
ಬೆಂಗಳೂರು:- ಕೆಲದಿನಗಳಿಂದ ರಾಜ್ಯ ಮತ್ತು ರಾಷ್ಟ್ರದ ಗಮನ ಸೆಳೆದಿರುವ ಧರ್ಮಸ್ಥಳ ಗ್ರಾಮದ ಶವಗಳ ಪ್ರಕರಣದ ತನಿಖೆಗೆ ಇದೀಗ ರಾಜ್ಯ ಸರ್ಕಾರ ವಿಶೇಷ ತನಿಖಾ ತಂಡ ಎಸ್ ಐಟಿ ರಚಿಸಿದೆ



ಡಾ|| ಪ್ರಣವ ಮೊಹಾಂತಿ ಅವರ ನೇತ್ರತ್ವದಲ್ಲಿ ನಾಲ್ಕು ಅಧಿಕಾರಿಗಳ ವಿಶೇಷ ತನಿಖಾ ತಂಡ ರಚಿಸಲಾಗಿದೆ ಎಂ.ಎನ್ ಅನುಚೇತ್ ಸೌಮ್ಯಲತಾ ಮತ್ತು ಜಿತೇಂದ್ರ ಕುಮಾರ್ ದಯಾಮ ಅವರು ಈ ತಂಡದಲ್ಲಿದ್ದಾರೆ
ರಾಜ್ಯ ಸರ್ಕಾರದ ಈ ನಡೆ ತೀವ್ರ ಕುತೂಹಲ ಕೆರಳಿಸಿದೆ ತನಿಖೆ ಯಾವ ರೀತಿ ಸಾಗಲಿದೆ ಸಮಗ್ರ ಚಿತ್ರಣ ತನಿಖೆಯ ನಂತರ ಬೆಳಕಿಗೆ ಬರಲಿದೆ