ಮಂಗಳೂರು:-ಕರಾವಳಿ ಜಿಲ್ಲೆಯಲ್ಲಿ ಕಾಂಗ್ರೆಸ್ ಪಕ್ಷದ ಅಧ್ಯಕ್ಷರಾಗಿ ಕೆಲಸ ಮಾಡಿದ ಶ್ರೀ ಹರೀಶ್ ಕುಮಾರ್ ಅವರ ಅವಧಿ ಮುಗಿದು ವರ್ಷ ಆದರೂ ಜಿಲ್ಲಾ ಕಾಂಗ್ರೆಸ್ ಪಕ್ಷದ ಅಧ್ಯಕ್ಷ ಸ್ಥಾನಕ್ಕೆ ಹೊಸಬರನ್ನು ನೇಮಕ ಮಾಡುವಲ್ಲಿ ಕಾಂಗ್ರೆಸ್ ಪಕ್ಷ ವಿಫಲವಾಗುತ್ತಿದೆ
ದ.ಕ.ಜಿಲ್ಲೆಯಲ್ಲಿ ಬ್ಲೇಸಿಯಸ್ ಡಿಸೋಜ, ಮಾಜಿ ಸಚಿವ ಬಿ ರಮನಾಥ್ ರೈ ಅವರು ಅಧ್ಯಕ್ಷರಾಗಿ ಜಿಲ್ಲೆಯಲ್ಲಿ ಕಾಂಗ್ರೆಸ್ ಪಕ್ಷವನ್ನು ಸುದೀರ್ಘ ಅವಧಿಯಲ್ಲಿ ಕಟ್ಟಿ ಬೆಳೆಸಿದವರು ಇದರಲ್ಲಿ ರಮನಾಥ್ ರೈ ಅವರು 2013 ರಲ್ಲಿ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷರಾಗಿದ್ದ ಸಮಯದಲ್ಲಿ ಪಕ್ಷ ಸಂಘಟನೆ ಮಾಡಿ ಕರಾವಳಿ ಜಿಲ್ಲೆಯಲ್ಲಿ 8 ವಿಧಾನ ಸಭಾ ಕ್ಷೇತ್ರದಲ್ಲಿ ಕಾಂಗ್ರೆಸ್ 7 ಅಭ್ಯರ್ಥಿಗಳು ಗೆಲ್ಲುವಲ್ಲಿ ಪ್ರಮುಖ ಪಾತ್ರ ವಹಿಸಿದ್ದರು ರೈ ಅವರು ಆ ಸಮಯದಲ್ಲಿ ಶಾಸಕರಾಗಿ ಸಚಿವರಾದರು ಆ ಸಮಯದಲ್ಲಿ ರೈ ಉತ್ತರಾಧಿಕಾರಿ ಯಾರು ಎಂಬ ಪ್ರಶ್ನೆಗೆ ರೈ ಸೂಚಿಸಿದ ಹೆಸರೇ ಹರೀಶ್ ಕುಮಾರ್ ಅವರದ್ದಾಗಿತ್ತು ನಂತರ ನಡೆದ ಲೋಕಸಭಾ ಚುನಾವಣೆ, ವಿಧಾನ ಸಭಾ ಚುನಾವಣೆ ಪ್ರತಿಯೊಂದು ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷ ಹರೀಶ್ ಕುಮಾರ್ ಅವಧಿಯಲ್ಲಿ ಮುಗ್ಗರಿಸಿ ಮಕಾಡೆ ಮಲಗಿದೆ ಇದರ ಮಧ್ಯೆ ಕಾಂಗ್ರೆಸ್ ಪಕ್ಷದ ಕಾರ್ಯಕರ್ತರು ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷರ ಬದಲಾವಣೆಗೆ ನಿರಂತರವಾಗಿ ಒತ್ತಾಯ ಮಾಡಿಕೊಂಡು ಬಂದ್ರೂ ಕಾಂಗ್ರೆಸ್ ಹೈಕಮಾಂಡ್ ಇಂದೂ ನಾಳೆಯೋ ಎಂಬಂತೆ ಅಡ್ಡ ಗೋಡೆಯಲ್ಲಿ ದೀಪ ಇಟ್ಟಂತೆ ವರ್ತಿಸುತ್ತಿರುವುದು ಕಾರ್ಯಕರ್ತರ ಅಸಮಾಧಾನಕ್ಕೆ ಕಾರಣವಾಗಿದೆ.
ಈಗಾಗಲೇ ಜಿಲ್ಲೆಗೆ ಆಗಮಿಸಿದ ಕೆಪಿಸಿಸಿ ವೀಕ್ಷಕರು ಬಂದು ಹೋಗುತ್ತಾರೆ ಹೊರತು ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷರ ಆಯ್ಕೆಯಲ್ಲಿ ನಿರಂತರವಾಗಿ ವಿಫಲರಾಗಿದ್ದಾರೆ.
ಇನ್ನೊಂದು ಕಡೆ ಸ್ಪೀಕರ್ ಯುಟಿ ಖಾದರ್, ಮಂಜುನಾಥ್ ಭಂಢಾರಿ , ಹರೀಶ್ ಕುಮಾರ್ ಇವರು ಒಂದು ಬಣವಾಗಿ ಗುರುತಿಸಿರುವುದು ಕಾಂಗ್ರೆಸ್ ಕಾರ್ಯಕರ್ತರ ಅಸಮಾಧಾನಕ್ಕೆ ಕಾರಣವಾಗಿದೆ.
