ಡಿಎನ್ಎ ವರದಿ ಪಾಸಿಟಿವ್ ಬಿಜೆಪಿ ಆರ್ ಎಸ್ ಎಸ್ ಸಂತ್ರಸ್ತೆಗೆ ನ್ಯಾಯ ಒದಗಿಸಲು ಮುಂದಾಗಲಿ ವಿಮೆನ್ ಇಂಡಿಯಾ ಆಗ್ರಹ
ಮಂಗಳೂರು:- ಪ್ರೀತಿಸಿ ದೈಹಿಕ ಸಂಪರ್ಕ ಬಳಸಿ ಗರ್ಭಿಣಿಯಾಗಿ ಪ್ರಸವವಾದ ನಂತರ ಮದುವೆಯಾಗಲು ನಿರಾಕರಿಸಿದ ಹಲವು ಗೊಂದಲಕ್ಕೆ ಸಾಕ್ಷಿಯಾಗಿದ್ದ ಪುತ್ತೂರಿನ ಪ್ರಕರಣದಲ್ಲಿ ಡಿಎನ್ಎ ವರದಿ ಆರೋಪಿತನಾಗಿರುವ ಜೆ ಕೃಷ್ಣರಾವ್ ನದೇ ಎಂದು ದೃಢಪಟ್ಟಿರುವುದರಿಂದ ಬಿಜೆಪಿ ಆರ್ ಎಸ್ ಎಸ್ ನಾಯಕರು ತಮ್ಮ ನಾಯಕನ ಪುತ್ರನಿಂದಾದ ತಪ್ಪಿಗೆ ನ್ಯಾಯ ಒದಗಿಸಲು ಮುಂದಡಿ ಇಡಬೇಕೆಂದು ವಿಮೆನ್ ಇಂಡಿಯಾ ಮೂವ್ಮೆಂಟ್ ಮಂಗಳೂರು ಗ್ರಾಮಾಂತರ ಜಿಲ್ಲಾಧ್ಯಕ್ಷ ಸಿನಿರರವರು ತಿಳಿಸಿದ್ದಾರೆ ಬಿಜೆಪಿ ಮುಖಂಡ ಹಾಗೂ ನಗರ ಪಂಚಾಯತ್ ಸದಸ್ಯ ಜಗನ್ನಿಸ್ ರಾವ್ ಅವರ ಪುತ್ರ ಎಬಿವಿಪಿ ಕಾರ್ಯಕರ್ತ ಆರೋಪಿತ ವ್ಯಕ್ತಿ ಜೆ ಕೃಷ್ಣರಾವ್ ಮಗು ತನ್ನದೆಲ್ಲ ಎಂದು ವಾದಿಸುತ್ತಿದ್ದ ಆದರೆ ಡಿಎನ್ಎ ವರದಿಯಿಂದ ಸತ್ಯ ಬಹಿರಂಗವಾಗಿದೆ ಹಾಗಾಗಿ ಇನ್ನು ತಡ ಮಾಡದೆ ಕೂಡಲೇ ಸಂತ್ರಸ್ತೆಯನ್ನು ಮದುವೆಯಾಗುವುದೇ ನ್ಯಾಯವಾಗಿರುವುದರಿಂದ ಆ ನಿಟ್ಟಿನಲ್ಲಿ ಮುಂದಿನ ನಡೆ ಸಾಗಬೇಕು ಎಂದು ಪತ್ರಿಕಾ ಪ್ರಕಟಣೆಯಲ್ಲಿ ಆಗ್ರಹಿಸಿದ್ದಾರೆ ಮಹಿಳೆಯರ ನ್ಯಾಯದ ಪರ ಎಂದು ವಾದಿಸುವ ಆರ್ ಎಸ್ ಎಸ್ ಬಿಜೆಪಿ ನಾಯಕರು ಈಗ ಯಾವ ರೀತಿ ನ್ಯಾಯ ಒದಗಿಸುತ್ತಾರೆ ಎಂದು ಕಾದು ನೋಡಬೇಕಾಗಿದೆ ಎಂದು ತಿಳಿಸಿದ್ದಾರೆ



