Subscribe to Updates
Get the latest creative news from FooBar about art, design and business.
Author: PrasakthaNews
ಮಂಗಳೂರು ಜಿಲ್ಲಾ ಸೆಷನ್ಸ್ ನ್ಯಾಯಾಲಯದಿಂದ ಆದೇಶ ಗೇರುಕಟ್ಟೆ: ಪೋಕ್ಸೋ ಪ್ರಕರಣದ ಆರೋಪಿಗೆ ಮಂಗಳೂರು ಜಿಲ್ಲಾ ಸೆಷನ್ಸ್ ನ್ಯಾಯಾಲಯ ನಿರೀಕ್ಷಣಾ ಜಾಮೀನು ಮಂಜೂರು ಮಾಡಿದೆ. ಬೆಳ್ತಂಗಡಿ ಪೋಲಿಸ್ ಠಾಣೆಯಲ್ಲಿ ಅಪರಾಧ ಸಂಖ್ಯೆ 140/2025 ರಂತೆ ಬೆಳ್ತಂಗಡಿ ತಾಲೂಕು, ಕಳಿಯ ಗ್ರಾಮದ ನಿವಾಸಿಯಾದ ಮಹಮ್ಮದ್ ಎಂಬವರ ವಿರುದ್ಧ ಪೋಕ್ಸೋ ಕಾಯ್ದೆಯಡಿ ದಾಖಲಾಗಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ನ್ಯಾಯಾಲಯಕ್ಕೆ ನಿರೀಕ್ಷಣಾ ಜಾಮೀನು ಕೋರಿ ಅರ್ಜಿ ಸಲ್ಲಿಸಿದ್ದರು. ಈ ಜಾಮೀನು ಅರ್ಜಿಯನ್ನು ಪರಿಶೀಲಿಸಿ ವಾದ ಪ್ರತಿವಾದಗಳನ್ನು ಆಲಿಸಿದ ಮಾನ್ಯ ನ್ಯಾಯಾಲಯ ಆರೋಪಿಗೆ ನಿರೀಕ್ಷಣಾ ಜಾಮೀನು ಮಂಜೂರು ಮಾಡಿದೆ. ಆರೋಪಿ ಪರವಾಗಿ ಲೆಕ್ಸ್ ವಿಷನ್ ಲಾ ಛೇಂಬರ್ ನ ವಕೀಲರಾದ ನವಾಝ್ ಶರೀಫ್ ಎ ಹಾಗೂ ಇರ್ಷಾದ್ ವಾದಿಸಿದ್ದರು.
*ಕಾರ್ಯಕ್ರಮದಲ್ಲಿ ಹಲವು ಗಣ್ಯರು ಭಾಗಿ* ಬಂಟ್ವಾಳ : ಹಿರಿಯ ಸಾಮಾಜಿಕ ರಾಜಕೀಯ ಮುಂದಾಳು ಕರ್ನಾಟಕ ಗೇರು ಅಭಿವೃದ್ಧಿ ನಿಗಮದ ಮಾಜಿ ಅಧ್ಯಕ್ಷ ಹಾಜಿ ಬಿ.ಎಚ್ ಖಾದರ್ ಅವರು ಈ ಸಾಲಿನ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿಗೆ ಪಾತ್ರರಾಗಿದ್ದು ಅವರನ್ನು ಜಮೀಯ್ಯತುಲ್ ಫಲಾಹ್ ಬಂಟ್ವಾಳ ಘಟಕದ ವತಿಯಿಂದ ಬಂಟ್ವಾಳದ ಬಿ.