Subscribe to Updates
Get the latest creative news from FooBar about art, design and business.
Author: PrasakthaNews
ಬಂಟ್ವಾಳ : ಕೇಂದ್ರದ ಬಿಜೆಪಿ ಸರ್ಕಾರವು ಜನಪರವಾದ ಯಾವುದೇ ಹೊಸ ಯೋಜನೆಯನ್ನು ನೀಡದೆ ಕಾಂಗ್ರೆಸ್ ಸರಕಾರದ ಅವಧಿಯಲ್ಲಿ ಆದ ಅಭಿವೃದ್ಧಿ ಯೋಜನೆಗಳ ಹೆಸರು ಬದಲಾವಣೆ ಮಾಡಿ ಜನರನ್ನು ವಂಚಿಸುತ್ತಿದೆ ಎಂದು ಪಂಚ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿಯ ರಾಜ್ಯ ಉಪಾಧ್ಯಕ್ಷೆ ಪುಷ್ಪಾ ಅಮರನಾಥ್ ಟೀಕಿಸಿದರು. ಪೆ.09 ರಂದು ಸುಳ್ಯದಿಂದ ಆರಂಭವಾದ ಮನರೇಗಾ ಬಚಾವೋ ಸಂಗ್ರಾಮ್ ಪಾದಾಯಾತ್ರೆಯ ಬಂಟ್ವಾಳ ವಿಧಾನಸಭಾ ಕ್ಷೇತ್ರದ ನೆಟ್ಲಮುಡ್ನೂರು ಗ್ರಾಮದಲ್ಲಿ ನಡೆದ 2 ನೇ ದಿನದ ಬಹಿರಂಗ ಸಭೆಯನ್ನದ್ದೇಶಿಸಿ ಮಾತನಾಡಿದರು. ಮನರೇಗಾ ಯೋಜನೆಯು ದೇಶದ ಕೋಟ್ಯಂತರ ಬಡವರಿಗೆ ನೆರವಾಗಿದ್ದು, ಕೊರೋನಾ ಸಂದರ್ಭದಲ್ಲಂತೂ ವರದಾನವಾಗಿ ಪರಿಣಮಿಸಿದೆ. ಈ ದೇಶದ ಸ್ವಾತಂತ್ರ್ಯ ಹೋರಾಟದಲ್ಲಿ ಒಬ್ಬನೇ ಒಬ್ಬ ಪಾಲ್ಗೊಳ್ಳದ ಬಿಜೆಪಿ ಸಂಘ ಪರಿವಾರದ ಸದಸ್ಯರು ಭಾರತಕ್ಕೆ ಸ್ವಾತಂತ್ರ್ಯ ತಂದುಕೊಟ್ಟ ರಾಷ್ಟ್ರಪಿತ ಮಹಾತ್ಮ ಗಾಂಧೀಜಿಯವರನ್ನು ಒಪ್ಪುವುದಿಲ್ಲ. ಈ ಕಾರಣಕ್ಕಾಗಿ ಅವರು ಹೆಸರನ್ನು ಅಳಿಸಿಹಾಕುವ ಷಡ್ಯಂತ್ರದ ಭಾಗವಾಗಿ ಯೋಜನೆಯ ಹೆಸರು ಬದಲಾವಣೆ ಮಾಡಲಾಗಿದೆ ಎಂದರು. ಮಹಾತ್ಮ ಗಾಂಧಿ ರಾಷ್ಟ್ರೀಯ ಉದ್ಯೋಗ ಖಾತ್ರಿ ಯೋಜನೆಯಡಿ…
