ನಿಮಿಗೆ ಅನ್ ಲೈನ್ ಲಾಟರಿ ಬಂದಿದೆ ಎಂದು ಕರೆ ಬರುತ್ತದೆ ನಂತರ ಅಕೌಂಟಿಗೆ ಹಣ ಬರಬೇಕಾದರೇ RBI tax ಕಟ್ಟಿದರೆ ಲಾಟರಿ ಹಣ ಅಕೌಂಟಿಗೆ ಬರುತ್ತೆ ಎಂಬ ಮೋಸದ ನಾಟಕ
ಪುತ್ತೂರು:- ಇತ್ತೀಚಿನ ದಿನಗಳಲ್ಲಿ ಆನ್ ಲೈನ್ ವಂಚನೆ ಮೋಸಕ್ಕೆ ಅನೇಕ ಮಂದಿ ತಮ್ಮ ತಮ್ಮ ಅಕೌಂಟ್ ಮೂಲಕ ತಮ್ಮ ದುಡ್ಡು ಕಳೆದುಕೊಳ್ಳುತ್ತಿರುವುದು ದಿನನಿತ್ಯ ನಡೆಯುತ್ತಿದೆ ಅಂದ ಹಾಗೆ ಪುತ್ತೂರು ತಾಲೂಕಿನ ವ್ಯಕ್ತಿಯೊಬ್ಬರು ಪೇಸ್ ಬುಕ್ ಮೂಲಕ ಕೇರಳ ಅಲ್ ಲೈನ್ ಲಾಟರಿ ಎಂಬ ಲಿಂಕನ್ನು ಒಪನ್ ಮಾಡಿದ್ದು ತಕ್ಷಣ ಕೇರಳ ಲಾಟರಿ ಎಂಬ ಹೆಸರಿನ ಮೊಬೈಲ್ ಸಂಖ್ಯೆ- 9631479648 ಎಂಬ ನಂಬರಿನಲ್ಲಿ ಕೇರಳ ಲಾಟರಿಯ ಟಿಕೆಟ್ ಸಂಖ್ಯೆ ನೀಡಿ ಚಾಯ್ಸ್ ಮಾಡಲು ತಿಳಿಸಲಾಗುತ್ತದೆ ಚಾಯ್ಸ್ ಮಾಡಿದ ನಂತರ 40 ರೂ ಪೇ ಮಾಡುವಂತೆ ತಿಳಿಸುತ್ತಾರೆ.

40 ರೂ
ಪೇ ಮಾಡಿದ ನಂತರ ಕೇರಳ ಅಲ್ ಲೈನ್ ಲಾಟರಿ 3 ಗಂಟೆಯಲ್ಲಿ ರಿಸಲ್ಟ್ ಬರುತ್ತದೆ ಎಂಬ ಸಂದೇಶವನ್ನು ತಿಳಿಸುತ್ತಾರೆ ಅವರು ತಿಳಿಸಿದಂತೆ 3 ಗಂಟೆಗೆ ಕೇರಳ ಆನ್ ಲೈನ್ ಲಾಟರಿಯ ಲಿಂಕ್ ಕಳಿಸ್ತಾರೆ ಅದರಲ್ಲಿ ಮುಂಚೆ ಚಾಯ್ಸ್ ಮಾಡಿದ ವ್ಯಕ್ಯಿಯೊಬ್ಬನ ಹೆಸರು 4 ನೇ ಡ್ರಾದಲ್ಲಿ 8 ಲಕ್ಷ ಎಂಬ ಡ್ರಾ ಎಂದು ಪ್ರಕಟವಾಗುತ್ತದೆ.
ಈ ಸಮಯದಲ್ಲಿ ಪೋನ್ ಕರೆ ಬರುತ್ತದೆ ಅಕೌಂಟ್ ನಂಬರ್ ಕಳುಹಿಸಿ ಎಂದು ಅಕೌಂಟ್ ನಂಬರ್ ಕಳುಹಿಸಿದ
ನಂತರ ಅಕೌಂಟಿಗೆ ಅಮೌಂಟ್ ಟ್ರಾನ್ಸ್ ಪರ್ ಆಗುತ್ತದೆ ಎಂಬ ಮಸೇಜ್ ಬರುತ್ತದೆ ನಂತರ ಒಂದು ಮೆಸೇಜ್ ಬರುತ್ತೆ ಏನಂದರೆ
RBI ಗೆ ಟ್ರಾಕ್ಸ್ 5650 ಕಟ್ಟಬೇಕು ಎಂಬುದಾಗಿದೆ ಇದನ್ನು ಪುತ್ತೂರು ತಾಲೂಕಿನ ವ್ಯಕ್ತಿಯೊಬ್ಬ ಕಟ್ಟದೇ ಸಂಶಯದ ಮೂಲಕ ಅವರಿಗೆ ಮತ್ತೆ ಕರೆ ಮಾಡಿ ಹಿಗ್ಗಾಮುಗ್ಗ ಜಾಡಿಸಿದ್ದಾನೆ
ನಂತರ ಈ ನಂಬರ್ ಬ್ಲಾಕ್ ಮಾಡಲಾಗಿದೆ ಎಂದು ತಿಳಿದು ಬಂದಿದೆ
ಈ ವಿಚಾರ ಗಮನಕ್ಕೆ ಬರುತ್ತಿದ್ದಂತೆ ಯುವಕ ಸೈಬರ್ ಅಧಿಕಾರಿಗಳಿಗೆ ದೂರು ನೀಡಲು ಮುಂದಾಗಿದ್ದಾನೆ ಎಂದು ತಿಳಿದು ಬಂದಿದೆ



