ಪುತ್ತೂರು ಸೆಶನ್ಸ್ ಕೋರ್ಟೀನಿಂದ ಮಧ್ಯಂತರ ರಿಲೀಫ್
ಮಂಗಳೂರು:- ದ್ವೇಷ ಭಾಷಣಕ್ಕೆ ಸಂಬಂಧಿಸಿದಂತೆ ಆರೆಸ್ಸೆಸ್ ಹಿರಿಯ ಮುಖಂಡ ಕಲ್ಲಡ್ಕ ಪ್ರಭಾಕರ ಭಟ್ ವಿರುದ್ಧ ಯಾವುದೇ ರೀತಿಯ ಬಲವಂತದ ಕ್ರಮ ಕೈಗೊಳ್ಳುವುದು ಬೇಡ ಎಂದು ಪುತ್ತೂರು ಹೆಚ್ಚುವರಿ ಜಿಲ್ಲಾ ಮತ್ತು ಸೆಶನ್ಸ್ ನ್ಯಾಯಾಲಯ ಸೂಚಿಸಿದೆ.
ಮುಸ್ಲಿಂ ಮಹಿಳೆಯರ ವಿರುದ್ದ ಅವಮಾನಕಾರಿ ಹೇಳಿಕೆ ನೀಡಿದ್ದಾರೆಂಬ ಆರೋಪದಲ್ಲಿ ಪುತ್ತೂರು ಗ್ರಾಮಾಂತರ ಠಾಣೆಯಲ್ಲಿ ಕಲ್ಲಡ್ಕ ಭಟ್ ವಿರುದ್ದ ಎಫ್ ಐ.ಆರ್ ದಾಖಲಾಗಿತ್ತು ಅಲ್ಲದೇ ಕೇಸು ದಾಖಲು ಹಿನ್ನಲೆಯಲ್ಲಿ ಅ.30 ರಂದು ವಿಚಾರಣೆಗೆ ಹಾಜರಾಗುವಂತೆ ಪೋಲಿಸರು ಪ್ರಭಾಕರ ಭಟ್ ಅವರಿಗೆ ನೋಟೀಸ್ ನೀಡಿದ್ದರು
ಇದರ ಬೆನ್ನಲ್ಲೇ ಪುತ್ತೂರು ಸೆಶನ್ಸ್ ಕೋರ್ಟಿನಲ್ಲಿ ಮಧ್ಯಂತರ ಜಾಮೀನು ನೀಡುವಂತೆ ಪ್ರಭಾಕರ ಭಟ್ ಪರವಾಗಿ ಅಪೀಲು ಸಲ್ಲಿಸಲಾಗಿತ್ತು ವಿಚಾರಣೆ ನಡೆಸಿದ ನ್ಯಾಯಾಲಯ ಮುಂದಿನ ವಿಚಾರಣೆ ದಿನಾಂಕದವರೆಗೆ ಬಲವಂತದ ಕ್ರಮ ಬೇಡವೆಂದು ಹೇಳಿ ಅ.29 ಕ್ಕೆ ಮುಂದೂಡಿದೆ ಅಲ್ಲದೇ ಪ್ರತಿವಾದಿ ಪುತ್ತೂರು ಗ್ರಾಮಾಂತರ ಪೋಲಿಸ್ ಠಾಣಾಧಿಕಾರಿಗೆ ನೋಟಿಸ್ ಜಾರಿ ಮಾಡಿದೆ



