ಅಶಕ್ತರಿಗೆ ಸಹಾಯ ಹಸ್ತ ಸೇವಾ ಚಟುವಟಿಕೆ
ಪುತ್ತೂರು:- ಬಡವರ ಬಂಧು , ಕಾಂಗ್ರೆಸ್ ಪಕ್ಷದ ಜನಪ್ರಿಯ ನಾಯಕ ಸಾಮಾಜಿಕ, ಶೈಕ್ಷಣಿಕ, ಧಾರ್ಮಿಕ, ರಾಜಕೀಯ, ಕ್ಷೇತ್ರದ ಮುಖಂಡರು ಆಗಿರುವ ಕಾವು ಹೇಮನಾಥ್ ಶೆಟ್ಟಿಯವರ ಜನುಮದಿನದ ಅಂಗವಾಗಿ ಡಿಸೆಂಬರ್ 24 ರಂದು ಅಶ್ಮಿಕಂಪರ್ಟ್ ಬಪ್ಪಳಿಗೆ ಪುತ್ತೂರು ಸಭಾಂಗಣದಲ್ಲಿ ಬೆಳಿಗ್ಗೆ 11 ಗಂಟೆಗೆ ಅಶಕ್ತರಿಗೆ ಸಹಾಯ ಹಸ್ತ ಸೇವಾ ಚಟುವಟಿಕೆ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ ಎಂದು ಹೇಮನಾಥ್ ಶೆಟ್ಟಿಯವರ ಅಭಿಮಾನಿ ಬಳಗ ಪ್ರಕಟಣೆಯಲ್ಲಿ ತಿಳಿಸಿದೆ
ಕಾವು ಹೇಮನಾಥ್ ಶೆಟ್ಟಿಯವರು ಸುಮಾರು 40 ವರ್ಷಗಳಿಂದ ಸಾರ್ವಜನಿಕ ಸೇವೆಯಲ್ಲಿ ಗುರುತಿಸಿಕೊಂಡು ಬಡವರು, ದೀನದಲಿತರು, ಅಶಕ್ತರ ಪರವಾಗಿ ಸದಾ ಕೆಲಸ ಕಾರ್ಯವನ್ನು ಮಾಡಿರುತ್ತಾರೆ ಜೊತೆಗೆ ಸಮಾಜದಲ್ಲಿ ಜಾತ್ಯತೀತ ತತ್ವದ ಅಡಿಯಲ್ಲಿ ಸರ್ವರನ್ನು ಒಂದಾಗಿ ಕಾಣುವ ಮೂಲಕ ಲಕ್ಷಾಂತರ ಅಭಿಮಾನಿಗಳ ಪ್ರೀತಿ ವಿಶ್ವಾಸಕ್ಕೆ ಪಾತ್ರರಾಗಿದ್ದಾರೆ.
ಇವರ ಹುಟ್ಟು ಹಬ್ಬವನ್ನು ಪ್ರತಿ ವರ್ಷ ಪುತ್ತೂರಿನಲ್ಲಿ ಆಚರಿಸುವ ಮೂಲಕ ಬಡ ಜನತೆಗೆ ಸಹಾಯವಾಗುವ ಕಾರ್ಯಕ್ರಮವನ್ನು ಕಾವು ಹೇಮನಾಥ್ ಶೆಟ್ಟಿಯವರ ಅಭಿಮಾನಿ ಬಳಗ ಮಾಡಿಕೊಂಡು ಬಂದಿರುತ್ತದೆ
ಕಾರ್ಯಕ್ರಮದಲ್ಲಿ ಕರ್ನಾಟಕ ಘನ ಸರಕಾರದ ಮಾಜಿ ಸಚಿವರಾದ ಬಿ ರಮನಾಥ್ ರೈ, ಪುತ್ತೂರು ವಿಧಾನ ಸಭಾ ಕ್ಷೇತ್ರದ ಶಾಸಕರಾದ ಶ್ರೀ ಅಶೋಕ್ ಕುಮಾರ್ ರೈ ಮುಂತಾದ ಗಣ್ಯ ನಾಯಕರು ಭಾಗವಹಿಸಲಿದ್ದಾರೆ ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ.