ರಾಜ್ಯ ಮಾಧ್ಯಮ ವಕ್ತಾರರಾಗಿ ಪತ್ರಕರ್ತ ಯೂಸುಫ್ ರೆಂಜಲಾಡಿ ಆಯ್ಕೆ ಪುತ್ತೂರು: ನಾಡು-ನುಡಿ ಹಾಗೂ ಸರಕಾರಿ ಕನ್ನಡ ಶಾಲೆಗಳ ಸಬಲೀಕರಣಕ್ಕಾಗಿ ರಾಜ್ಯಾದ್ಯಂತ ನಡೆಯುತ್ತಿರುವ `ಕನ್ನಡ ಶಾಲೆ ಉಳಿಸಿ ಬೆಳೆಸಿ’ ಅಭಿಯಾನದ ಕರ್ನಾಟಕ ರಾಜ್ಯ ಮಾಧ್ಯಮ ವಕ್ತಾರರಾಗಿ ಪುತ್ತೂರಿನ ಪತ್ರಕರ್ತ ಯೂಸುಫ್ ರೆಂಜಲಾಡಿಯವರನ್ನು ನೇಮಕಗೊಳಿಸಿದ್ದಾರೆ.ಪತ್ರಿಕೋಧ್ಯಮದ ಜೊತೆಗೆ ಸಾಮಾಜಿಕ ಹಾಗೂ ಶೈಕ್ಷಣಿಕ ಕ್ಷೇತ್ರಗಳಲ್ಲಿ ತೊಡಗಿಸಿಕೊಂಡಿರುವ ಯೂಸುಫ್ ರೆಂಜಲಾಡಿಯವರು ಕಳೆದ 12 ವರ್ಷಗಳಿಂದ ಪತ್ರಕರ್ತರಾಗಿ ಸೇವೆ ಸಲ್ಲಿಸುತ್ತಿದ್ದಾರೆ. 2 ಅವಧಿಗೆ ಕರ್ನಾಟಕ ಪತ್ರಕರ್ತರ ಸಂಘದ ತಾಲೂಕು ಅಧ್ಯಕ್ಷರಾಗಿ ಸೇವೆ ಸಲ್ಲಿಸಿದ್ದ ಇವರು ರೆಂಜಲಾಡಿ ಕೆವೈಎಂಎ ಅಧ್ಯಕ್ಷರಾಗಿ, ಸರ್ವೆ ಸೌಹಾರ್ದ ವೇದಿಕೆ ನಿರ್ದೇಶಕರಾಗಿ, ಸಂಯುಕ್ತ ಜಮಾಅತ್ ತಾಲೂಕು ಮಾಧ್ಯಮ ಕಾರ್ಯದರ್ಶಿಯಾಗಿ ಹೀಗೆ ಸಾಮಾಜಿಕ, ಧಾರ್ಮಿಕ, ಶೈಕ್ಷಣಿಕ ಕ್ಷೇತ್ರ ಸೇರಿದಂತೆ ಅನೇಕ ಸಂಘ ಸಂಸ್ಥೆಗಳಲ್ಲಿ ಸಕ್ರಿಯರಾಗಿದ್ದಾರೆ. ಇವರು ಪುತ್ತೂರು ತಾಲೂಕಿನಲ್ಲಿ ಶಿಥಿಲಾವಸ್ಥೆಯಲ್ಲಿದ್ದ ಅನೇಕ ಸರಕಾರಿ ಶಾಲೆಗಳ ಬಗ್ಗೆ ಪರಿಣಾಮಕಾರಿ ವರದಿ ಪ್ರಕಟಿಸುವ ಮೂಲಕ ಸಂಬಂಧಪಟ್ಟವರ ಗಮನ ಸೆಳೆದಿದ್ದಲ್ಲದೇ ಶಾಲೆಗಳ ಅಭಿವೃದ್ಧಿಗೆ ತನ್ನದೇ ಆದ ಕೊಡುಗೆ ನೀಡಿದ್ದಾರೆ.
