ಪುತ್ತೂರು:-ಜುಲೈ 14 ರಂದು ಪುತ್ತೂರು ಬೊಳುವಾರು ಮಸೀದಿಗೆ ನುಗ್ಗಿದ ಹಾಸನ ಮೂಲದ ರಾಜು ಎಂಬಾತ ಕೈಯಲ್ಲಿ ತಲವಾರು ಹಿಡಿದು ಬೆದರಿಕೆ ಒಡ್ಡಿರುವ ಘಟನೆ ಅತ್ಯಂತ ಖಂಡನೀಯವಾಗಿದೆ ಮತ್ತು ಈ ವ್ಯಕ್ತಿಯ ಹಿನ್ನಲೆ ಏನು ಈತನ ಉದ್ದೇಶ ಏನು ಎಂಬುದರ ಬಗ್ಗೆ ಪೋಲಿಸ್ ಇಲಾಖೆಯು ಉನ್ನತ ಮಟ್ಟದ ತನಿಖೆ ಮಾಡುವ ಮೂಲಕ ಇದರ ಹಿಂದಿನ ಸತ್ಯಾಸತ್ಯೆಯನ್ನು ಬಯಲಿಗೆ ತರಬೇಕು ಎಂದು ರಾಜೀವ್ ಗಾಂಧಿ ಜ್ಯೋತಿ ಯಾತ್ರ ಕಮಿಟಿಯ ರಾಜ್ಯ ಕಾರ್ಯದರ್ಶಿ ಹನೀಫ್ ಬಗ್ಗುಮೂಲೆ ಅವರು ಪೋಲಿಸ್ ಇಲಾಖೆಯನ್ನು ಆಗ್ರಹಿಸಿದ್ದಾರೆ
ಪತ್ರಿಕಾ ಹೇಳಿಕೆ ಮೂಲಕ ಮಾತನಾಡಿದ ಹನೀಫ್ ಬಗ್ಗುಮೂಲೆ ಅವರು ಇತ್ತೀಚಿನ ದಿನಗಳಲ್ಲಿ ನಡೆದಿರುವ ಧ್ವೇಷ ಭಾಷಣಗಳಿಂದ ಪ್ರೇರಿತಗೊಂಡು ಇಂತಹ ಕೆಲಸ ಕಾರ್ಯಕ್ಕೆ ಈ ವ್ಯಕ್ತಿ ಮುಂದಾಗಿರುವ ಬಗ್ಗೆ ಸಾರ್ವಜನಿಕವಾಗಿ ಅನುಮಾನವಿದ್ದು ತಕ್ಷಣ ಇದರ ಬಗ್ಗೆ ಕೂಲಂಕಷವಾಗಿ ಪೋಲಿಸ್ ಇಲಾಖೆ ತನಿಖೆ ನಡೆಸಿ ಮುಂದೆ ಇಂತಹ ಘಟನೆಗಳು ನಡೆಯದಂತೆ ಎಚ್ಚರಿಕೆ ವಹಿಸಬೇಕು ಎಂದು ತಿಳಿಸಿದ್ದಾರೆ



