಪ.ಪೂ ಮತ್ತಿತರರಿದ್ದರು.
ಅಕ್ಷಯ ಕಾಲೇಜಿನ ವಾರ್ಷಿಕ ಸಂಚಿಕೆ ಅಕ್ಷಯ ವನ್ನು ಅನಾವರಣಗೊಳಿಸಲಾಯಿತು.
ಸಾಧಕರಿಗೆ ಬಹುಮಾನ ವಿತರಿಸಲಾಯಿತು.
ಕೃಷಿಕ ಕಡಮಜಲು ಸುಭಾಷ್ ಚಂದ್ರ ರೈ ಪುತ್ತೂರು ಎಪಿಎಂಸಿ ಮಾಜಿ ಅಧ್ಯಕ್ಷ ಬುಡಿಯಾರ್ ರಾಧಾಕೃಷ್ಣ ರೈ ಪುತ್ತಿಲ ಪರಿವಾರದ ಮುಖ್ಯಸ್ಥ ಅರುಣ್ ಕುಮಾರ್ ಪುತ್ತಿಲ , ಕುದ್ರೋಳಿ ಶ್ರೀ ಗೋಕರ್ನಾಥೇಶ್ಚರ ದೇವಸ್ಥಾನದ ಕೋಶಾಧಿಕಾರಿ ಪದ್ಮರಾಜ್ ಆರ್, ಶ್ರೀ ಕ್ಷೇತ್ರ ಗೆಜ್ಜೆಗಿರಿಯ ಮಾಜಿ ಅಧ್ಯಕ್ಷ ಪೀತಾಂಬರ ಹೇರಾಜೆ, ಪುತ್ತೂರು ಬಿಲ್ಲವ ಸಂಘದ ಮಾಜಿ ಅಧ್ಯಕ್ಷ ವಿಜಯ ಕುಮಾರ್ ಸೊರಕೆ, ರೋಟರಿ ಅಸಿಸ್ಟೆಂಟ್ ಗವರ್ನರ್ ಡಾ ರಾಜಾರಾಮ್ ಕೆಬಿ, ಬಿಜೆಪಿ ಗ್ರಾಮಾಂತರ ಮಂಡಳಿ ಅಧ್ಯಕ್ಷ ಸಾಜ ರಾಧಾಕೃಷ್ಣ ಆಳ್ವ, ತಾ.ಪಂ.ಮಾಜಿ ಅಧ್ಯಕ್ಷ ರಾಧಾಕೃಷ್ಣ ಬೋರ್ಕರ್ ,ಹಿಂದೂ ಮುಖಂಡ ಮುರಳಿಕೃಷ್ಣ ಹಸಂತಡ್ಕ , ಧನ್ವಂತರಿ ಆಸ್ಪತ್ರೆಯ ಡಾ| ರವಿಪ್ರಕಾಶ್, ಡಾ| ರವಿ ಕಕ್ಕೆಪದವು, ಮಾಜಿ ಶಾಸಕಿ ಶಕುಂತಲಾ ಶೆಟ್ಟಿ, ಪ್ರತಿಭಾ ರಂಗದ ಮುಖ್ಯಸ್ಥ ನಾರಾಯಣ ರೈ ಕುಕ್ಕುವಳ್ಳಿ , ಬ್ರಹ್ಮಶ್ರೀ ನಾರಾಯಣ ಗುರು ಮಂದಿರದ ಮಾಜಿ ಕಾರ್ಯನಿರ್ವಹಣಾಧಿಕಾರಿ ಆರ್ ಸಿ ನಾರಾಯಣ, ನ್ಯಾಯವಾದಿ ಚಿದಾನಂದ ಬೈಲಾಡಿ, ತಂತ್ರಗಳಾದ ಪ್ರೀತಮ್ ಪುತ್ತೂರಾಯ, ಉದ್ಯಮಿ ಶಿವರಾಮ ಆಳ್ವ, ಮಾಜಿ ಡಿ.ಆರ್ ಎಫ್.ಸಿ ಡಾ| ಸೂರ್ಯನಾರಾಯಣ, ರೋಟರಿ ಕ್ಲಬ್ ಪುತ್ತೂರು ಈಸ್ಟ್ ಪೂರ್ವಾಧ್ಯಕ್ಷ ಡಾ| ಶ್ಯಾಮ್ ಪ್ರಸಾದ್, ರೋಟರಿ ಕ್ಲಬ್ ಪುತ್ತೂರು ಈಸ್ಟ್ ಅಧ್ಯಕ್ಷ ಶಶಿಧರ್ ಕಿನ್ನಿಮಜಲು, ಪದ್ಮಶ್ರೀ ಸೋಲಾರ್ ನ ಪದ್ಮನಾಭ ಶೆಟ್ಟಿ ,ಕೆಮ್ಮಿಂಜೆ ಶ್ರೀ ಷಣ್ಮುಖ ಸುಬ್ರಮಣ್ಯ ಶ್ರೀ ಮಹಾವಿಷ್ಣು ದೇವಸ್ಥಾನದ ವ್ಯವಸ್ಥಾಪನ ಸಮಿತಿ ಅಧ್ಯಕ್ಷ ಕೇಶವ ಪೂಜಾರಿ ಬೆದ್ರಾಳ, ನಿತೀಶ್ ಶಾಂತಿವನ ಪಾಲ್ಗೊಂಡರು ಉಪನ್ಯಾಸಕಿ ರಶ್ಮಿತಾ ನಿರೂಪಿಸಿದರು



