ಸಂಸದ ಕಾಗೇರಿ ವಿರುದ್ಧ ಕಾನೂನು ಕ್ರಮ ಕೈಗೊಳ್ಳಬೇಕು
ಮಂಗಳೂರು:- ರಾಷ್ಟ್ರಗೀತೆ ಜನಗಣಮನದ ಬಗ್ಗೆ ವಿವಾದಾತ್ಮಕ ಹೇಳಿಕೆ ನೀಡಿರುವ ಸಂಸದ ವಿಶ್ವೇಶ್ವರ ಹೆಗಡೆ ಕಾಗೇರಿ ವಿರುದ್ಧ ಕಠಿಣ ಕಾನೂನು ಕ್ರಮ ಕೈಗೊಳ್ಳುವಂತೆ ಮಾಜಿ ಸಚಿವ ಬಿ ರಮಾನಾಥ್ ರೈ ಸರಕಾರವನ್ನು ಆಗ್ರಹಿಸಿದ್ದಾರೆ.
ಮಂಗಳೂರು ನಗರದ ಕಾಂಗ್ರೆಸ್ ಭವನದಲ್ಲಿ ಸೋಮವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು ಶಾಸಕ ಸಚಿವ ಸ್ಥಾನ ಸ್ಪೀಕರ್ ಹುದ್ದೆ ಸೇರಿದಂತೆ ಸಾಂವಿಧಾನಿಕ ಹುದ್ದೆಯನ್ನು ಅಲಂಕರಿಸಿರುವ ವಿಶ್ವೇಶ್ವರ ಹೆಗಡೆ ಕಾಗೇರಿ ಸಂವಿಧಾನಕ್ಕೆ ಅವಮಾನ ಮಾಡಿದ್ದಾರೆ ಎಂದರು
ನಮ್ಮ ದೇಶದ ರಾಷ್ಟ್ರಗೀತೆಗೆ ಅಪಾರ ಇತಿಹಾಸವಿದ್ದು ದೇಶದ ಜನಮಾನಸದಲ್ಲಿ ಇರುವಂತಹ ಹಾಡು ಆಗಿದೆ ರಾಷ್ಟ್ರಧ್ವಜ , ರಾಷ್ಟ್ರಗೀತೆಯನ್ನು ಗೌರವಿಸುವುದು ಪ್ರತಿಯೊಬ್ಬ ಭಾರತೀಯ ನಾಗರಿಕನ ಕರ್ತವ್ಯವಾಗಿದೆ ಎಂದು ಅವರು ಹೇಳಿದರು
1911ರ ಡಿ 11 ರಂದು ಜನಗಣಮನ ಹಾಡನ್ನು ರವೀಂದ್ರನಾಥ ಟ್ಯಾಗೋರ್ ಬರೆದರು 1911 ಡಿ 28 ರಂದು ಕೋಲ್ಕತ್ತಾದಲ್ಲಿ ನಡೆದ ಕಾಂಗ್ರೆಸ್ ಅಧಿವೇಶನದಲ್ಲಿ ಮೊದಲ ಭಾರಿ ಹಾಡಲಾಗಿತ್ತು 1947 ರ ಅಗಸ್ಟ್ 14 ರಂದು ಮಧ್ಯರಾತ್ರಿ ದೇಶ ಸ್ವತಂತ್ರವಾದಾಗ ಮೊದಲ ಭಾರಿ ಜನಗಣಮನ ಹಾಡಲಾಯಿತು.
ಭಾರತದ ಸಂವಿಧಾನ ಸಭೆಯು 1950ರ ಜೂ 24 ರಂದು ಜನಗಣ ಮನವನ್ನು ರಾಷ್ಟ್ರಗೀತೆಯಾಗಿ ಅಂಗೀಕರಿಸಲಾಗಿತ್ತು ಇಂತಹ ಐತಿಹಾಸಿಕ ಅಭಿಮಾನದ ರಾಷ್ಟ್ರಗೀತೆ ವಿರುದ್ಧ ಹೇಳಿಕೆ ನೀಡಿ ಕಾಗೇರಿ ಅವರು ಅವಮಾನಿಸಿದ್ದಾರೆ ಇದು ರಾಷ್ಟ್ರಗೀತೆಯ ಇತಿಹಾಸಕ್ಕೆ ಮಾಡಿದ ಅಪಚಾರವಾಗಿದೆ ಎಂದು ಅಭಿಪ್ರಾಯಪಟ್ಟರು
ರಾಷ್ಟ್ರಗೀತೆ ಅವಮಾನಿಸಿದವರಿಗೆ ಮೂರು ವರ್ಷ ಜೈಲು ಶಿಕ್ಷೆ ವಿಧಿಸುವ ಅವಕಾಶವಿದೆ ಈ ಅಪರಾಧವೆಸಗಿದ ವಿಶ್ವೇಶ್ವರ ಹೆಗಡೆ ಕಾವೇರಿ ವಿರುದ್ಧ ಸರಕಾರ ಕಾನೂನು ರೀತಿಯ ಕ್ರಮ ಕೈಗೊಳ್ಳಬೇಕು ಎಂದು ರಮಾನಾಥ ರೈ ಆಗ್ರಹಿಸಿದರು
ಕಾಗೇರಿ ರಾಷ್ಟ್ರಗೀತೆ ವಿರುದ್ಧ ವಿವಾದಾತ್ಮಕ ಹೇಳಿಕೆ ನೀಡಿ ವಾರ ಕಳೆದರೂ ಕಾಂಗ್ರೆಸ್ ಪಕ್ಷ ಯಾಕೆ ಮೌನವಹಿಸಿದೆ ಎಂದು ಸುದ್ದಿಗಾರರು ಪ್ರಶ್ನಿಸಿದಾಗ ರಾಷ್ಟ್ರಗೀತೆಗೆ ಅವಮಾನ ಮಾಡಿದವನ ವಿರುದ್ಧ ಕಾನೂನು ಕ್ರಮಕ್ಕೆ ಆಗ್ರಹಿಸುವ ಅವಕಾಶ ಎಲ್ಲರಿಗೂ ಇದೆ ನಾನು ಒಬ್ಬ ನಾಗರಿಕನಾಗಿ ಸಂಸದ ಕಾವೇರಿ ವಿರುದ್ಧ ಕ್ರಮಕ್ಕೆ ಆಗ್ರಹಿಸಿದ್ದೇನೆ ಎಂದು ಹೇಳಿದರು



