ಪೊಳಲಿಯಲ್ಲಿ ಬಸ್ಸನ್ನು ಸ್ವಾಗತಿಸಿದ ಬಂಟ್ವಾಳ ತಾಲೂಕು ಪಂಚ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿ
ಬಂಟ್ವಾಳ :- ಮಂಗಳೂರು- ಪೊಳಲಿಗೆ ನೂತನವಾಗಿ ಪ್ರಾರಂಭಗೊಂಡ ಕೆ.ಎಸ್ ಆರ್ ಟಿಸಿ ಬಸ್ಸನ್ನು ಪೊಳಲಿಯಲ್ಲಿ ಬಂಟ್ವಾಳ ತಾಲೂಕಿನ ಪಂಚ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿಯ ಅಧ್ಯಕ್ಷರಾದ ಶ್ರೀಮತಿ ಜಯಂತಿ ವಿ ಪೂಜಾರಿ, ಮಾಜಿ ಜಿಲ್ಲಾ ಪಂಚಾಯತ್ ಸದಸ್ಯರಾದ ಶ್ರೀ ಚಂದ್ರಪ್ರಕಾಶ್ ಶೆಟ್ಟಿ ತುಂಬೆ, ಇವರ ನೇತ್ರತ್ವದಲ್ಲಿ ಸ್ವಾಗತಿಸಲಾಯಿತು.
ಈ ಸಂದರ್ಭದಲ್ಲಿ-
ಕರಿಯಂಗಳ ಗ್ರಾಮ ಪಂಚಾಯತ್ ಅಧ್ಯಕ್ಷರಾದ ರಾಧಾ ಲೊಕೇಶ್ , ಉಪಾಧ್ಯಕ್ಷ ರಾಜ್ ಕೋಟ್ಯಾನ್, ಕರಿಯಂಗಳ ವಲಯ ಕಾಂಗ್ರೆಸ್ ಅಧ್ಯಕ್ಷರಾದ ಚಂದ್ರಹಾಸ, ಅಮ್ಮುಂಜೆ ವಲಯ ಕಾಂಗ್ರೆಸ್ ಸಮಿತಿಯ ಅಧ್ಯಕ್ಷರಾದ AH ಸಲಾಂ ಕಲಾಯಿ, ಗ್ರಾಮ ಪಂಚಾಯತಿ ಸದಸ್ಯರಾದ ವಿನಾ ಆಚಾರ್ಯ, ಲಕ್ಷೀಶ್ ಶೆಟ್ಟಿ, ಕಾಂಗ್ರೆಸ್ ಮುಖಂಡ ಹರಿಪ್ರಸಾದ್, ಅಹ್ಮದ್ ಬಶೀರ್, ಪ್ರೇಮನಾಥ್ , ಅಬ್ಬಾಸ್ ಮೊದಲಾದವರು ಉಪಸ್ಥಿತರಿದ್ದರು.



