ಸರಕಾರಿ ಜಾಗದಲ್ಲಿರುವ ದೇವಸ್ಥಾನ, ದೈವಸ್ಥಾನ ಧಾರ್ಮಿಕ ಕೇಂದ್ರಗಳ ಸಕ್ರಮಕ್ಕೆ ಕಂದಾಯ ಇಲಾಖೆ ಅನುಮೋದನೆ
ಪುತ್ತೂರು:- ಪುತ್ತೂರು ವಿಧಾನ ಸಭಾ ಕ್ಷೇತ್ರದ ವ್ಯಾಪ್ತಿಯಲ್ಲಿ ಸರ್ಕಾರಿ ಜಾಗದಲ್ಲಿ ನಿರ್ಮಿಸಿರುವ ದೇವಸ್ಥಾನ, ದೈವಸ್ಥಾನಗಳು ಮತ್ತು ಸಂಘ ಸಂಸ್ಥೆಗಳಿಗೆ ಸಂಬಂಧಿಸಿದಂತೆ ಅಂತಹ ಜಾಗಗಳನ್ನು ಸಕ್ರಮಗೊಳಿಸಿ ಅವುಗಳ ಹೆಸರಿಗೆ ಜಮೀನು ಮಂಜೂರು ಮಾಡುವಂತೆ ಶಾಸಕ ಅಶೋಕ್ ಕುಮಾರ್ ರೈ ಅವರು ಸಲ್ಲಿಸಿದ್ದ ಮನವಿಗೆ ಕಂದಾಯ ಸಚಿವರು ಸಕಾರಾತ್ಮಕವಾಗಿ ಸ್ಪಂದಿಸಿದ್ದಾರೆ.

ಶಾಸಕ ಅಶೋಕ್ ರೈ ಮನವಿ ಪತ್ರದಲ್ಲಿ ಪುತ್ತೂರು ವಿಧಾನ ಸಭಾ ಕ್ಷೇತ್ರದ ವಿವಿಧ ಗ್ರಾಮಗಳಲ್ಲಿನ ದೇವಸ್ಥಾನ ದೈವಸ್ಥಾನಗಳು ಮತ್ತು ಸಂಘ ಸಂಸ್ಥೆಗಳು ತಮ್ಮ ಹೆಸರಿನಲ್ಲಿ ಜಮೀನು ಇಲ್ಲದ ಕಾರಣ ಸರ್ಕಾರದಿಂದ ಲಭಿಸುವ ಮೂಲ ಸೌಕರ್ಯಗಳಿಂದ ವಂಚಿತವಾಗಿವೆ ಎಂದು ವಿವರಿಸಲಾಗಿತ್ತು ಇದರಿಂದಾಗಿ ಸಾರ್ವಜನಿಕರಿಗೆ ಅನಾನುಕೂಲವಾಗುತ್ತಿದ್ದು ಈ ದೇವಸ್ಥಾನ ನಿರ್ಮಾಣಗೊಂಡಿರುವ ಜಾಗಗಳನ್ನು ಅವುಗಳ ಹೆಸರಿಗೆ ಮಂಜೂರು ಮಾಡುವಂತೆ ಕೋರಲಾಗಿತ್ತು