ದುಬಾರಿಯಾಗುತ್ತಿರುವ ಶಿಕ್ಷಣದ ಕರಾಳ ಮುಖ* ಇಂದಿನ ಕಾಲದಲ್ಲಿ ಮಗುವೊಂದು ಜನಿಸಿದ ಕೂಡಲೇ ಪೋಷಕರನ್ನು ಕಾಡುವ ಮೊದಲ ಆತಂಕ ‘ಶಿಕ್ಷಣ’. ಒಂದು ಕಾಲದಲ್ಲಿ ಜ್ಞಾನದಾನದ ಪವಿತ್ರ ಕೇಂದ್ರಗಳಾಗಿದ್ದ ಶಾಲೆಗಳು ಇಂದು ಲಾಭ ಗಳಿಸುವ ಉದ್ದೇಶದ ಕಾರ್ಪೊರೇಟ್ ಸಂಸ್ಥೆಗಳಾಗಿ ಬದಲಾಗಿವೆ. ವಿದ್ಯೆ ಎಂಬುದು ‘ಸೇವೆ’ಯ ಹಣೆಪಟ್ಟಿ ಕಳೆದುಕೊಂಡು, ‘ಸರಕು’ ಆಗಿ ಮಾರುಕಟ್ಟೆಯಲ್ಲಿ ಹರಾಜಿಗಿಡಲ್ಪಟ್ಟಿದೆ. ಈ ವ್ಯವಸ್ಥೆಯಲ್ಲಿ ಬಡ ಮತ್ತು ಮಧ್ಯಮ ವರ್ಗದ ಪೋಷಕರು ಅಕ್ಷರಶಃ ನಲುಗಿ ಹೋಗುತ್ತಿದ್ದಾರೆ. *ಜ್ಞಾನದ ದೇಗುಲವೋ ಅಥವಾ ಹಣದ ಕಾರ್ಖಾನೆಯೋ*? ನಗರ ಪ್ರದೇಶಗಳಿಂದ ಹಿಡಿದು ಹಳ್ಳಿಗಳವರೆಗೆ ಇಂದು ಖಾಸಗಿ ಶಿಕ್ಷಣ ಸಂಸ್ಥೆಗಳ ಆರ್ಭಟ ಜೋರಾಗಿದೆ. ಡೊನೇಷನ್ ಎಂಬ ಹೆಸರಿನಲ್ಲಿ ಲಕ್ಷಾಂತರ ರೂಪಾಯಿಗಳನ್ನು ಸುಲಿಗೆ ಮಾಡಲಾಗುತ್ತಿದೆ. ಎಲ್‌ಕೆಜಿ ಸೀಟಿಗೂ ಲಕ್ಷಗಳ ಲೆಕ್ಕದಲ್ಲಿ ಹಣ ಕೇಳುವ ಈ ವ್ಯವಸ್ಥೆ, ಶಿಕ್ಷಣವನ್ನು ಕೇವಲ ಶ್ರೀಮಂತರ ಸೊತ್ತನ್ನಾಗಿ ಮಾಡುತ್ತಿದೆ. ಅಮ್ಮ ತನ್ನ ಮಗುವಿನ ಭವಿಷ್ಯಕ್ಕಾಗಿ ತಾನು ಪ್ರೀತಿಯಿಂದ ತೊಟ್ಟಿದ್ದ ಒಡವೆಗಳನ್ನು ಒತ್ತೆ ಇಡುತ್ತಿದ್ದಾಳೆ ಅಥವಾ ಮಾರುತ್ತಿದ್ದಾಳೆ. ಅಪ್ಪ ಮಗುವನ್ನು ದೊಡ್ಡ…
ಮಾಜಿ ಸಚಿವ ಬಿ ರಮನಾಥ್ ರೈ ಶಿಪಾರಸ್ಸಿನಂತೆ ನೇಮಕ* ಬಂಟ್ವಾಳ : ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿ ಕಾರ್ಮಿಕ ಘಟಕದ ರಾಜ್ಯ ಕಾರ್ಯದರ್ಶಿಯಾಗಿ ಬಂಟ್ವಾಳ ತಾಲೂಕಿನ ಹನೀಫ್ ಪೆರ್ಲಾಪು ಆಯ್ಕೆಯಾಗಿದ್ದಾರೆ. ಮಾಜಿ ಸಚಿವ ಹಾಗೂ ಬಂಟ್ವಾಳ ಕ್ಷೇತ್ರದ ಮಾಜಿ ಶಾಸಕ ಬಿ.ರಮಾನಾಥ ರೈ ಅವರ ಶಿಫಾರಸ್ಸಿನಂತೆ ಕೆಪಿಸಿಸಿ ಕಾರ್ಮಿಕ ಘಟಕದ ರಾಜ್ಯ ಅಧ್ಯಕ್ಷ ಅವರು ಹನೀಫ್ ಪೆರ್ಲಾಪು ಅವರನ್ನು ರಾಜ್ಯ ಕಾರ್ಯದರ್ಶಿ ಹುದ್ದೆಗೆ ನೇಮಕ ಮಾಡಿದ್ದಾರೆ. ನೇಮಕಾತಿ ಆದೇಶ ಪತ್ರವನ್ನು ರಾಜ್ಯಾಧ್ಯಕ್ಷ ಪುಟ್ಟಸ್ವಾಮಿ ಗೌಡ ಅವರು ಬೆಂಗಳೂರಿನ ಕೆಪಿಸಿಸಿ ಕಚೇರಿಯಲ್ಲಿ ಹನೀಫ್ ಪೆರ್ಲಾಪು ಅವರಿಗೆ ಹಸ್ತಾಂತರಿಸಿದರು. ಈ ಸಂದರ್ಭದಲ್ಲಿ ಕೆಪಿಸಿಸಿ ಕಾರ್ಮಿಕ ಘಟಕದ ರಾಜ್ಯ ಉಪಾಧ್ಯಕ್ಷೆ ಹರಿಣಿ ಗೌಡ, ಸರಕಾರಿ ಮುಖ್ಯ ಸಚೇತಕರ ಆಪ್ತ ಕಾರ್ಯದರ್ಶಿ ಸಾದಿಕ್ ಬರೆಪಾಡಿ, ದ.ಕ.ಜಿಲ್ಲಾ ಯುವ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಮಹಮ್ಮದ್ ಉನೈಸ್ ಉಪಸ್ಥಿತರಿದ್ದರು.
ಕರ್ನಾಟಕ ದಿನಾಂಕ 6 ಜನವರಿ 2026 ಶಿಕ್ಷಣವು ಇಂದಿನ ದಿನಗಳಲ್ಲಿ ಬಂಡವಾಳಶಾಹಿಗಳ ಕೈಯಲ್ಲಿ ಸಿಲುಕಿ ಬರಿ ವ್ಯಾಪಾರವಾಗಿ ಮಾರ್ಪಡುತ್ತಿರುವ ಈ ಕಾಲಘಟ್ಟದಲ್ಲಿ, ಕರುನಾಡಿನಾದ್ಯಂತ *ಕನ್ನಡ ಶಾಲೆ ಉಳಿಸಿ ಬೆಳೆಸಿ*’ ಅಭಿಯಾನವು ಒಂದು ಕಿಚ್ಚಾಗಿ ಪರಿಣಮಿಸಿದೆ. ಸರ್ಕಾರಿ ಶಾಲೆಗಳ ಅಸ್ತಿತ್ವ ಮತ್ತು ಕನ್ನಡದ ಉಳಿವಿಗಾಗಿ ಹಗಲಿರುಳು ಶ್ರಮಿಸುತ್ತಿರುವ ಈ ಅಭಿಯಾನವು ಈಗ ಜನಸಾಮಾನ್ಯರ ಧ್ವನಿಯಾಗಿ ಮಾರ್ಪಟ್ಟಿದೆ. *ವೈರಲ್ ಕ್ರಾಂತಿ ಗೀತೆ* ಜನಸಾಮಾನ್ಯರಲ್ಲಿ ಚಿಂತನ-ಮಂಥನ ಈ ಅಭಿಯಾನದ ಭಾಗವಾಗಿ ರಚಿಸಲಾದ ‘ಕ್ರಾಂತಿ ಗೀತೆ’ ಇಂದು ಸಾಮಾಜಿಕ ಜಾಲತಾಣಗಳಲ್ಲಿ ಸಖತ್ ವೈರಲ್ ಆಗಿದ್ದು, ನಾಡಿನಾದ್ಯಂತ ನವ ಸಂಚಲನವನ್ನು ಸೃಷ್ಟಿಸುತ್ತಿದೆ. ಕೇವಲ ಮನರಂಜನೆಯಾಗಿ ಉಳಿಯದೆ, ಈ ಹಾಡಿನ ಪ್ರತಿಯೊಂದು ಸಾಲುಗಳು ಜನಸಾಮಾನ್ಯರನ್ನು ಆಳವಾಗಿ ಚಿಂತಿಸುವಂತೆ ಮಾಡಿದೆ. “ನಮ್ಮ ಕನ್ನಡ ಶಾಲೆಗಳೇಕೆ ಹೀಗಾಗಿವೆ?” ಎಂಬ ಪ್ರಶ್ನೆಯನ್ನು ಪ್ರತಿಯೊಬ್ಬ ಕನ್ನಡಿಗನ ಆತ್ಮಸಾಕ್ಷಿಗೆ ತಟ್ಟುವಂತೆ ಮಾಡುವಲ್ಲಿ ಈ ಹಾಡು ಯಶಸ್ವಿಯಾಗಿದೆ. ಇದು ಬರಿ ಹಾಡಾಗಿ ಉಳಿಯದೆ, ಅಕ್ಷರ ಲೋಕದ ಹೋರಾಟಕ್ಕೆ ಸ್ಪೂರ್ತಿಯ ಸೆಲೆಯಾಗಿದೆ. …
