ಮಾನವೀಯ ಸೇವೆಯು ಎಲ್ಲಾ ಮಹಿಖೆಯರಿಗೆ ಮಾದರಿಯಾಗಲಿ ನೋಟರಿ ಎಂ.ಪಿ ಅಬೂಬಕ್ಕರ್
ಪುತ್ತೂರು:- ಪರ್ಪುಂಜ ಅಪಘಾತದಲ್ಲಿ ಗಾಯಗೊಂಡಿದ್ದ ಪುಟ್ಟ ಮಗುವಿನ ಆರೈಕೆ ಮಾಡಿ ಮಾನವೀಯತೆ ಮೆರೆದಿರುವ ಚಂದ್ರಪ್ರಭಾ ಗೌಡರವರಿಗೆ AIKMCC ಹಾಗೂ ಶಿಹಾಬ್ ತಂಙಳ್ ಸೆಂಟರ್ ಫಾರ್ ಹ್ಯುಮಾನಿಟಿ ವತಿಯಿಂದ ಸನ್ಮಾನಿಸಲಾಯಿತು
ಈ ಸಂದರ್ಭದಲ್ಲಿ ನೋಟರಿ ಎಂ.ಪಿ ಅಬೂಬಕ್ಕರ್ ನಿಮ್ಮ ಮಾನವೀಯ ಸೇವೆಯು ಎಲ್ಲಾ ಮಹಿಳೆಯರಿಗೆ ಮಾದರಿಯಾಗಲಿ ಎಂದರು
ಈ ಸಂದರ್ಭದಲ್ಲಿ AIKMCC ಪ್ರಧಾನ ಕಾರ್ಯದರ್ಶಿ ಅಪ್ಹಾಂ ಅಲಿ ತಂಙಳ್ ಅವರು AIKMCC ಪಾಲಿಯೇಟಿವ್ ಹೋಮ್ ಕೇರ್ ವತಿಯಿಂದ ಜಿಲ್ಲೆಯಲ್ಲಿ ನೀಡುತ್ತಿರುವ ರೋಗಿಗಳ ಆರೈಕೆ ವಿವರ ನೀಡಿದರು
ಕಾರ್ಯಕ್ರಮದಲ್ಲಿ ಯೂಸುಫ್ ಸಾಲ್ಮರ, ಅಬೂಬಕ್ಕರ್, ಭರತ್ ರಾವ್, ಶರ್ಪುದ್ದೀನ್ , ಜಬ್ಬಾರ್ ಕೆಎಂಸಿಸಿ , ಅನಿಸ್ ಕೆಎಸ್, ಮಹಮ್ಮದ್ ಪಡೀಲ್, ಮಹಮ್ಮದ್ ಶಮೀರ್, ಹನೀಫ್ ದರ್ಬೆ ಉಪಸ್ಥಿತರಿದ್ದರು
AIKMCC ದ.ಕ.ಜಿಲ್ಲಾ ಮೀಡಿಯಾ ವಿಂಗ್ ಕಾರ್ಯದರ್ಶಿ ತಾಜುದ್ದೀನ್ ಟರ್ಲಿ ಸ್ವಾಗತಿಸಿ ವಂದಿಸಿದರು



