ಪ್ರಕರಣ ದಾಖಲು
ಪುತ್ತೂರು:- ಕಡಬ ಸಂತೆಕಟ್ಟೆ ಬಳಿ ಮೀನು ಮಾರುಕಟ್ಟೆಯಲ್ಲಿ ನ.01 ರಂದು ಬೆಳಿಗ್ಗೆ ಮೀನು ಮಾರಾಟದ ವಿಚಾರದಲ್ಲಿ ಎರಡು ಅಂಗಡಿಯವರಿಗೆ ಮಾತಿನ ಚಕಮಕಿ ನಡೆದು ಬಳಿಕ ಪರಸ್ಪರ ಹೊಡೆದಾಟ ನಡೆದಿರುವ ಬಗ್ಗೆ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಕಂಡು ಬಂದಿದ್ದು ಈ ಕುರಿತು ಕಡಬ ಪೋಲಿಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ರಾಜು ಮ್ಯಾಥ್ಯೂ, ಆದಂ, ಪಯಾಝ್, ರಕ್ಷಿತ್ ಮಾಣಿ, ನೌಫಲ್ ಎಂಬವರ ವಿರುದ್ಧ ಪ್ರಕರಣ ದಾಖಲಾಗಿದೆ.
ಮೀನು ಮಾರಾಟದ ವಿಚಾರಕ್ಕೆ ರಾಜು ಮ್ಯಾಥ್ಯೂ ಹಾಗೂ ಆದಂ ಎಂಬ ಎರಡು ಅಂಗಡಿಯವರ ನಡುವೆ ಮಾತಿನ ಚಕಮಕಿ ನಡೆದು ಬಳಿಕ ಸಾರ್ವಜನಿಕ ಸ್ಥಳದಲ್ಲಿ ರಾಜು ಮ್ಯಾಥ್ಯೂ , ಆದಂ, ಫಯಾಝ್, ರಕ್ಷಿತ್ ಮಾಣಿ, ನೌಫಲ್ ಎಂಬುವರು ಪರಸ್ಪರ ಹೊಡೆದಾಡಿಕೊಂಡು ಸಾರ್ವಜನಿಕರ ಶಾಂತಿಗೆ ಭಂಗ ಉಂಟಾಗುವಂತೆ ಮಾಡಿದ್ದು ಆದ್ದರಿಂದ ಸದ್ರಿ ವ್ಯಕ್ತಿಗಳ ವಿರುದ್ಧ ಕಡಬ ಪೋಲಿಸ್ ಠಾಣೆಯಲ್ಲಿ ಅ.ಕ್ರ 73/2025 ಕಲಂ 194(2) BNS -2023 ರಂತೆ ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಲಾಗುತ್ತಿದೆ ಎಂದು ಕಡಬ ಠಾಣಾ ಪ್ರಕಟಣೆ ತಿಳಿಸಿದೆ