ಸಹಾಯಕ ಆಯುಕ್ತರ ಆದೇಶ ವಿಟ್ಲ:- ವಿಟ್ಲ ಪೋಲಿಸ್ ಠಾಣಾ ವ್ಯಾಪ್ತಿಯ ಕೇಪು ಗ್ರಾಮದ ಬಡಕೋಡಿ ನಿವಾಸಿ ಗಣೇಶ ಪೂಜಾರಿಯನ್ನು ಹಲವು ಅಪರಾಧ ಕೃತ್ಯಗಳಲ್ಲಿ ಭಾಗಿಯಾದ ಹಿನ್ನೆಲೆಯಲ್ಲಿ ಗಡಿಪಾರು ಮಾಡಿ ಆದೇಶ ಮಾಡಲಾಗಿದೆ ಹಲ್ಲೆ, ದೊಂಬಿ, ಕೊಲೆ ಯತ್ನ, ಜೂಜು ಸರ್ಕಾರಿ ನೌಕರರ ಕರ್ತವ್ಯಕ್ಕೆ ಅಡ್ಡಿ ಸೇರಿದಂತೆ ಒಟ್ಟು 16 ಅಪರಾಧ ಪ್ರಕರಣಗಳಲ್ಲಿ ಗಣೇಶ ಪೂಜಾರಿ ಆರೋಪಿಯಾಗಿದ್ದಾನೆ. ವಿಟ್ಲ ಪೋಲಿಸ್ ಠಾಣಾ ವ್ಯಾಪ್ತಿಯಲ್ಲಿ ಶಾಂತಿ ಸುವ್ಯವಸ್ಥೆ ಕಾಪಾಡುವ ಹಿತ ದೃಷ್ಟಿಯಿಂದ ಠಾಣಾಧಿಕಾರಿಗಳ ವರದಿಯ ಮೇರೆಗೆ ಮಂಗಳೂರು ಉಪವಿಭಾಗೀಯ ದಂಡಾಧಿಕಾರಿ ಹಾಗೂ ಸಹಾಯಕ ಆಯುಕ್ತರು ಗಡಿಪಾರು ಆದೇಶ ನೀಡಿದ್ದಾರೆ. ದಕ್ಷಿಣ ಕನ್ನಡ ಜಿಲ್ಲೆಯಿಂದ ಹಾಸನ ಆಲೂರು ಪೋಲಿಸ್ ಠಾಣಾ ವ್ಯಾಪ್ತಿಗೆ ಗಡಿಪಾರು ಮಾಡುವ ಬಗ್ಗೆ ಆದೇಶದಲ್ಲಿ ಸ್ಪಷ್ಟಪಡಿಸಿದ್ದಾರೆ ಸದ್ರಿ ಆದೇಶದಂತೆ ವಿಟ್ಲ ಪೋಲಿಸರು ಸುರಕ್ಷಿತವಾಗಿ ಆಲೂರು ಪೋಲಿಸ್ ಠಾಣೆಗೆ ವರ್ಗಾಯಿಸಿದ್ದಾರೆ.
