ವಿದ್ಯಾರ್ಥಿಗಳ ಭವಿಷ್ಯ ರೂಪಿಸುವುದೇ ಕಾರ್ಯಾಗಾರದ ಉದ್ದೇಶ
ಪುತ್ತೂರು :- ನ.26
ಶಿಕ್ಷಣ ಸಂಪನ್ಮೂಲ ಕೇಂದ್ರ ಪುತ್ತೂರು,
ಮಕ್ಕಳ ಮಾಸೋತ್ಸವ ಸಮೀತಿ ಪುತ್ತೂರು ವತಿಯಿಂದ ಹಾರಾಡಿ ಶಾಲೆಯಲ್ಲಿ ಮಾಹಿತಿ ಕಾರ್ಯಕ್ರಮ ಹಮ್ಮಿಕೊಂಡಿದ್ದು,ಶಾಲಾ ಮುಖ್ಯ ಶಿಕ್ಷಕರಾದ ಶ್ರೀಯುತ ಕುಕ್ಕಸರ್ ಸಂಪನ್ಮೂಲ ಕೇಂದ್ರದ ಸದಸ್ಯರನ್ನು ಸ್ವಾಗತಿಸಿದರು.ಸಂಪನ್ಮೂಲ ಕೇಂದ್ರದ ಪ್ರದಾನ ಕಾರ್ಯದರ್ಶಿ ಸುಮಂಗಲ ಮಕ್ಕಳಿಂದ ಸಂವಿಧಾನದ ಪೀಠಿಕೆ ಓದಿಸಿದರು.
ಸಂಪನ್ಮೂಲ ವ್ಯಕ್ತಿಯಾಗಿ , ಹರಿಣಾಕ್ಷೀ ಜೆ.ಶೆಟ್ಟಿ
(ನ್ಯಾಯವಾದಿಗಳು ಪುತ್ತೂರು)
ಇವರು ಮಕ್ಕಳಿಗೆ ಪೋಕ್ಸೋ ಮಕ್ಕಳ ಹಕ್ಕಿನ ಬಗ್ಗೆ ಮಾಹಿತಿಯನ್ನು ನೀಡಿದರು.
ಬಾಲನ್ಯಾಯ ಮಂಡಳಿಯ ಸದಸ್ಯೆ ಸಾಹಿರಾ ಇವರು ಕಾನೂನು ಸಂಘರ್ಷಕ್ಕೆ ಒಳಗಾದ ಮಕ್ಕಳಿಗೆ ಮಂಡಳಿಯು ಯಾವರೀತಿ ಕೆಲಸ ಮಾಡುತ್ತವೆ ಎಂಬುದರ ಬಗ್ಗೆ ಮಾಹಿತಿ ನೀಡಿದರು
ಸಹ ಶಿಕ್ಷಕಿ ಎಲ್ಲರನ್ನೂ ವಂದಿಸಿದರು.ಶಾಲಾ ಮುಖ್ಯ ಶಿಕ್ಷಕ, ಹಾಗೂ ಸಹ ಶಿಕ್ಷಕರು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.ಕಾರ್ಯಕ್ರಮದಲ್ಲಿ ಏಳನೇ ತರಗತಿ ಹಾಗೂ ಎಂಟನೇ ತರಗತಿ ವಿದ್ಯಾರ್ಥಿ ವಿದ್ಯಾರ್ಥಿನಿಯರು ಭಾಗವಹಿಸಿದ್ದರು.



