ಕೊಡಪದವು ಉನ್ನತೀಕರಿಸಿದ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ, ಯನೇಪೋಯ ಇನ್ಸ್ಟಿಟ್ಯೂಟ್ ಆಫ್ ಆರ್ಟ್ಸ್ ಸೈನ್ಸ್ ಕಾಮರ್ಸ್ ಅಂಡ್ ಮ್ಯಾನೇಜ್ಮೆಂಟ್ NSS UNIT ಇದರ ವತಿಯಿಂದ ಮಜೀದ್ ಫಾರ್ಮ್ ನ ಸಹಕಾರದಿಂದ, 110ಕ್ಕೂ ಹೆಚ್ಚು ವಿದ್ಯಾರ್ಥಿಗಳಿಗೆ ಇತ್ತೀಚೆಗೆ ಬರೆಯುವ ಪುಸ್ತಕ ವಿತರಣಾ ಕಾರ್ಯಕ್ರಮ ನಡೆಯಿತು. ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಹೈನುಗಾರಿಕೆಯ ಮೂಲಕ ವಿಶೇಷ ಸಾಧನೆಯನ್ನು ಮಾಡಿ, ತಮಗೆ ಬರುವ ಲಾಭಾಂಶದ ಒಂದು ಭಾಗವನ್ನು ವಿದ್ಯಾರ್ಥಿಗಳ ಶೈಕ್ಷಣಿಕ ಕಾರ್ಯಕ್ರಮಗಳಿಗೆ ನೀಡುವ ನಿಟ್ಟಿನಲ್ಲಿ, ಮಜೀದ್ ಫಾರ್ಮ್ ನ ಮಾಲಕರಾದ ಮೈಮುನ ಹಾಗೂ ತಮ್ಮ ಮಕ್ಕಳಾದ ರಂಝೀನಾ, ಮರ್ಝೀನಾ, ರಾಷ್ಟ್ರೀಯ ಪ್ರೇರಣಾ ದೂತ ಪ್ರಶಸ್ತಿ ವಿಜೇತೆ, ಸಿಲ್ವರ್ ಮೆಡಲಿಸ್ಟ್, ಅಝ್ವೀನಾ, ಇವರು ಆಗಮಿಸಿ ಕೋಡಪದವು ಶಾಲಾ ವಿದ್ಯಾರ್ಥಿಗಳಿಗೆ ಬರೆಯುವ ಪುಸ್ತಕವನ್ನು ಕೊಡುಗೆಯಾಗಿ ನೀಡಿದ್ದಾರೆ. ಶಾಲಾ ಮುಖ್ಯೋಪಾಧ್ಯಾಯಿನಿ, ಆರತಿ ಮೇಡಂ ಸ್ವಾಗತಿಸಿ, ಪ್ರಾಸ್ತಾವಿಕ ಮಾತುಗಳನ್ನಾಡಿದರು. ಖಾಸಗಿ ಶಾಲೆಗಳಲ್ಲಿ ನೀಡುವುದಕ್ಕಿಂತ ಉತ್ತಮ ಶಿಕ್ಷಣ ಕೋಡಪ್ಪದವಿನಲ್ಲಿ ನೀಡಲಾಗುತ್ತಿದೆ. ಗುಣಮಟ್ಟದ ಶಿಕ್ಷಣ ಉಚಿತವಾಗಿ ಇಲ್ಲೇ ಸಿಗುವಾಗ, ಅನಗತ್ಯ ಖರ್ಚು ಮಾಡಿ ಖಾಸಗಿ ಶಾಲೆಗಳಿಗೆ, ಕಳುಹಿಸುವುದು ವ್ಯರ್ಥ ಎಂದು ಪೋಷಕರಿಗೆ ವಿಟ್ಲ ಪಡ್ನೂರು ಮಾಜಿ ಅಧ್ಯಕ್ಷರಾದ, ಅಬ್ದುಲ್ಲ ಹಾಜಿ ಕುಕ್ಕಿಲ ಅಭಿಪ್ರಾಯ ಹಂಚಿ ಮಾತನಾಡಿದರು. ಕೊಡುಗೆೈ ದಾನಿಗಳಾಗಿರುವ ವಿಕೆ ಫಾರೂಕ್ ಬೆಂಗಳೂರು, ಯಾನೇಪೋಯ ಎನ್ಎಸ್ಎಸ್ ಯೂನಿಟ್ ಪ್ರೋಗ್ರಾಮ್ ಆಫೀಸರ್, ಅಬ್ದುಲ್ ರಶೀದ್ ಕೆ ಎಂ, ಪ್ರೋಗ್ರಾಮ್ ಕೋ-ಆರ್ಡಿನೇಟರ್,ಉಬೈಸ್, ಗೂನಡ್ಕ, ಅತೂಪ್, ನ್ಯೂಮಾನ್, ತಶ್ರೀಪ್, ಎಸ್ ಡಿ ಎಮ್ ಸಿ ಉಪಾಧ್ಯಕ್ಷರಾದ ಪ್ರಮೀಳಾ, ಸುಲೈಮಾನ್ ಕೊಡಪ್ಪದವು, ಮೊದಲಾದವರು ಪಾಲ್ಗೊಂಡಿದ್ದರು. ಇದೇ ಸಂದರ್ಭದಲ್ಲಿ ಗ್ರಾಮೀಣ ಪ್ರದೇಶದ ಶಿಕ್ಷಣ ಸಂಸ್ಥೆಯ ವಿದ್ಯಾರ್ಥಿಗಳ ಶೈಕ್ಷಣಿಕ ಕಾರ್ಯಕ್ಕೆ ನೆರವಾದ, ಮಜೀದ್ ಫಾರ್ಮ್ ಮಾಲಕರಾದ, ಮೈಮುನಾ ಮೇಡಮ್ ರವರನ್ನು ಸನ್ಮಾನಿಸಲಾಯಿತು. ಶಿಕ್ಷಕಿ ಮೋಹಲತಾ ವಂದಿಸಿದರು. ನೌಫಲ್ ಕೆ ಬಿ ಎಸ್ ಕಾರ್ಯಕ್ರಮ ನಿರೂಪಿಸಿದರು