ಶಿಕ್ಷಣಕ್ಕೆ ಬದುಕನ್ನೇ ಅರ್ಪಿಸಿದ ಆದರ್ಶ ಶಿಕ್ಷಕಿ” – ಆಶಾ ನಾಯಕ್* ವಿಟ್ಲ:- ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಮಾತನಾಡಿದ ಕ್ಷೇತ್ರದ ದೈಹಿಕ ಶಿಕ್ಷಣಾಧಿಕಾರಿಯೂ,ಪ್ರಭಾರ ಕ್ಷೇತ್ರ ಶಿಕ್ಷಣಾಧಿಕಾರಿ ಆಶಾ ನಾಯಕ್, ಶಿಕ್ಷಣ ಕ್ಷೇತ್ರಕ್ಕೆ ತಮ್ಮ ಬದುಕನ್ನೇ ಸಮರ್ಪಿಸಿದ ಒಬ್ಬ ಉತ್ತಮ ಶಿಕ್ಷಕಿ ನಿವೃತ್ತಿಯಾಗುತ್ತಿರುವುದು ಹೆಮ್ಮೆಯ ಜೊತೆಗೆ ನೋವಿನ ಕ್ಷಣವೂ ಹೌದು. ಮಕ್ಕಳ ಸರ್ವಾಂಗೀಣ ಬೆಳವಣಿಗೆಗೆ ಶ್ರಮಿಸಿದ ಕುಸುಮ ಎನ್. ಅವರ ಸೇವೆ ಸದಾ ಸ್ಮರಣೀಯವಾಗಿರುತ್ತದೆ ಎಂದು ಹೇಳಿದರು. *“ತರಗತಿಗೊಂದು ಶಿಕ್ಷಕರು ಅಗತ್ಯ” – ಶಿವಪ್ರಸಾದ್ ಶೆಟ್ಟಿ ಅಭಿಪ್ರಾಯ* ಸರಕಾರಿ ನೌಕರರ ಸಂಘದ ಜಿಲ್ಲಾಧ್ಯಕ್ಷ ಶಿವಪ್ರಸಾದ್ ಶೆಟ್ಟಿ,ಮಾತಾಡಿ ಕುಸುಮ ಎನ್. ಅವರು ಹಲವಾರು ಶಾಲೆಗಳಲ್ಲಿ ಶಿಕ್ಷಕಿಯಾಗಿ ಸೇವೆ ಸಲ್ಲಿಸಿ, 2015ರಲ್ಲಿ ಕಾಡುಮಠ ಶಾಲೆಗೆ ವರ್ಗಾವಣೆಯಾಗಿ ಬಂದ ನಂತರ ಪ್ರಭಾರ ಮುಖ್ಯ ಶಿಕ್ಷಕಿಯಾಗಿ ಯಶಸ್ವಿಯಾಗಿ ಕಾರ್ಯನಿರ್ವಹಿಸಿದ್ದಾರೆ. ಮಕ್ಕಳ ಪ್ರೀತಿಗೆ ಪಾತ್ರರಾದ ಅವರು ಶಿಕ್ಷಕರ ಸಂಘಟನೆಯಲ್ಲಿ ಸಹ ಕ್ರಿಯಾಶೀಲವಾಗಿ ಗುರುತಿಸಿಕೊಂಡಿರುವ ನಮ್ಮ ನೆಚ್ಚಿನ ಮಿತ್ರೆಯೂ ಹೌದು ಎಂದು ಅಭಿಪ್ರಾಯ ವ್ಯಕ್ತಪಡಿಸಿದರು. ಮುಂದುವರಿದು ಮಾತನಾಡಿದ ಅವರು, “ತರಗತಿಗೊಂದು ಶಿಕ್ಷಕರು…
ಜಮಾಹತ್ ಆಡಳಿತ ಸಮಿತಿ ಕಾರ್ಯದರ್ಶಿ ಖಾದರ್ ನಾರ್ಶ ಹೇಳಿಕೆ ಬಂಟ್ವಾಳ ತಾಲೂಕಿನ ಕೊಳ್ನಾಡು ಗ್ರಾಮದ ರಹ್ಮಾನಿಯ ಜುಮಾ ಮಸೀದಿ ನಾರ್ಶ ಇಲ್ಲಿನ 84 ಜಮಾತ್ ಸದಸ್ಯರನ್ನು ಹೊಂದಿರುವ ಮಹಲ್ಲಿಗೆ ಹಲವಾರು ಮಹಲ್ಲಿನ ಕಾಝಿ, 1000ಕ್ಕಿಂತಲೂ ಅಧಿಕ ಮಸೀದಿ ಮತ್ತು ವಿಧ್ಯಭ್ಯಾಸ ಕೇಂದ್ರದ ರೂವಾರಿಗಳು, ಕೇರಳದ ಕೋಝಿಕೋಡಲ್ಲಿ 125 ಎಕ್ರೆ ಜಾಗದಲ್ಲಿ ನಾಲೇಜ್ ಸಿಟಿ, ಶರಿಯ ಸಿಟಿ, ಯೂನಿಯನ್ ಮೆಡಿಕಲ್ ಕಾಲೇಜು ಸ್ಥಾಪಿಸುತ್ತಿರುವ ರೂವಾರಿಗಳು, ಅನಾಥ ಮಕ್ಕಳನ್ನು ದತ್ತು ಪಡೆದು ಅವರಿಗೆ ಆಶ್ರಯ ನೀಡಿ ಅವರಿಗೆ ಉತ್ತಮ ವಿಧ್ಯಭ್ಯಾಸ ನೀಡುತ್ತಿರುವ ಇಂಡಿಯನ್ ಗ್ರ್ಯಾಂಡ್ ಮುಫ್ತಿ ಸುಲ್ತಾನುಲ್ ಉಲಮಾ ಎ.ಪಿ ಅಬೂಬಕ್ಕರ್ ಮುಸ್ಲಿಯಾರ್ ನಾರ್ಶ ರಹ್ಮಾನಿಯ ಜುಮಾ ಮಸೀದಿಯ ಕಾಝಿಯಾಗಿ ದಿನಾಂಕ:30/12/2025ರಂದು ಅಧಿಕಾರ ವಹಿಸಿ ಕೊಲ್ಲಲಿದ್ದಾರೆ, ಜಮಾತ್ ಸಮಿತಿಯ ಅಧ್ಯಕ್ಷರಾದ ಹಮೀದ್ ನಾರ್ಶ ರವರ ನೇತೃತ್ವದಲ್ಲಿ ನಾಳೆ ಮರ್ಕಝ್ಗೆ ತೆರಲಿ ಅಂಗೀಕಾರ ಪಡೆಯುವ ಕಾರ್ಯಕ್ರಮ ನಡೆಯಲಿದೆ, ನಾಳಿನ ಕಾಝಿ ಅಂಗೀಕಾರ ಕಾರ್ಯಕ್ರಮದಲ್ಲಿ ಜಮಾತ್ ಖತೀಬ್ ಅಲ್ ಹಾಜ್ ಸುಲೈಮಾನ್ ಮುಸ್ಲಿಯಾರ್ ಮತ್ತು ಜಮಾತ್…
ಮಾಜಿ ಸಚಿವ ಬಿ ರಮನಾಥ್ ರೈ ಭಾಗಿ ಇಂದು (28-12-2025) ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ ಪಕ್ಷದ 141ನೇ ಸಂಸ್ಥಾಪನಾ ದಿನಾಚರಣೆ ಪ್ರಯುಕ್ತ ದ.ಕ.ಜಿಲ್ಲಾ ಕಾಂಗ್ರೆಸ್ ವತಿಯಿಂದ ಧ್ವಜಾರೋಹಣ ಕಾರ್ಯಕ್ರಮ ಮಲ್ಲಿಕಟ್ಟೆಯ ಕಾಂಗ್ರೆಸ್ ಭವನದಲ್ಲಿ ಜರುಗಿತು. ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷರಾದ ಕೆ.ಹರೀಶ್ ಕುಮಾರ್ ರವರು ಧ್ವಜಾರೋಹಣ ನೆರವೇರಿಸಿದರು. ಬಳಿಕ ಮಾತನಾಡಿದ ಅವರು, ಕಾಂಗ್ರೆಸ್ ಪಕ್ಷ ರಾಷ್ಟ್ರನಿರ್ಮಾಣದಲ್ಲಿ ನಿರ್ವಹಿಸಿದ ಪಾತ್ರ ಅನನ್ಯ. ಸ್ವಾತಂತ್ರ್ಯದ ಬಳಿಕ ದೇಶದ ಸರ್ವಾಂಗೀಣ ಅಭಿವೃದ್ಧಿಯಲ್ಲಿ ಕಾಂಗ್ರೆಸ್ ಪಕ್ಷದ ಕೊಡುಗೆ ಅಪಾರ. ಕಾಂಗ್ರೆಸ್ ಇಂದಿಗೂ ಬಡವರು, ಶೋಷಿತರು, ಅವಕಾಶ ವಂಚಿತರು ಸೇರಿದಂತೆ ದೇಶದ ನಾಗರಿಕರ ಧ್ವನಿಯಾಗಿದ್ದು, ಸಂವಿಧಾನ, ಪ್ರಜಾಪ್ರಭುತ್ವ ಆಶಯಗಳನ್ನು ರಕ್ಷಿಸುವ ಕೆಲಸ ಮಾಡುತ್ತಿದೆ. ಬ್ರಿಟಿಷರ ದಾಸ್ಯದ ಸಂಕೋಲೆಯಿಂದ ಭಾರತವನ್ನು ಮುಕ್ತಗೊಳಿಸಲು ಕಾಂಗ್ರೆಸ್ ಮಹನೀಯರ ತ್ಯಾಗ, ಬಲಿದಾನ ಸ್ಮರಣೀಯ ಎಂದು ಹೇಳಿದರು. ಈ ಸಂದರ್ಭ ಮಾಜಿ ಸಚಿವರಾದ ಬಿ.ರಮಾನಾಥ ರೈ, ಮಾಜಿ ಶಾಸಕರಾದ ಜೆ.ಆರ್.ಲೋಬೊ, ಕೆಪಿಸಿಸಿ ಕಾನೂನು ಘಟಕದ ಅಧ್ಯಕ್ಷರಾದ ಸಿ.ಎಂ ಧನಂಜಯ, ನಿಗಮ ಅಧ್ಯಕ್ಷರಾದ ಶಾಲೆಟ್…
ತಮಿಳುನಾಡು ಮೂಲದ ಮೂವರು ಕಳ್ಳಿಯರ ಬಂಧನ ಪಡುಬಿದ್ರೆ:-ಡಿ 27 ಹೆಜಮಾಡಿಯ ಶ್ರೀ ಬ್ರಹ್ಮ ಬೈದರ್ಕಳ ಗರಡಿಯ ನೇಮೋತ್ಸದಲ್ಲಿ ವಯಸ್ಕ ಮಹಿಳೆಯ ಚಿನ್ನದ ಸರ ಕಳವು ಮಾಡಿದ ಪ್ರಕರಣದಲ್ಲಿ ಮೂವರು ಆರೋಪಿಗಳನ್ನು ಪಡುಬಿದ್ರೆ ಪೊಲೀಸರು ಬಂಧಿಸಿದ್ದಾರೆ ತಮಿಳುನಾಡು ರಾಜ್ಯದ ಕೃಷ್ಣಗಿರಿ ಮಾರಿಯಮ್ಮ ಬೀದಿಯ ಶೀಥಲ್, ಕಾಳಿಯಮ್ಮ ಹಾಗೂ ಮಾರಿ ಬಂದಿತ ಆರೋಪಿಗಳು ಹೆಜಮಾಡಿಯ ಕಮಲ (78) ಎಂಬವರು ಡಿ 24 ರಂದು ಮನೆಯ ಬಳಿಯ ಶ್ರೀಬ್ರಹ್ಮ ಬೈದರ್ಕಳ ಗರಡಿಯ ನೇಮೋತ್ಸಕ್ಕೆ ಹೋಗಿದ್ದರು ದೈವದ ದರ್ಶನ ಮಾಡಿ ನಂತರ ಅಲ್ಲಿಗೆ ಬಂದ ತನ್ನ ಶಾರದಾ ಪೂಜಾರಿ ಎಂಬವರು ಕಮಲ ಅವರ ಕುತ್ತಿಗೆಯಲ್ಲಿ ಚಿನ್ನದ ಸರ ಇಲ್ಲದೇ ಇರುವ ಬಗ್ಗೆ ತಿಳಿಸಿದರು ಡಿ.25 ರಂದು ಸಂಜೆ ದೇವಸ್ಥಾನದ ಆಡಳಿತ ಮಂಡಳಿಯವರು ಸಿಸಿ ಕ್ಯಾಮರಾ ಪರಿಶೀಲಿಸಿದಾಗ ಮೂರು ಅಪರಿಚಿತ ಮಹಿಳೆಯರು ಕಮಲ ಅವರಿಗೆ ಸಹಾಯ ಮಾಡುವ ನೆಪದಲ್ಲಿ ಅವರ ಗಮನಕ್ಕೆ ಬಾರದೆ ಕುತ್ತಿಗೆಯಲ್ಲಿದ್ದ ಸುಮಾರು 3 ಪವನ್ ಚಿನ್ನದ ಸರವನ್ನು ಕಳವು ಮಾಡಿರುವುದು…


