ಪುತ್ತೂರು:- ಬಿರುಮಳೆ ಬೆಟ್ಟಕ್ಕೆ ಬಂದಿದ್ದ ಯುವಕ ಯುವತಿಯ ಮೇಲೆ ಕಿಡಿಗೇಡಿಗಳಿಂದ ನೈತಿಕ ಪೋಲಿಸ್ ಗಿರಿ ನಡೆದಿದೆ ಎಂಬ ವಿಚಾರ ನನ್ನ ಗಮನಕ್ಕೆ ಬಂದಿದ್ದು ಘಟನೆಗೆ ಸಂಬಂಧಿಸಿ ಇಬ್ಬರು ದುಷ್ಕರ್ಮಿಗಳನ್ನು ಪೋಲಿಸರು ಬಂಧಿಸಿದ್ದಾರೆ ಕೆಲಸಮಯಗಳಿಂದ ನಿಂತು ಹೋಗಿದ್ದ ಈ ರೀತಿಯ ಕೆಟ್ಟ ಘಟನೆಗಳು ಪುತ್ತೂರಿನಲ್ಲಿ ನಡೆದಿದೆ.
ಬಾಲ ಮುದುಡಿಕೊಂಡಿದ್ದ ಸಮಾಜಘಾತುಕ ಕಿಡಿಗೇಡಿಗಳ ಬಾಲ ಕತ್ತರಿಸುವ ಕೆಲಸ ಮಾಡಲಾಗುತ್ತದೆ
ಇಂಥವರ ವಿರುದ್ಧ ಕಠಿಣ ಕ್ರಮಕೈಗೊಳ್ಳವಂತೆ ಪೋಲಿಸರಿಗೆ ಸೂಚನೆ ನೀಡಿದ್ದೇನೆ.
ವಿಹಾರಕ್ಕೆ ಬರುವ ಮಂದಿಗೆ ರಕ್ಷಣೆ ನೀಡುವ ಕೆಲಸ ಪೋಲಿಸರು ಮಾಡಲಿದ್ದಾರೆ ಬಿರುಮಳೆ ಬೆಟ್ಟದಲ್ಲಿ ಪೋಲಿಸ್ ರಕ್ಷಣೆಯನ್ನು ಸೂಚನೆಯನ್ನು ನೀಡಿದ್ದು ಮಾತ್ರವಲ್ಲದೇ ಇನ್ನೂ ಮುಂದೆ ಈ ರೀತಿಯ ನೈತಿಕ ಪೋಲಿಸ್ ಗಿರಿ ನಡೆಯದಂತೆ ಪೋಲಿಸರು ಕಟ್ಟು ನಿಟ್ಟಿನ ವ್ಯವಸ್ಥೆಯನ್ನು ಮಾಡಬೇಕೆಂದು ಸೂಚನೆ ನೀಡಿರುವುದಾಗಿ ಪುತ್ತೂರು ಶಾಸಕ ಅಶೋಕ್ ಕುಮಾರ್ ರೈ ಅವರು ತಿಳಿಸಿದ್ದಾರೆ



