ಅಖಿಲ ಭಾರತ ಕಾಂಗ್ರೆಸ್ ಸಮಿತಿಯ ಹಾಗೂ ರಾಷ್ಟ್ರೀಯ ಯುವ ಕಾಂಗ್ರೆಸ್ ಸಮಿತಿ ಸೂಚನೆ ಮೇರೆಗೆ *ದಕ್ಷಿಣ ಕನ್ನಡ ಜಿಲ್ಲಾ ಯುವ ಕಾಂಗ್ರೆಸ್* ಸಮಿತಿಯ ಅಧ್ಯಕ್ಷರಾದ *ಇಬ್ರಾಹಿಂ ನವಾಝ್* ಅವರ ನೇತೃತ್ವದಲ್ಲಿ ಮಲ್ಲಿಕಟ್ಟೆ ಜಿಲ್ಲಾ ಕಾಂಗ್ರೆಸ್ ಕಚೇರಿ ಎದುರುಗಡೆ ರಾಷ್ಟ್ರ ವ್ಯಾಪಿ ನಡೆಯುತ್ತಿರುವಂತಹ *”ಸ್ಟಾಪ್ ವೋಟ್ ಚೂರಿ”* ಸ್ಟಿಕರ್ ಅಭಿಯಾನಕ್ಕೆ ಮಾಜಿ ಶಾಸಕ ಜಿ.ಆರ್. ಲೋಬೊರವರು ಚಾಲನೆ ನೀಡಿದರು.
ಈ ಸಂಧರ್ಭದಲ್ಲಿ ಕೆಪಿಸಿಸಿ ವಕ್ತಾರರಾದ ಎಂ. ಜಿ ಹೆಗ್ಡೆ, ಪಾಲಿಕೆ ಮಾಜಿ ಸದಸ್ಯ ನವೀನ್ ಡಿಸೋಜ, ಜಿಲ್ಲಾ ಕಾಂಗ್ರೆಸ್ ಕಾರ್ಯದರ್ಶಿ ಟಿಕೆ ಸುದೀರ್, ಜಿಲ್ಲಾ ಯುವ ಕಾಂಗ್ರೆಸ್ ಪದಾಧಿಕಾರಿಗಳಾದ ಮೊಹಮ್ಮದ್ ಬಶೀರ್ , ದೀಕ್ಷಿತ್ ಅತ್ತಾವರ್, ವೆಲ್ವಿನ್ ಜೇಸನ್ ಕ್ಯಾಸ್ಟಲೀನೋ, ಪೃಥ್ವಿರಾಜ್ ಪೂಜಾರಿ , ಮುಫೀದ್ ಗುರುಪುರ, ಮಂಗಳೂರು ದಕ್ಷಿಣ ವಿಧಾನ ಸಭಾ NSUI ಅಧ್ಯಕ್ಷ ಕ್ರಿಸ್ಟನ್ ಮೆನೇಜಸ್, ಫೈಝಲ್ ಮರಕಡ, ಸಮರ್ಥ್ ಭಟ್ ಹಾಗೂ ಪದಾಧಿಕಾರಿಗಳು ಇನ್ನಿತರರು ಉಪಸ್ಥಿತರಿದ್ದರು.



