ಸುಳ್ಳು ಪ್ರಚಾರ ಮಾಡುವವರ ವಿರುದ್ಧ ಸೂಕ್ತ ಕ್ರಮ-
ಪುತ್ತೂರು;: ಅ.22 ಪುತ್ತೂರು ಗ್ರಾಮಾಂತರ ಠಾಣಾ ವ್ಯಾಪ್ತಿಯಲ್ಲಿ ಇಂದು ನಡೆದ ಜಾನುವಾರುಗಳ ಸಾಗಾಣಿಕೆ ಪ್ರಕರಣದ ವೇಳೆ ಒಟ್ಟು 12 ಜಾನುವಾರುಗಳಲ್ಲಿ ಒಂದು ಜಾನುವಾರು ಸತ್ತಿರುವುದಾಗಿ ಪೋಲಿಸರು ತಿಳಿಸಿದ್ದಾರೆ.
ಸ್ಥಳಕ್ಕೆ ಆಗಮಿಸಿದ್ದ ಅರುಣ್ ಕುಮಾರ್ ಪುತ್ತಿಲ ಅವರು ಈ ವಿಷಯವನ್ನು ಗಮನಿಸಿ ಪೋಲಿಸರಿಗೆ ಮಾಹಿತಿ ನೀಡಿದ್ದು ಎತ್ತುಗಳನ್ನು ವಾಹನದಿಂದ ಇಳಿಸಲು ಅನುಮತಿ ಕೋರಿದ್ದಾರೆ
ಜಾನುವಾರುಗಳ ಇನ್ನಷ್ಟು ಸಾವು ತಪ್ಪಿಸಲು ನಾವು ಸ್ಥಳೀಯರ ಸಹಕಾರ ಪಡೆದಿದ್ದೇವೆ ಎಂದು ಪೋಲಿಸರು ತಿಳಿಸಿದ್ದಾರೆ
ಅರುಣ್ ಕುಮಾರ್ ಪುತ್ತಿಲ ಅವರ ಕೈಯಲ್ಲಿದ್ದ ಕತ್ತಿ ಸಮೀಪದ ಮನೆಯೂಂದರಿಂದ ತರಲಾಗಿದ್ದು ಅದು ಘಟನೆ ನಡೆದ ಸ್ಣಳದ ಎದುರಿನ ಮುಸ್ಲಿಂ ಕುಟುಂಬದ ಮನೆಯಿಂದ ನೀಡಲಾಗಿದ್ದು ಎತ್ತುಗಳನ್ನು ಬಿಗಿಯಾಗಿ ಕಟ್ಟಿ ಹಾಕಿದ್ದ ಹಗ್ಗಗಳನ್ನು ಕತ್ತರಿಸಿ ರಕ್ಷಿಸಲು ಅದು ಬಳಸಲ್ಪಟ್ಟಿದೆ.
ಪೋಲಿಸರ ಪ್ರಕಾರ ಇಂತಹ ಸಂದರ್ಭಗಳಲ್ಲಿ ಸ್ಥಳೀಯರು ಸಹಾಯ ನೀಡುವುದು ಸಾಮಾನ್ಯವಾಗಿದೆ.
ಉದಾಹರಣೆಗೆ ರೋಗಿಗಳನ್ನು ಸ್ಥಳಾಂತರಿಸುವುದು ಶವಗಳನ್ನು ಸಾಗಿಸುವುದು ವಾಹನಗಳನ್ನು ತೆರವುಗೊಳಿಸುವುದು ಜಾನುವಾರುಗಳನ್ನು ಇಳಿಸುವುದು ಮುಂತಾದ ಸಂದರ್ಭಗಳಲ್ಲಿ ಜನರ ಸಹಾಯ ಪಡೆಯಲಾಗುತ್ತದೆ.
ಪೋಲಿಸರು ತಿಳಿಸಿದಂತೆ ಯಾರು ಅನಧಿಕೃತ ಕೃತ್ಯಗಳಲ್ಲಿ ತೊಡಗಿಸಿಕೊಂಡರು ಅವರನ್ನು ಕೇವಲ ಅಪರಾಧಿಗಳೆಂದು ಪರಿಗಣಿಸಲಾಗುವುದು ಈವರೆಗೆ ದಾಖಲಾಗಿರುವ ಪ್ರಕರಣಗಳ ವಿಶ್ಲೇಷಣೆ ಪ್ರಕಾರ ಜಾನುವಾರು ಸಾಗಣಿಕೆ ಮತ್ತು ಶಸ್ತ್ರಾಸ್ತ್ರ ಕಾಯ್ದೆಯ ಉಲ್ಲಂಘನೆ ಪ್ರಕರಣಗಳಲ್ಲಿ ಆರೋಪಿಗಳು ವಿವಿಧ ಧರ್ಮದವರಾಗಿದ್ದಾರೆ ಹೀಗಾಗಿ ಯಾವುದೇ ಸಂಸ್ಥೆ ಅಥವಾ ಸಂಘಟನೆಗಳು ಧಾರ್ಮಿಕ ಆಧಾರದ ಮೇಲೆ ವಿಷಯವನ್ನು ಮುನ್ನಲೆಗೆ ತರುವ ಪ್ರಯತ್ನ ಮಾಡಿದರೆ ಸಾರ್ವಜನಿಕರು ಅವರ ಉದ್ದೇಶಗಳನ್ನು ಪ್ರಶ್ನಿಸಬೇಕು ಹಾಗೂ ಇಂತಹ ಪ್ರಚಾರಗಳಿಗೆ ಬೆಂಬಲ ನೀಡಬಾರದು ಎಂದು ಪೊಲೀಸರು ಜನರಿಗೆ ವಿನಂತಿಸಿದ್ದಾರೆ
ಪೊಲೀಸರು ತಪ್ಪು ಪ್ರಚಾರ ಮಾಡುವವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳುತ್ತಿರುವುದಾಗಿ ತಿಳಿಸಿದ್ದಾರೆ



