ಬಂಟ್ವಾಳ: ಕೆಪಿ ಸುಲೈಮಾನ್ ಹಾಜಿ ಕನ್ಯಾನ ಅಬುದಾಬಿ ಹ್ಯಾಪಿ ಸ್ಟಾರ್ ಗ್ರೂಪ್ ವತಿಯಿಂದ ಆರು ಜೋಡಿಗಳ ಸಾಮೂಹಿಕ ವಿವಾಹ ಸಮಾರಂಭವು ಗುರುವಾರ ನೇರಳಕಟ್ಟೆ ಜನಪ್ರಿಯ ಗಾರ್ಡನ್ನಲ್ಲಿ ನಡೆಯಿತು ಕೆಪಿ ಸುಲೈಮಾನ್ ಹಾಜಿ ಕನ್ಯಾನ ಅವರ ನೇತೃತ್ವದಲ್ಲಿ ನಡೆದ ನಿಖಾಹ್ ಕಾರ್ಯಕ್ರಮದಲ್ಲಿ ಸುರಿಬೈಲ್ ದಾರುಲ್ ಅಶ್ ಅರಿಯಾ ಮನೇಜನರ್ ಮಹಮ್ಮದಾಲಿ ಸಖಾಫಿ ಖುತುಬಾ ನೆರವೇರಿಸಿದರು
ದುವಾಃ ನೆರವೇರಿಸಿದ ಬಹು: ಸೈಯ್ಯದ್ ಅಬ್ದುರಹ್ಮಾನ್ ಮಸ್ ಊದ್ ಅಲ್ ಬುಖಾರಿ ಕೂರತ್ ತಂಙಳ್ ರವರು ಕೆಪಿ ಸುಲೈಮಾನ್ ಹಾಜಿ ಕನ್ಯಾನ ಅವರ ಈ ಪುಣ್ಯ ಕಾರ್ಯಕ್ರಮದ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದರು.
ಕಡಂಬು ಜುಮಾ ಮಸೀದಿಯ ಖತೀಬ್ ಅಬ್ದುರಹ್ಮಾನ್ ಸಹದಿ ಉಪಸ್ಥಿತರಿದ್ದರು ವಿವಿಧ ಮಸೀದಿಗಳ ಉಸ್ತಾದರು ನಿಖಾಹ್ ನೇರವೇರಿಸಿ ಕೊಟ್ಟರು
ಕೊಡಂಗಾಯಿ ಕಡಂಬುವಿನ ರಹಮತ್ ಅವರು ಸಾಲೆತ್ತೂರು ತಿರುಮಜೆಯ ಶರೀಫ್ ಅವರೊಂದಿಗೆ ಕೆದಿಲ ಬೀಟಿಗೆಯ ಫಾತಿಮತ್ ಪರ್ಝಾನ ಅವರು ಚಿಕ್ಕಮಗಳೂರು ಟಿಪ್ಪು ನಗರದ ಇಮ್ರಾನ್ ಜೊತೆಗೆ, ಇಳಂತಿಲ ಅಂಡೆತಡ್ಕದ ಫಾತಿಮಾ ಸುಳ್ಯ ಜಟ್ಟಿಪಳ್ಳದ ಅಬ್ದುಲ್ ರಮ್ಸಾದ್ ಎಂಬ ವರನೊಂದಿಗೆ, ಮಿತ್ತಬಾಗಿಲು ಪೆರಾಡಿಯ ಸಂಬ್ರೀನಾ ಬೆಳ್ತಂಗಡಿ ನೇರಿಯದ ಆರೀಫ್ ಜೊತೆಗೆ , ಪೆರುವಾಯಿ ಮುಚ್ಚಿರಪದವಿನ ಫಾತಿಮತ್ ಶಹನಾಝ್ ಪಾವೂರು ಅಕ್ಕರನಗರದ ಮಹಮ್ಮದ್ ಅರ್ಶದ್ ಜೊತೆಗೆ, ವಿಟ್ಲ ಕಡಂಬುವಿನ ರಂಸೀನಾ ಎಂಬಾಕೆಯು ವಿಟ್ಲ ಮೇಗಿನಪೇಟೆಯ ಇಲ್ಯಾಸ್ ಎಂಬ ವರನೊಂದಿಗೆ ದಾಂಪತ್ಯ ಜೀವನಕ್ಕೆ ಕಾಲಿಟ್ಟರು
ಈ ಸಂದರ್ಭದಲ್ಲಿ-
ಕೆಪಿ ಸುಲೈಮಾನ್ ಹಾಜಿ ಕನ್ಯಾನ ರವರ ಸುಪುತ್ರ ಫೈಝಲ್ ಪ್ರಮುಖರಾದ ಬಿ ಮಹಮ್ಮದ್ ಕುಂಙಿ ವಿಟ್ಲ ಅಝೀಝ್ ಬೈಕಂಪಾಡಿ ಬಿ.ಎ ಶಕೂರ್ ಹಾಜಿ ಕಲ್ಲೇಗ, ಅಶ್ರಫ್ ಕಡಂಬು, ಜಬ್ಬಾರ್ ಪೆರ್ನೆ, ಶಕೀಲ್ ಉಡುಪಿ, ಇಮ್ತಿಯಾಝ್ ಬಂಟ್ವಾಳ, ಉಮ್ಮರ್ ಕನ್ಯಾನ, ಹಮೀದ್ ಟಿ.ಎಚ್ ಎಂ.ಎ, ಹನೀಫ್ ಹಾಜಿ ಉದಯ ಕಲ್ಲೇಗ , ಎಂ.ಎಸ್ ಮಹಮ್ಮದ್, ಬಶೀರ್ ಹಾಜಿ ಕಬಕ , ಇಬ್ರಾಹಿಂ ಬಾವ, ಮುಹಮ್ಮದ್ ಇಕ್ಬಾಲ್, ವಿ.ಎ ರಶೀದ್, ಶಾಫಿ ಕಡಂಬು, ನಿಸಾರ್ ಕಡಂಬು, ನಶ್ವಿ ಕಡಂಬು,ವಿ.ಕೆ ಇಸ್ಮಾಯಿಲ್ ಹಾಜಿ ಬದ್ರಿಯಾ ಮೊದಲಾದವರು ಉಪಸ್ಥಿತರಿದ್ದರು



