ಮುಖ್ಯ ಪ್ರಭಾಷಣಗಾರರಾಗಿ ಬಹು ಹಾಫಿಲ್ E.P .ಅಬೂಬಕ್ಕರ್ ಖಾಸಿಮಿ ಪತ್ತನಾಪುರಂ
ಬಹು NPM ಸಯ್ಯದ್ ಜಲಾಲುದ್ದೀನ್ ತಂಙಳ್ ಅಲ್ ಬುಖಾರಿ ಕುನ್ನುಂಗೈ
ಪುಣಚ:- ಇತಿಹಾಸ ಪ್ರಸಿದ್ಧ ಮುಹಿಯ್ಯುದ್ದೀನ್ ಜುಮಾ ಮಸೀದಿ ಪುಣಚ ಇದರ ಅಂಗ ಸಂಸ್ಥೆಯಾದ ಕುತುಬಿಯತ್ ಯಂಗ್ ಮೆನ್ಸ್ ಎಸೋಶಿಯೇಶನ್ ಪುಣಚ ಇದರ 41 ನೇ ಕುತುಬಿಯತ್ ವಾರ್ಷಿಕೋತ್ಸವದ ಪ್ರಯುಕ್ತ ಎರಡು ದಿನದ ಧಾರ್ಮಿಕ ಮತಪ್ರವಚನ ಕಾರ್ಯಕ್ರಮ ಡಿಸೆಂಬರ್ 8 ಮತ್ತು 9 ರಂದು ನಡೆಯಲಿದೆ ಎಂದು ಪ್ರಕಟಣೆ ತಿಳಿಸಿದೆ
ದಿನಾಂಕ 8-12-2025 ನೇ ಮಗ್ರಿಬ್ ನಮಾಝ್ ನ ನಂತರ ಮುಖ್ಯ ಪ್ರಭಾಷಣಗಾರರಾಗಿ ಬಹು ಹಾಫಿಲ್ E.P ಅಬೂಬಕ್ಕರ್ ಖಾಸಿಮಿ ಪತ್ತನಾಪುರಂ ಅವರು ಅರ್ಥಗರ್ಭಿತವಾದ ಪ್ರಭಾಷಣ ಮಾಡಲಿದ್ದಾರೆ.
ದಿನಾಂಕ 9-12-2025 ನೇ ಮಂಗಳವಾರ ಮಗ್ರಿಬ್ ನಮಾಝ್ ನಂತರ ಕುತುಬಿಯತ್ ವಾರ್ಷಿಕ ಕಾರ್ಯಕ್ರಮದ ನೇತೃತ್ವವನ್ನು ಬಹು ಬಿ.ಯಂ ಮುಹಮ್ಮದ್ ದಾರಿಮಿ ಖತೀಬರು ಜುಮಾ ಮಸೀದಿ ಪುಣಚ ವಹಿಸಲಿದ್ದಾರೆ.
ಕಾರ್ಯಕ್ರಮದ ದುಹಾ ನೇತೃತ್ವವನ್ನು ಬಹು NPM ಸಯ್ಯದ್ ಜಲಾಲುದ್ದೀನ್ ತಂಙಳ್ ಅಲ್ ಬುಖಾರಿ ಕುನ್ನುಂಗೈ ಕೇರಳ ಇವರು ವಹಿಸಲಿದ್ದಾರೆ
ಈ ಕಾರ್ಯಕ್ರಮದಲ್ಲಿ ಹಲವಾರು ಗಣ್ಯರು ಭಾಗವಹಿಸಲಿದ್ದಾರೆ ಎಂದು ಪ್ರಕಟಣೆ ತಿಳಿಸಿದೆ



