ಮಂಗಳೂರು:- ದ.ಕ.ಜಿಲ್ಲೆಯಲ್ಲಿ ನಿನ್ನೆ ಸಂಜೆಯಿಂದ ಧಾರಾಕಾರವಾಗಿ ಮಳೆ ಸುರಿಯುತ್ತಿದ್ದು ಇದರ ಭಾಗವಾಗಿ ದ.ಕ.ಜಿಲ್ಲಾಡಳಿತ ಮೌನ ವಹಿಸಿರುವ ಬಗ್ಗೆ ಶಾಲಾ ಮಕ್ಕಳು ಮತ್ತು ಪೋಷಕರು ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ
ನಿರಂತರವಾಗಿ ಮಳೆ ಸುರಿಯುತ್ತಿದ್ದೂ ಒಂದನೇ ತರಗತಿಯಿಂದ ಕನಿಷ್ಠ ಪಕ್ಷ 5 ತರಗತಿಯ ಮಕ್ಕಳಿಗೆ ರಜೆ ನೀಡಬಹುದಿತ್ತು ಆದರೆ ಜಿಲ್ಲಾಡಳಿತ ಇದರ ಬಗ್ಗೆ ಸಂಪೂರ್ಣವಾಗಿ ಮೌನ ವಹಿಸಿ ನಿರ್ಲಕ್ಷ್ಯ ಮಾಡಿರುವುದು ಎಷ್ಟು ಸರಿ ಎಂಬ ಮಾತು ಸಾರ್ವಜನಿಕ ವಲಯದಲ್ಲಿ ಹರಿದಾಡುತ್ತಿದೆ
ಈ ಹಿಂದೆ ದ.ಕ.ಜಿಲ್ಲಾಧಿಕಾರಿಯಾಗಿದ್ದ ಮುಲ್ಲೈ ಮುಗಿಲನ್ ಅವರನ್ನು ಈ ಸಂದರ್ಭದಲ್ಲಿ ಶಾಲಾ ಮಕ್ಕಳು ಮತ್ತು ಪೋಷಕರು ನೆನಪಿಸಿದ್ದಾರೆ.