ಈಗಾಗಲೇ ಜಿಲ್ಲೆಯಲ್ಲಿ ಜಿಲ್ಲಾ ಅಧ್ಯಕ್ಷ ಸ್ಥಾನಕ್ಕೆ ರಮನಾಥ್ ರೈ ಅವರೇ ಮುಂದುವರಿಯಬೇಕು ಎಂಬ ಅಪೇಕ್ಷೆ ಇಟ್ಟವರು ಡಿಕೆ ಶಿವಕುಮಾರ್ ಇತ್ತ ರಮನಾಥ್ ರೈ ಅವರು ಇದನ್ನು ನಯವಾಗಿ ನಿರಾಕರಿಸಿದ್ದಾರೆ.
ಪ್ರಮುಖವಾಗಿ ರಮನಾಥ್ ರೈ ಬಳಗದಲ್ಲಿ ಗುರುತಿಸಿರುವ ಮಾಜಿ ಮೇಯರ್ ಶಶಿಧರ್ ಹೆಗ್ಡೆ ಆರ್ ಪೃಥ್ವಿರಾಜ್ ಇವರ ಹೆಸರು ಮುಂಚೂಣಿಯಲ್ಲಿ ಇದ್ರೂ ಇವರ ಆಯ್ಕೆ ಕಾಂಗ್ರೆಸ್ ಪಕ್ಷದ ಒಳಗೆ ಒಂದು ಬಣ ತಡೆ ಮಾಡುತ್ತಿದೆ
ಮುಸ್ಲಿಂ ಕೋಟಾದಲ್ಲಿ ಎಂ.ಎಸ್ ಮಹಮ್ಮದ್ ಅವರಿಗೆ ಒಂದು ಅವಕಾಶ ನೀಡಬೇಕು ಎನ್ನುವ ಆಗ್ರಹ ಬೇಡಿಕೆ ಕಾರ್ಯಕರ್ತರಲ್ಲಿ ಇದೆ ಇದಕ್ಕೂ ಕಾಂಗ್ರೆಸ್ ಗುಂಪು ಅಡ್ಡ ಬರುತ್ತಿದೆ.
ಕೊನೆಗಳಿಗೆಯಲ್ಲಿ ವಿಧಾನ ಪರಿಷತ್ ಸದಸ್ಯರಾದ ಐವನ್ ಡಿಸೋಜ ಅವರನ್ನು ನೇಮಕ ಮಾಡಲು ಸ್ಪೀಕರ್ ಮಂಜುನಾಥ್ ಭಂಢಾರಿ ಹರೀಶ್ ಕುಮಾರ್ ಉತ್ಸುಕರಾದರೂ ಐವನ್ ಅವರು ಸಚಿವ ಸ್ಥಾನದ ಮೇಲೆ ಕಣ್ಣಿಟ್ಟಿದ್ದಾರೆ ಇದು ಸಾಧ್ಯ ಆಗ್ತಿಲ್ಲ ಮಿಥುನ್ ರೈ ಹೆಸರು ಅಷ್ಟಕಷ್ಟೇ ಚಲಾವಣೆಯಲ್ಲಿ ತೇಲಿ ಹೋಗುತ್ತಿದೆ ದ.ಕ.ಜಿಲ್ಲೆಯಲ್ಲಿ ಎರಡು ಬಣಗಳು ಇರುವುದರಿಂದ ಪಕ್ಷಕ್ಕೆ ಡ್ಯಾಮೇಜ್ ಹೊರತು ಲಾಭ ಅಂತೂ ಇಲ್ಲ ಎಂಬುವುದು ಕಾರ್ಯಕರ್ತರ ಅಳಲು ಕೂಡ ಆಗಿದೆ
ಕಾರ್ಯಕರ್ತರ ಅಭಿಪ್ರಾಯ ಕೊನೆಗಳಿಗೆಯಲ್ಲಿ ಕಳೆದ ಲೋಕಸಭಾ ಕ್ಷೇತ್ರದ ಚುನಾವಣೆಗೆ ಸ್ಪರ್ಧಿಸಿ ಸೋತರೂ ನಿರಂತರವಾಗಿ ಕಾರ್ಯಕರ್ತರ ಕೈಗೆ ಸಿಗುವ ಪದ್ಮರಾಜ್ ಆರ್ ಪೂಜಾರಿ ಅವರಿಗೆ ಜಿಲ್ಲಾ ಕಾಂಗ್ರೆಸ್ ಪಕ್ಷದ ಅಧ್ಯಕ್ಷ ಸ್ಥಾನ ನೀಡಬೇಕು ಎಂಬ ಆಗ್ರಹ ಇದೆ ಇದಕ್ಕೆ ಸ್ಪೀಕರ್ ಖಾದರ್ ಕಾರ್ಯಾಧ್ಯಕ್ಷರಾದ ಮಂಜುನಾಥ್ ಭಂಢಾರಿ ಹರೀಶ್ ಕುಮಾರ್ ಅವರು ಸಹಮತ ವ್ಯಕ್ತಪಡಿಸುತ್ತಾರೋ ಅಥವಾ ವಿರೋಧಿಸುತ್ತಾರೋ ಎನ್ನುವುದೇ ಪಕ್ಷದ ವಲಯದಲ್ಲಿ ತೀವ್ರ ಕುತೂಹಲ ಮೂಡಿಸಿದೆ
ಮೂಲಗಳ ಪ್ರಕಾರ ಪದ್ಮರಾಜ್ ಆರ್ ಪೂಜಾರಿ ಅವರು ದ.ಕ.ಜಿಲ್ಲೆಯ ಅಧ್ಯಕ್ಷರಾಗಿ ಆಯ್ಕೆಯಾದರೂ ಅಚ್ಚರಿಪಡಬೇಕಿಲ್ಲ!
Subscribe to Updates
Get the latest creative news from FooBar about art, design and business.



