ಅಯ್ಯರ್ ಅವರ ಸ್ಥಿತಿ ಪ್ರಸ್ತುತ ಸ್ಥಿರವಾಗಿದೆ ವ್ಯೆದ್ಯರ ಘೋಷಣೆ-
ಸಿಡ್ನಿ:- ಆಸ್ಟ್ರೇಲಿಯಾ ವಿರುದ್ಧದ ಮೂರನೇ ಏಕದಿನ ಪಂದ್ಯದಲ್ಲಿ ಪಕ್ಕೆಲುಬಿನ ಗಾಯದಿಂದ ಆಂತರಿಕ ರಕ್ತಸ್ರಾವಕ್ಕೆ ಒಳಗಾದ ಭಾರತ ತಂಡದ ಉಪನಾಯಕ ಶ್ರೆಯಸ್ ಅಯ್ಯರ್ ಅವರನ್ನು ಸಿಡ್ನಿಯ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದ್ದು ಪ್ರಸ್ತುತ ಅವರು ತೀವ್ರ ನಿಗಾ ಘಟಕದಲ್ಲಿ( ಐಸಿಯು ) ಚಿಕಿತ್ಸೆ ಪಡೆಯುತ್ತಿದ್ದಾರೆ.
ಪಂದ್ಯದ ವೇಳೆ ಬ್ಯಾಕ್ ವರ್ಡ್ ಪಾಯಿಂಟ್ ನಿಂದ ಹಿಂದಕ್ಕೆ ಓಡುತ್ತಾ ಅಲೆಕ್ಸ್ ಕ್ಯಾರಿಯನ್ನು ಔಟ್ ಮಾಡುವ ವೇಳೆ ಅಯ್ಯರ್ ಅವರ ಎಡ ಪಕ್ಕೆಲುಬಿಗೆ ತೀವ್ರ ಗಾಯವಾಗಿದೆ ಶನಿವಾರ ಆಟದ ಬಳಿಕ ಅವರಿಗೆ ಅಸ್ವಸ್ಥತೆ ಕಾಣಿಸಿಕೊಂಡ ಹಿನ್ನಲೆಯಲ್ಲಿ ತಂಡದ ವ್ಯದ್ಯರು ತಕ್ಷಣ ಅವರನ್ನು ಆಸ್ಪತ್ರೆಗೆ ಕರೆದೊಯ್ದರು
ಆಸ್ಪತ್ರೆಯಲ್ಲಿ ನಡೆಸಿದ ಪರೀಕ್ಷೆಗಳಲ್ಲಿ ಆಂತರಿಕ ರಕ್ತಸ್ರಾವ ಪತ್ತೆಯಾಗಿದ್ದು ಸೋಂಕು ತಡೆಗಟ್ಟುವ ಸಲುವಾಗಿ ಅವರನ್ನು ನಿಗಾ ಘಟಕದಲ್ಲಿ ಇರಿಸಲಾಗಿದೆ ಎಂದು ಬಿಸಿಸಿಐ ಮೂಲಗಳು ತಿಳಿಸಿವೆ
ಅಯ್ಯರ್ ಅವರ ಸ್ಥಿತಿ ಪ್ರಸ್ತುತ ಸ್ಥಿರವಾಗಿದೆ ಅವರು ಚೇತರಿಸಿಕೊಂಡ ಬಳಿಕ ಎರಡರಿಂದ ಏಳು ದಿನಗಳವರೆಗೆ ವೀಕ್ಷಣೆಯಲ್ಲಿರುತ್ತಾರೆ ಎಂದು ವೈದ್ಯಕೀಯ ತಂಡ ತಿಳಿಸಿದೆ.
ತಂಡದ ವ್ಯೆದ್ಯರು ಯಾವುದೇ ಅಪಾಯಕ್ಕೆ ಅವಕಾಶ ನೀಡಲಿಲ್ಲ ಶ್ರೇಯಸ್ ಬಲಿಷ್ಠ ಆಟಗಾರರು ಅವರು ಶೀಘ್ರದಲ್ಲೇ ಮೈದಾನಕ್ಕೆ ಮರಳುವವರು ಎಂದು ಘಟನೆಯ ಕುರಿತು ಮಾಹಿತಿ ನೀಡಿದೆ ಎಂದು ಮೂಲಗಳು ತಿಳಿಸಿವೆ



