ಸುಳ್ಳು ಸುದ್ದಿ ಹರಡಿಸಿದ VTV vitla ಇದರ ವಿರುದ್ದ ಉಪ್ಪಿನಂಗಡಿ ಪೋಲಿಸ್ ಠಾಣಾಧಿಕಾರಿಗೆ ದೂರು ನೀಡಿದ ಅಬ್ದುಲ್ ಖಾದರ್ ಆದರ್ಶ ನಗರ
ಪುತ್ತೂರು:- ಶಾಸಕರ ಕಚೇರಿಗೆ ನಿರಂತರವಾಗಿ ಬರುತ್ತಿದ್ದ ನೆಕ್ಕಿಲಾಡಿ ಆದರ್ಶ ನಗರ ನಿವಾಸಿ ಖಾದರ್ ಎಂಬಾತ ಮಹಿಳೆಯೊಬ್ಬರಿಂದ ಕ್ರೆಡಿಟ್ ಕಾರ್ಡ್ ಪಡೆದು 40 ಸಾವಿರ ವಂಚನೆ ಮತ್ತು ಖಾದರ್ ಅವರಿಗೆ ಗೂಸಾ ಎನ್ನುವ ಸುಳ್ಳು ಸುದ್ದಿಯೊಂದು VTV vitla news ಎನ್ನುವ ವೆಬ್ ಸೈಟ್ ನಲ್ಲಿ ಪ್ರಕಟಗೊಂಡಿದ್ದು ಇದರ ವಿರುದ್ದ ದೂರುದಾರ ಅಬ್ದುಲ್ ಖಾದರ್ ಅವರು ಉಪ್ಪಿನಂಗಡಿ ಪೋಲಿಸ್ ಠಾಣೆಯಲ್ಲಿ ದೂರನ್ನು ದಾಖಲಿಸಿದ್ದಾರೆ


VTV vitla ಎನ್ನುವ ನ್ಯೂಸ್ ವಿಭಾಗದವರು ಅನಗತ್ಯವಾಗಿ ಸುಳ್ಳು ಸುದ್ದಿಯನ್ನು ಪ್ರಕಟಿಸುವ ಮೂಲಕ ನನ್ನ ವಿರುದ್ದ ಸಮಾಜದ ಜನರಲ್ಲಿ ಅಪನಂಬಿಕೆ ಮೂಡಿಸುವ ಕೆಲಸವನ್ನು ಮಾಡಿದ್ದಾರೆ ಮತ್ತು ಪುತ್ತೂರಿನ ಜನಪ್ರಿಯ ಶಾಸಕರು ಮತ್ತು ಕಚೇರಿಯನ್ನು ಎಳೆದು ತರುವ ವ್ಯವಸ್ಥೆ ಪಿತೂರಿ ಮಾಡಿರುತ್ತಾರೆ ಈ ನಿಟ್ಟಿನಲ್ಲಿ ವೆಬ್ ಸೈಟ್ ನ್ಯೂಸ್ ಇವರನ್ನು ಪತ್ತೆಹಚ್ಚಿ ಇವರ ವಿರುದ್ಧ ಸೂಕ್ತ ಕಾನೂನು ಕ್ರಮಕೈಗೊಳ್ಳುವಂತೆ ಮತ್ತು ನ್ಯಾಯ ಒದಗಿಸುವಂತೆ ಉಪ್ಪಿನಂಗಡಿ ಪೋಲಿಸ್ ಠಾಣೆಗೆ ಅಬ್ದುಲ್ ಖಾದರ್ ಆದರ್ಶ ನಗರ ಇವರು ದೂರನ್ನು ನೀಡಿರುತ್ತಾರೆ.



