ಫೈನಲ್ ನಲ್ಲಿ ಪಾಕ್ ಬಗ್ಗು ಬಡಿದು ಟ್ರೋಪಿ ಎತ್ತಿ ಹಿಡಿದ ಟೀಮ್ ಇಂಡಿಯಾ
ದುಬೈ:- ಭಾರತ ತಂಡ ಎದುರಾಳಿ ಪಾಕಿಸ್ತಾನ ತಂಡವನ್ನು ಬಗ್ಗುಬಡಿದು 2025 ರ ಏಷ್ಯಾಕಪ್ ತನ್ನದಾಗಿಸಿಕೊಂಡಿದೆ.
ದುಬೈ ಅಂತರರಾಷ್ಟ್ರೀಯ ಮೈದಾನದಲ್ಲಿ ನಡೆದ ಫೈನಲ್ ಪಂದ್ಯದಲ್ಲಿ ಪಾಕಿಸ್ತಾನ ನೀಡಿದ 147 ರನ್ ಗಳ ಗುರಿಯನ್ನು ಟೀಮ್ ಇಂಡಿಯಾ 19.4 ಓವರ್ ಗಳಲ್ಲಿ 5 ವಿಕೆಟ್ ಕಳೆದುಕೊಂಡು ತಲುಪಿತು ತಿಲಕ್ ವರ್ಮಾ ಅಜೇಯ ಅರ್ಧ ಶತಕದ ಮೂಲಕ ಗೆಲುವಿನ ರೂವಾರಿಯಾದರು ಶಿವಂ ದುಬೆ 22 ಎಸೆತಗಳಲ್ಲಿ 33 ರನ್ ಗಳಿಸಿ ತಿಲಕ್ ವರ್ಮಾ ಅವರಿಗೆ ಸಾಥ್ ನೀಡಿದರು
ಪಾಕಿಸ್ತಾನ ನೀಡಿದ 147 ರನ್ ಗಳ ಗುರಿಯನ್ನು ಬೆನ್ನಟ್ಟಿದ ಟೀಮ್ ಇಂಡಿಯಾ ಇಡೀ ಟೂರ್ನಿಯಲ್ಲಿ ಅನುಭವಿಸಿದಂತಹ ಭಾರಿ ಆಘಾತ ಎದುರಿಸಿತ್ತು ಗೋಲ್ಡನ್ ಫಾರ್ಮನಲ್ಲಿದ್ದ ಆರಂಭಿಕ ಬ್ಯಾಟರ್ ಅಭಿಷೇಕ್ ಶರ್ಮಾ ಕೇವಲ 6 ಎಸೆತಗಳಲ್ಲಿ 5ರನ್ ಗಳಿಸಿ ಫಹಿಂ ಅಶ್ರಫ್ ಬೌಲಿಂಗ್ ನಲ್ಲಿ ಕ್ಯಾಚ್ ನೀಡಿ ಔಟ್ ಆದರು ಇಡೀ ಟೂರ್ನಿಯಲ್ಲಿ ಇದು ಅವರ ಸಿಂಗಲ್ ಡಿಜಿಟ್ ವೈಫಲ್ಯವಾಯಿತು ಇನ್ನು ನಾಯಕ ಸೂರ್ಯಕುಮಾರ್ ಯಾದವ್ 1 ಗಿಲ್ 12 ತಮ್ಮ ವೈಫಲ್ಯವನ್ನು ಫೈನಲ್ ಪಂದ್ಯಕೂಟದಲ್ಲಿ ಮುಂದುವರಿಸಿದರು ಸೂರ್ಯಕುಮಾರ್ ಯಾದವ್ ಶಾಹಿನ್ ಆಫ್ರಿದಿ ಬೌಲಿಂಗ್ ನಲ್ಲಿ ಸಲ್ಮಾನ್ ಅಲಿ ಅವರಿಗೆ ಕ್ಯಾಚ್ ನೀಡಿ ಔಟ್ ಆದರು ಗಿಲ್ 12 ರನ್ ಗಳಿಸಿ ರಹಿಂ ಬೌಲಿಂಗ್ ನಲ್ಲಿ ರೌಫ್ ಗೆ ಕ್ಯಾಚ್ ನೀಡಿ ಪೆವಿಲಿಯನ್ ಸೇರಿಕೊಂಡರು.
