ಅಪಘಾತದಲ್ಲಿ ಇಬ್ಬರೂ ಮೃತ್ಯು
ಗಾಯಗೊಂಡ ಮಗುವಿನ ರಕ್ಷಣೆಗೆ ಧಾವಿಸಿ ಮಾನವೀಯತೆ ಮೆರೆದ ಪುತ್ತೂರು ಮಹಿಳಾ ಕಾಂಗ್ರೆಸ್ ಕಾರ್ಯಾಧ್ಯಕ್ಷರಾದ ಶ್ರೀಮತಿ ಚಂದ್ರಪ್ರಭಾ ಗೌಡ
ಪುತ್ತೂರು:- ಕುಂಬ್ರ ಸಮೀಪದ ಪರ್ಪುಂಜ ಕೊಯಿಲತ್ತಡ್ಕ ಎಂಬಲ್ಲಿ ಆಟೋ ರಿಕ್ಷಾ ಮತ್ತು ಕಾರು ನಡುವೆ ನ.1 ರಂದು ಸಂಜೆ ಬೀಕರ ಅಪಘಾತ ಸಂಭವಿಸಿದೆ.
ಅಪಘಾತದಲ್ಲಿ ರಿಕ್ಷಾದಲ್ಲಿದ್ದವರಿಗೆ ಗಂಭೀರ ಗಾಯವಾಗಿದ್ದು ಇಬ್ಬರೂ ಮೃತರಾಗಿದ್ದು ಉಳಿದವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ತಿಳಿದು ಬಂದಿದೆ
ಘಟನೆ ನಡೆದ ತಕ್ಷಣ ಪುತ್ತೂರು ಬ್ಲಾಕ್ ಕಾಂಗ್ರೆಸ್ ಮಹಿಳಾ ಕಾರ್ಯಾಧ್ಯಕ್ಷರಾದ ಶ್ರೀಮತಿ ಚಂದ್ರಪ್ರಭಾ ಗೌಡ ಅವರಿಗೆ ಪ್ರತ್ಯಕ್ಷದರ್ಶಿಗಳು ಪೋನ್ ಮೂಲಕ ವಿಷಯ ತಿಳಿಸಿದ್ದು ತಕ್ಷಣ ಚಂದ್ರಪ್ರಭಾ ಗೌಡ ಅವರು ಕಾರ್ಯಪ್ರತರಾಗಿ ಸಂಪ್ಯದ ಆಸ್ಪತ್ರೆಗೆ ದಾವಿಸಿ ಮಗುವಿಗೆ ಬೇಕಾದ ಎಲ್ಲಾ ಸಕಲ ವ್ಯವಸ್ಥೆಯನ್ನು ಮಾಡುವ ಮೂಲಕ ಮಗುವಿನ ಜೀವ ಉಳಿಸುವಲ್ಲಿ ಯಶಸ್ವಿಯಾಗುವ ಮೂಲಕ ಮಾನವೀಯತೆ ಮೆರೆದರು
ಇವರ ಮಾನವೀಯ ಜೀವಕಾರುಣ್ಯ ಕೆಲಸ ಕಾರ್ಯಗಳಿಗೆ ಸಮಾಜದಲ್ಲಿ ಮೆಚ್ಚುಗೆ ವ್ಯಕ್ತವಾಗಿದೆ