ಎಚ್ ಖಾದರ್ ಅವರ ನಿವಾಸದಲ್ಲಿ ಬುಧವಾರ ನಡೆದ ಕಾರ್ಯಕ್ರಮದಲ್ಲಿ ಅಭಿನಂದಿಸಿ ಸನ್ಮಾನಿಸಲಾಯಿತು. ಕಾರ್ಯಕ್ರಮದಲ್ಲಿ ಅಭಿನಂದನಾ ಭಾಷಣ ಮಾಡಿದ ಉಪನ್ಯಾಸಕ ಅಬ್ದುಲ್ ರಝಾಕ್ ಅನಂತಾಡಿ, ಬಂಟ್ವಾಳ ಹಮ್ಮಬ್ಬ ಖಾದರ್ ಅವರು ತಮ್ಮ ತಂದೆಯಿಂದ ಬಳುವಳಿಯಾಗಿ ಬಂದ ವ್ಯವಹಾರವನ್ನು ಮುನ್ನಡೆಸುತ್ತಾ ಬದುಕು ಕಟ್ಟಿಕೊಂಡವರು, 1974 ರಲ್ಲಿ ನೇತ್ರಾವತಿಯಲ್ಲಿ ಬಂದ ದೊಡ್ಡ ಪ್ರವಾಹದ ನಂತರ ತನ್ನ ವ್ಯವಹಾರವನ್ನು ಕಳೆದುಕೊಂಡು ಸಾಮಾಜಿಕ, ರಾಜಕೀಯ ಕ್ಷೇತ್ರಕ್ಕೆ ಪಾದಾರ್ಪಣೆ ಮಾಡಿದರು. ಹಿರಿಯ ರಾಜಕಾರಣಿ ಶಿವರಾಮ ಶೆಟ್ಟರ ಪ್ರಭಾವದಿಂದ ರಾಜಕೀಯ ಪ್ರವೇಶಿಸಿ ವಿವಿಧ ಹುದ್ದೆಗಳನ್ನು ಅಲಂಕರಿಸಿದರು. ಕೇಂದ್ರ ಮತ್ತು ರಾಜ್ಯ ಸರಕಾರಗಳ ವಿವಿಧ ಮಂಡಳಿ, ಸಮಿತಿ , ನಿಗಮಗಳ ಜವಾಬ್ದಾರಿಯುತ ಹುದ್ದೆಗಳಲ್ಲಿ…
ಕೆಪಿಸಿಸಿ ಕಚೇರಿಯಲ್ಲಿ ಸುದ್ದಿಗೋಷ್ಠಿ ನಡೆಸಿದ ಎಐಸಿಸಿ ಪ್ರಧಾನ ಕಾರ್ಯದರ್ಶಿ ಫೈಲಟ್* ಬೆಂಗಳೂರು:- ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್ ಇಬ್ಬರೂ ಪಕ್ಷದ ಹೈಕಮಾಂಡ್ ನಿರ್ಧಾರಕ್ಕೆ ಬದ್ದರಾಗಿರುತ್ತಾರೆ. ಏಕೆಂದರೆ 2028ರಲ್ಲಿ ಪಕ್ಷವನ್ನು ಮತ್ತೆ ಅಧಿಕಾರಕ್ಕೆ ತರುವುದು ಅತ್ಯಂತ ಮುಖ್ಯವಾಗಿದೆ ಎಂದು ಎಐಸಿಸಿ ಪ್ರಧಾನ ಕಾರ್ಯದರ್ಶಿ ಸಚಿನ್ ಪೈಲಟ್ ಹೇಳಿದ್ದಾರೆ. ಬೆಂಗಳೂರಿನ ಕೆಪಿಸಿಸಿ ಕಚೇರಿಯಲ್ಲಿ ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಅವರು ಮುಖ್ಯಮಂತ್ರಿಯಾಗಿರಲಿ ಅಥವಾ ಪ್ರದೇಶ ಕಾಂಗ್ರೆಸ್ ಸಮಿತಿ ಅಧ್ಯಕ್ಷರಾಗಿರಲಿ ಪಕ್ಷದ ಹೈಕಮಾಂಡ್ ನಿರ್ಧಾರಕ್ಕೆ ಬದ್ದರಾಗಿರುವುದಿಲ್ಲ ಎಂದು ಪಕ್ಷದ ಯಾವ ನಾಯಕರು ಹೇಳಿದ್ದಾರೆ ತಿಳಿಸಿ ಈ ನಿರ್ಧಾರ ರಾಜ್ಯದ ಪ್ರತಿಯೊಬ್ಬ ಕಾಂಗ್ರೆಸ್ ಕಾರ್ಯಕರ್ತರಿಗೂ ಸ್ವೀಕಾರ್ಹ ನಾವು ನಮ್ಮ ಭರವಸೆಗಳನ್ನು ಈಡೇರಿಸುತ್ತೇವೆ ಮತ್ತು 2028 ರಲ್ಲಿ ಇನ್ನೂ ಹೆಚ್ಚಿನ ಬಹುಮತದೊಂದಿಗೆ ರಾಜ್ಯವನ್ನು ಮತ್ತೊಮ್ಮೆ ಗೆಲ್ಲಲು ನಾವು ಕೆಲಸ ಮಾಡುತ್ತಿದೆ ಎಂದರು ಶಿವಕುಮಾರ್ ಸಿಎಂ ಸಿದ್ದರಾಮಯ್ಯ ಅವರನ್ನು ತಮ್ಮ ಅಣ್ಣ ಎಂದು ಕರೆದಾಗ ಸಿದ್ದರಾಮಯ್ಯ ಅವರು ನನ್ನ ಕಿರಿಯ ಸಹೋದರ ಎಂದಾಗ ವಿಷಯ…
ಹಲವು ಗಣ್ಯರು ಕಾರ್ಯಕ್ರಮದಲ್ಲಿ ಭಾಗಿ* ಬಂಟ್ವಾಳ : ಇಲ್ಲಿನ ಕೆಳಗಿನಪೇಟೆ ತೌಹೀದ್ ಆಂಗ್ಲ ಮಾಧ್ಯಮ ಶಾಲೆಯ 2025-26ನೇ ಸಾಲಿನ ಶಾಲಾ ವಾರ್ಷಿಕೋತ್ಸವ, ಕ್ರೀಡಾಕೂಟ ಹಾಗೂ ಮಿಲಾದ್ ಪೆಸ್ಟ್ ಕಾರ್ಯಕ್ರಮ ಇತ್ತೀಚೆಗೆ ಶಾಲಾ ಆವರಣದಲ್ಲಿ ನಡೆಯಿತು. ವಾರ್ಷಿಕ ಕ್ರೀಡಾಕೂಟದ ಅಧ್ಯಕ್ಷತೆಯನ್ನು ಶಾಲಾ ರಕ್ಷಕ ಶಿಕ್ಷಕ ಸಂಘದ ಅಧ್ಯಕ್ಷ ಮಹಮ್ಮದ್ ಹನೀಫ್ ವಹಿಸಿದ್ದರು. ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದ ಬಂಟ್ವಾಳ ಅಗ್ನಿಶಾಮಕ ಠಾಣಾಧಿಕಾರಿ ಹರೀಶ್, ಯುನೈಟೆಡ್ ಎಂಪವರ್ಮೆಂಟ್ ಅಸೋಸಿಯೇಷನ್ ರಾಜ್ಯ ಕಾರ್ಯದರ್ಶಿ ಇಮ್ಮಿಯಾಝ್ ಗೋಳ್ತಮಜಲು ಕ್ರೀಡಾ ಚಟುವಟಿಕೆಗಳ ಬಗ್ಗೆ ಮಾಹಿತಿ ನೀಡಿದರು. ಮಿಲಾದ್ ಪೆಸ್ಟ್ ಕಾರ್ಯಕ್ರಮವು ಶಾಲಾ ಸಂಚಾಲಕ ಹಾಜಿ ಅಬ್ದುಲ್ ರಹಮಾನ್ ಅವರ ಅಧ್ಯಕ್ಷತೆಯಲ್ಲಿ ನಡೆಯಿತು. ಮೌಲಾನ ಅಬ್ದುಲ್ ಸಲಾಂ ಯಾಮನಿ ಉದ್ಘಾಟಿಸಿದರು. ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದ ಮೌಲಾನ ಸಿರಾಜುದ್ದೀನ್ ಮದನಿ ಮಾತನಾಡಿ ಶುಭ ಹಾರೈಸಿದರು. ಮದ್ರಸ ಮುಖ್ಯ ಶಿಕ್ಷಕ ಅಬ್ದುಲ್ ಮಜೀದ್ ಪೈಝಿ ಉಪಸ್ಥಿತರಿದ್ದರು. ಶಾಲಾಡಳಿತ ಸಮಿತಿ ಅಧ್ಯಕ್ಷ ಅಡ್ವಕೇಟ್ ರಿಯಾಝ್ ಹುಸೈನ್ ರವರ ಅಧ್ಯಕ್ಷತೆಯಲ್ಲಿ ನಡೆದ ಶಾಲಾ…
ಅಶಕ್ತರಿಗೆ ಸಹಾಯ ಹಸ್ತ ಸೇವಾ ಚಟುವಟಿಕೆ ಪುತ್ತೂರು:- ಬಡವರ ಬಂಧು , ಕಾಂಗ್ರೆಸ್ ಪಕ್ಷದ ಜನಪ್ರಿಯ ನಾಯಕ ಸಾಮಾಜಿಕ, ಶೈಕ್ಷಣಿಕ, ಧಾರ್ಮಿಕ, ರಾಜಕೀಯ, ಕ್ಷೇತ್ರದ ಮುಖಂಡರು ಆಗಿರುವ ಕಾವು ಹೇಮನಾಥ್ ಶೆಟ್ಟಿಯವರ ಜನುಮದಿನದ ಅಂಗವಾಗಿ ಡಿಸೆಂಬರ್ 24 ರಂದು ಅಶ್ಮಿಕಂಪರ್ಟ್ ಬಪ್ಪಳಿಗೆ ಪುತ್ತೂರು ಸಭಾಂಗಣದಲ್ಲಿ ಬೆಳಿಗ್ಗೆ 11 ಗಂಟೆಗೆ ಅಶಕ್ತರಿಗೆ ಸಹಾಯ ಹಸ್ತ ಸೇವಾ ಚಟುವಟಿಕೆ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ ಎಂದು ಹೇಮನಾಥ್ ಶೆಟ್ಟಿಯವರ ಅಭಿಮಾನಿ ಬಳಗ ಪ್ರಕಟಣೆಯಲ್ಲಿ ತಿಳಿಸಿದೆ ಕಾವು ಹೇಮನಾಥ್ ಶೆಟ್ಟಿಯವರು ಸುಮಾರು 40 ವರ್ಷಗಳಿಂದ ಸಾರ್ವಜನಿಕ ಸೇವೆಯಲ್ಲಿ ಗುರುತಿಸಿಕೊಂಡು ಬಡವರು, ದೀನದಲಿತರು, ಅಶಕ್ತರ ಪರವಾಗಿ ಸದಾ ಕೆಲಸ ಕಾರ್ಯವನ್ನು ಮಾಡಿರುತ್ತಾರೆ ಜೊತೆಗೆ ಸಮಾಜದಲ್ಲಿ ಜಾತ್ಯತೀತ ತತ್ವದ ಅಡಿಯಲ್ಲಿ ಸರ್ವರನ್ನು ಒಂದಾಗಿ ಕಾಣುವ ಮೂಲಕ ಲಕ್ಷಾಂತರ ಅಭಿಮಾನಿಗಳ ಪ್ರೀತಿ ವಿಶ್ವಾಸಕ್ಕೆ ಪಾತ್ರರಾಗಿದ್ದಾರೆ. ಇವರ ಹುಟ್ಟು ಹಬ್ಬವನ್ನು ಪ್ರತಿ ವರ್ಷ ಪುತ್ತೂರಿನಲ್ಲಿ ಆಚರಿಸುವ ಮೂಲಕ ಬಡ ಜನತೆಗೆ ಸಹಾಯವಾಗುವ ಕಾರ್ಯಕ್ರಮವನ್ನು ಕಾವು ಹೇಮನಾಥ್ ಶೆಟ್ಟಿಯವರ ಅಭಿಮಾನಿ ಬಳಗ…
ಸಮಾರಂಭದಲ್ಲಿ ಹಲವು ಗಣ್ಯರು ಭಾಗಿ* ಮಂಗಳೂರು : ನಗರದ ಮಿಶನ್ ಕಂಪೌಂಡ್‌ನಲ್ಲಿ ಜಮೀಯ್ಯತುಲ್ ಫಲಾಹ್ ಮಂಗಳೂರು ನಗರ ಘಟಕದ ವತಿಯಿಂದ ನಿರ್ಮಿಸಲುದ್ದೇಶಿಸಿರುವ ಜಮೀಯ್ಯತುಲ್ ಫಲಾಹ್ ಮಹಿಳಾ ವಸತಿ ನಿಲಯ ಕಟ್ಟಡಕ್ಕೆ ರವಿವಾರ ಶಿಲಾನ್ಯಾಸ ನೆರವೇರಿಸಲಾಯಿತು. ದಕ್ಷಿಣ ಕನ್ನಡ ಜಿಲ್ಲಾ ಖಾಝಿ ಅಲ್ ಹಾಜ್ ತ್ವಾಕಾ ಅಹ್ಮದ್ ಮುಸ್ಲಿಯಾರ್ ಶಿಲಾನ್ಯಾಸ ನೆರವೇರಿಸಿ ಶುಭ ಹಾರೈಸಿದರು. ಸಮಾರಂಭದಲ್ಲಿ ಮುಖ್ಯ ಅತಿಥಿಯಾಗಿದ್ದ ಬೆಂಗಳೂರು ಬ್ಯುಸಿನೆಸ್ ಕಾರಿಡಾರ್‌ನ ಅಧ್ಯಕ್ಷ , ನಿವೃತ್ತ ಐಎಎಸ್ ಅಧಿಕಾರಿ ಎಲ್.ಕೆ. ಅತೀಕ್ ಅವರು ‘ಜಮೀಯ್ಯುತುಲ್ ಫಲಾಹ್ ಸಂಸ್ಥೆಯು ಶೈಕ್ಷಣಿಕ , ಆರೋಗ್ಯ ಕ್ಷೇತ್ರಗಳಲ್ಲಿ ಕೈಗೊಂಡಿರುವ ಸೇವೆಯನ್ನು ಶ್ಲಾಘಿಸಿದರು. ಶಿಕ್ಷಣ ಪಡೆಯಲು ಸೂಕ್ತ ವ್ಯವಸ್ಥೆ ಕಲ್ಪಿಸಿಕೊಡದಿರುವ ಕಾರಣದಿಂದಾಗಿ ಮುಸ್ಲಿಂ ಸಮುದಾಯದ ಹೆಣ್ಣುಮಕ್ಕಳು ಶಿಕ್ಷಣದಲ್ಲಿ ಹಿಂದುಳಿಯಲು ಒಂದು ಕಾರಣವಾಗಿದೆ. ಇವತ್ತು ಹೆಣ್ಣು ಮಕ್ಕಳು ನಾನಾ ಸವಾಲುಗಳ ನಡುವೆ ಶಿಕ್ಷಣ ಪಡೆದು ಉದ್ಯೋಗ ಗಿಟ್ಟಿಸಿಕೊಳ್ಳುತ್ತಿದ್ದಾರೆ. ರಾಜ್ಯದ ಇತರ ಜಿಲ್ಲೆಗಳಿಗಿಂತ ದ.ಕ ಜಿಲ್ಲೆ ಮುಸ್ಲಿಂ ಸಮುದಾಯ ಹೆಣ್ಣು ಮಕ್ಕಳು ಶೈಕ್ಷಣಿಕವಾಗಿ ಹೆಚ್ಚು ಮುಂದುವರಿದಿದ್ದಾರೆ. ಹೆಣ್ಣು…
ವಿಟ್ಲ ಪೋಲಿಸ್ ಠಾಣೆಯ ಸಿಬ್ಬಂದಿಯ ಬಂಧನ ಬಂಟ್ವಾಳ:- ಶಂಕಿತ ಬಾಂಗ್ಲ ಪ್ರಜೆಗೆ ಪಾಸ್ ಪೋರ್ಟ್ ಮಾಡಿಕೊಡಲು ಸಹಾಯ ಮಾಡಿದ ಆರೋಪದ ಮೇಲೆ ವಿಟ್ಲ ಪೋಲಿಸ್ ಠಾಣೆಯ ಸಿಬ್ಬಂದಿಯನ್ನು ಪೋಲಿಸರು ಆರೆಸ್ಟ್ ಮಾಡಿದ್ದಾರೆ. ಬಂಧಿತನನ್ನು ಪೋಲಿಸ್ ಕಾನ್ ಸ್ಟೇಬಲ್ ಪ್ರದೀಪ್ ಎಂದು ಗುರುತಿಸಲಾಗಿದೆ. ಶಂಕಿತ ಬಾಂಗ್ಲ ಪ್ರಜೆ ಶಕ್ತಿದಾಸ್ ಎಂಬಾತನಿಗೆ ಪಾಸ್ ಪೋರ್ಟ್ ಪಡೆಯಲು ಸಹಾಯ ಆರೋಪ ಇವರ ಮೇಲಿದೆ. ಇದೇ ವಿಟ್ಲ ಠಾಣೆಯ ಕಾನ್ಟೇಬಲ್ ಸಾಬೀ ಮೀರ್ಜಿ ನೀಡಿದ ದೂರಿನ ಆಧಾರದ ಮೇಲೆ ಕಾನ್ಸ್ಟೇಬಲ್ ಪ್ರದೀಪ್ ನನ್ನು ಆರೆಸ್ಟ್ ಮಾಡಲಾಗಿದೆ. ಈ ಹಿಂದೆ ಶಕ್ತಿದಾಸ್ ಪಾಸ್ ಪೋರ್ಟ್ ಅರ್ಜಿಯನ್ನು ಸಾಬೀ ಮೀರ್ಜಿ ತಿರಸ್ಕರಿಸಿದ್ದರು ಆದರೆ ಇತ್ತೀಚೆಗೆ ಸಾಬೀ ಮೀರ್ಜಿ ಕರ್ತವ್ಯ ನಿಮಿತ್ತ ಬೇರೆ ಕಡೆಗೆ ಹೋದಾಗ ಕಾನ್ಸ್ಟೇಬಲ್ ಪ್ರದೀಪ್ ಸಹಾಯ ಮಾಡಿದ್ದಾರೆ ಎಂಬ ಆರೋಪ ಕೇಳಿ ಬಂದಿದೆ ಇದೀಗ ಆರೋಪಿ ಪ್ರದೀಪ್ ಆರೆಸ್ಟ್ ಆಗಿ ನ್ಯಾಯಾಂಗ ಬಂಧನದಲ್ಲಿದ್ದಾರೆ.
ಮುಂಡೂರು ವಲಯ ಕಾಂಗ್ರೆಸ್ ಅಧ್ಯಕ್ಷ ಪ್ರವೀಣ್ ಆಚಾರ್ಯ ನೇತೃತ್ವದಲ್ಲಿ ದೂರದಿಂದ ಬರುವವರಿಗೆ ಉಚಿತ ವಾಹನದ ವ್ಯವಸ್ಥೆ ಪುತ್ತೂರು:- ಮುಂಡೂರು ಗ್ರಾಮ ಭಾಗದಲ್ಲಿ ನಡೆಯುತ್ತಿರುವ ಪಲ್ಸ್ ಪೋಲಿಯೋ ಲಸಿಕೆಯನ್ನು ಹಾಕಿಸಲು ಬರುವ ಮಹಿಳೆ ಮತ್ತು ದೂರದಿಂದ ಬರುವ ಬಡವರಿಗೆ ಮತ್ತು ವಾಹನ ಸಿಗದವರಿಗೆ ಮಕ್ಕಳಿಗೆ ಉಚಿತ ವಾಹನ ಸೌಲಭ್ಯವನ್ನು ಮುಂಡೂರು ವಲಯ ಕಾಂಗ್ರೇಸ್ ಅಧ್ಯಕ್ಷ ಪ್ರವೀಣ್ ಆಚಾರ್ಯ ಮತ್ತು ವಲಯ ಪ್ರಧಾನ ಕಾರ್ಯದರ್ಶಿ ಆಶ್ರಪ್ ಮುಲಾರ್ ರವರ ವತಿಯಿಂದ ನಡೆಸಲಾಯಿತು ಈ ಸಂದರ್ಭದಲ್ಲಿ ತುರ್ತು ಸೇವಾ ಸಮಿತಿ ಸದಸ್ಯರಾದ ಮಯಾಜ್ ಮುಲಾರ್ ನೀಲಪ್ಪ ಅಂಬಟ ಇಬ್ರಾಹಿಂ ಕೊಂಬಲ್ಲಿ ಸಿ.ಎಚ್.ಒ ಸುಚೇತಾ ಆಶಾ ಕಾರ್ಯಕರ್ತೆಯರು ಪ್ರೇಮ ಕರಿಯಂಡಕೋಳಿ ಪ್ರಮೀಳಾ ಬಂಡಿಕಾನ ಲಕ್ಷ್ಮಿ ಕುರೆಮಜಲ್ ಹೇಮಲತಾ ಧನ್ಯ ಶ್ರೀ ಅಂಗನವಾಡಿ ಕಾರ್ಯಕರ್ತೆ ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು
ಕೇಪು ಅಕ್ರಮ ಕೋಳಿ ಅಂಕಕ್ಕೆ ಪೋಲಿಸ್ ದಾಳಿ 16 ಮಂದಿ ಪೋಲಿಸ್ ವಶಕ್ಕೆ ಪ್ರಚೋಧನೆ ಆರೋಪದಡಿ ಪುತ್ತೂರು ಶಾಸಕರ ವಿರುದ್ದವೂ ಕೇಸ್ ಬಂಟ್ವಾಳ:- ವಿಟ್ಲ ಸಮೀಪದ ಕೇಪು ಗ್ರಾಮದಲ್ಲಿ ಶನಿವಾರ ಅಕ್ರಮ ಕೋಳಿ ಅಂಕ ನಡೆಯುತ್ತಿದ್ದ ಸ್ಥಳಕ್ಕೆ ದಾಳಿ ನಡೆಸಿದ ವಿಟ್ಲ ಪೋಲಿಸರು 16 ಮಂದಿಯನ್ನು ಬಂಧಿಸಿ 22 ಹುಂಜ ಕೋಳಿಗಳು ಹಾಗೂ ಕೃತ್ಯಕ್ಕೆ ಬಳಸಿದ ಕತ್ತಿ ಯನ್ನು ವಶಪಡಿಸಿಕೊಳ್ಳುವುದರ ಜೊತೆ ಕಾನೂನು ಬಾಹಿರ ಕೃತ್ಯಕ್ಕೆ ಜಾಗ ಒದಗಿಸಿದ ಮಾಲಕರ ವಿರುದ್ಧ ಹಾಗೂ ಪ್ರಚೋದನೆ ಹಾಗೂ ಪ್ರೇರಣೆ ನೀಡಿದ ಆರೋಪದ ಡಿ ಪುತ್ತೂರು ವಿಧಾನಸಭಾ ಕ್ಷೇತ್ರದ ಶಾಸಕ ಅಶೋಕ್ ರೈ ವಿರುದ್ಧವು ಪ್ರಕರಣ ದಾಖಲಿಸಿಕೊಂಡಿದ್ದಾರೆ ಡಿಸೆಂಬರ್ 20 ರಂದು ಮಧ್ಯಾಹ್ನ ಸಮಯ ಬಂಟ್ವಾಳ ಕೇಪು ಗ್ರಾಮದ ಮುರಳೀಧರ ರೈ ಎಂಬವರ ಗದ್ದೆಯಲ್ಲಿ ಕಾನೂನು ಬಾಹಿರವಾಗಿ ಕೋಳಿ ಅಂಕ ಆಡಲು ಮುಂದಾಗುತ್ತಿರುವ ಬಗ್ಗೆ ಮಾಹಿತಿ ಬಂದ ಮೇರೆಗೆ ವಿಟ್ಲ ಪೋಲಿಸ್ ಠಾಣಾ ಇನ್ಸ್ಪೆಕ್ಟರ್ ಠಾಣಾ ಅಧಿಕಾರಿ ಸಿಬ್ಬಂದಿಗಳೊಂದಿಗೆ ಸ್ಥಳಕ್ಕೆ ತೆರಳಿ ಪರೀಶಿಲನೆ…
ಕೇಂದ್ರ ಸರಕಾರದ ವಿರುದ್ಧ ಮಾಜಿ ಸಚಿವ ಬಿ ರಮನಾಥ್ ರೈ ಗರಂ ಮಂಗಳೂರು:- ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆಯನ್ನು ತಿದ್ದುಪಡಿ ಮಾಡಿ ಹೆಸರು ಅಳಿಸುತ್ತಿರುವುದು ಗೋರ ಅಪರಾಧವಾಗಿದ್ದು ಕೇಂದ್ರ ಸರಕಾರದ ಈ ನಡೆಯನ್ನು ದಕ್ಷಿಣ ಕನ್ನಡ ಜಿಲ್ಲಾ ಕಾಂಗ್ರೆಸ್ ಖಂಡಿಸುವುದಾಗಿ ಮಾಜಿ ಸಚಿವ ಬಿರಮನಾಥ್ ರೈ ಹೇಳಿದ್ದಾರೆ ಜಿಲ್ಲಾ ಕಾಂಗ್ರೆಸ್ ಕಚೇರಿಯಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು ಯುಪಿಎ ಆಡಳಿತಾವಧಿಯಲ್ಲಿ ನೀಡಲಾದ ಮಹತ್ತರ ಯೋಜನೆ ಇದಾಗಿದ್ದು ಜಗತ್ತು ಈ ಕಾರ್ಯಕ್ರಮವನ್ನು ಮೆಚ್ಚಿದೆ ಎಂದರು ಈ ಯೋಜನೆ ಮಂಡಿಸಲಾದ ಸಂದರ್ಭದಲ್ಲಿ ವಿರೋಧಪಕ್ಷಗಳು ಟೀಕೆ ಮಾಡಿದ್ದು ಭ್ರಷ್ಟಾಚಾರ ಕಾರ್ಯಕ್ರಮ ಎಂದು ಹೇಳಿದವು ಮಹತ್ವ ಗಾಂಧಿ ಹೆಸರಿನಲ್ಲಿ ಜಾರಿಗೆ ಬಂದಿದ್ದ ಯೋಜನೆ ಸಮಾಜದ ಬಡ ರೈತ ಕಾರ್ಮಿಕ ವರ್ಗಕ್ಕೆ ಮನೆರೇಗ ಕಾರ್ಯಕ್ರಮದಿಂದ ಅನುಕೂಲವಾಗಿದೆ ಇದೀಗ ಮಹಾತ್ಮಗಾಂಧಿ ಹೆಸರನ್ನು ಕೈಬಿಡುವ ಮೂಲಕ ಅವಮಾನ ಮಾಡಲಾಗಿದೆ ಈಗಾಗಲೇ ಮಹಾತ್ಮಗಾಂಧಿ ವಿರುದ್ಧ ಸಂಘಪರಿವಾರದ ಶಕ್ತಿಗಳಿಂದ ನಡೆಯುತ್ತಿರುವ ಮಹಾತ್ಮಾ ಗಾಂಧಿ ವಿರುದ್ದದ ಅವಹೇಳನದ ಭಾಗ…