ತಂಡದ ಮೊತ್ತ 20 ಆಗೊಷ್ಟರಲ್ಲಿ ಭಾರತ ತಂಡ 3 ವಿಕೆಟ್ ಕಳೆದುಕೊಂಡು ಹೀನಾಯ ಸ್ಥಿತಿಯಲ್ಲಿತ್ತು, ಆದರೆ ನಾಲ್ಕನೇ ವಿಕೆಟಿಗೆ ಜೊತೆಯಾದ ತಿಲಕ್ ವರ್ಮ ಸಂಜು ಸ್ಯಾಮ್ಸನ್ 50 ಎಸೆತಗಳಲ್ಲಿ 57 ರನ್ ಗಳಿಸಿದರು ಈ ಜೋಡಿ ವಿಕೆಟ್ ಉಳಿಸಿಕೊಂಡು ಜಾಗೃತವಾಗಿ ರನ್ ಗತಿ ಹೇರಿಸಿದರು ಆದರೆ ಸಂಜು ಸ್ಯಾಮ್ಸನ್ 21 ಎಸೆತಗಳಲ್ಲಿ ಎರಡು ಬೌಂಡರಿ ಒಂದು ಸಿಕ್ಸರ್ ಸಹಿತ 24 ರನ್ ಗಳಿಸಿ ಅಬ್ರಾರ್ ಅಹಮದ್ ಬೌಲಿಂಗ್ ನಲ್ಲಿ ಫಹಿಂ ಅಶ್ರಫ್ ಅವರಿಗೆ ಕ್ಯಾಚ್ ನೀಡಿ ಔಟ್
ಸಂಜು ಔಟ್ ಆದಾಗ ಭಾರತ ತಂಡದ ಮೊತ್ತ 77ಕ್ಕೆ 4 ಆಗಿತ್ತು ಇನ್ನೂ 46 ಹೆಸರುಗಳಲ್ಲಿ 70ರನ್ ಅಗತ್ಯವಿತ್ತು ಈ ಹಂತದಲ್ಲಿ ಒಂದಾದ ತಿಲಕ್ ವರ್ಮ ಹಾಗೂ ಶಿವಂ ದುಬೆ 5 ನೇ ವಿಕೆಟ್ ಜೊತೆಯಾಟದಲ್ಲಿ 60ರನ್ ಗಳಿಸಿ ತಂಡವನ್ನು ಗೆಲುವಿನ ಸನಿಹಕ್ಕೆ ತಂದರು ಉತ್ತಮವಾಗಿ ಆಡುತ್ತಿದ್ದ ದುಬೆ ತಂಡದ ಗೆಲುವಿಗೆ 10 ರನ್ ಅಗತ್ಯವಿದ್ದಾಗ ಪಹೀಂ ಬೌಲಿಂಗ್ ನಲ್ಲಿ ಆಫ್ರಿದಿಗೆ ಕ್ಯಾಚ್ ನೀಡಿ ಔಟ್ ಆದರು
ಕೊನೆಯ ಓವರ್ ನಲ್ಲಿ ಭಾರತದ ಗೆಲುವಿಗೆ 10 ರನ್ ಅಗತ್ಯವಿತ್ತು ರೌಫ್ ಎಸೆದ 20ನೇ ಓವರ್ ನಲ್ಲಿ ತಿಲಕ್ ವರ್ಮ ಕ್ರಮವಾಗಿ 2 6 1 ರನ್ ಸಿಡಿಸಿದರೆ ನಾಲ್ಕನೇ ಎಸೆತದಲ್ಲಿ ರಿಂಕು ಸಿಂಗ್ ಬೌಂಡರಿ ಬಾಡಿಸಿ ತಂಡವನ್ನು ಗೆಲುವಿನ ಗಡಿದಾಟಿಸಿದರು ಈ ಮೂಲಕ ಟೂರ್ನಿಯಲ್ಲಿ ಮೂರು ಹಂತದಲ್ಲೂ ಟೀಂ ಇಂಡಿಯಾ ಪಾಕಿಸ್ತಾನದ ವಿರುದ್ಧ ಗೆಲುವಿನ ನಗೆಬಿರಿತ್ತು 10 ಕ್ಕೆ 2 ವಿಕೆಟ್ ಕಳೆದುಕೊಂಡಿದ್ದ ಸಂದರ್ಭದಲ್ಲಿ ಬ್ಯಾಟಿಂಗ್ ಗೆ ಆಗಮಿಸಿದ ತಿಲಕ್ ವರ್ಮ ಕೊನೆಯವರೆಗೂ ಅಜೆಯವಾಗಿ ಉಳಿದುಕೊಂಡು ತಂಡವನ್ನು ಗೆಲುವಿನ ಗಡಿದಾಟಿಸಿದರು 53 ಎಸೆತಗಳಲ್ಲಿ ಎಡಗೈ ಬ್ಯಾಟರ್ ತಿಲಕ್ ವರ್ಮ ಮೂರು ಬೌಂಡರಿ ನಾಲ್ಕು ಸಿಕ್ಸರ್ ಸಹಿತ ಅಜೇಯ 69 ರನ್ ಗಳಿಸಿ ಭಾರತಕ್ಕೆ ಚಾಂಪಿಯನ್ ಪಟ್ಟ ದೊರಕಿಸಿಕೊಟ್ಟರು



