ಅಧಿಕಾರಿಗಳು ಗುತ್ತಿಗೆದಾರರ ವಿರುದ್ಧ ಸಾರ್ವಜನಿಕರ ಆಕ್ರೋಶ
ಬಂಟ್ವಾಳ:- ಕನ್ಯಾನ ರಸ್ತೆಯು ತೀರಾ ಹದಗೆಟ್ಟು ಹೋಗಿದ್ದು ಇದರಿಂದ ರೊಚ್ಚಿಗೆದ್ದ ಸಾರ್ವಜನಿಕರು ಶವದ ಆಕೃತಿ ರಚಿಸಿ ರಸ್ತೆಯಲ್ಲಿ ಇಟ್ಟು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಮಂಜೇಶ್ವರ, ಸುಬ್ರಮಣ್ಯ ರಾಜ್ಯ ಹೆದ್ದಾರಿಯಲ್ಲಿ ಬೈರಿಕಟ್ಟೆ ಎಂಬಲ್ಲಿ ರಸ್ತೆ ಸಂಪೂರ್ಣವಾಗಿ ಹೊಂಡ ಗುಂಡಿಗಳಿಂದ ಕೂಡಿದೆ ವಿಟ್ಲದಿಂದ ಕನ್ಯಾನ ಬಾಯಾರು ಉಪ್ಪಳ ಆನೆಕಲ್ಲು ಮಂಜೇಶ್ವರ ಕಡೆಗೆ ಸಂಪರ್ಕ ಕಲ್ಪಿಸುವ ಈ ರಸ್ತೆ ಹದಗೆಟ್ಟ ಪರಿಣಾಮ ವಾಹನ ಸಂಚಾರ ದುಸ್ಥರವಾಗಿದೆ.
ಪ್ರತಿನಿತ್ಯ ನೂರಾರು ವಾಹನಗಳು ಸಂಚರಿಸುತ್ತಿರುವ ಈ ರಸ್ತೆಯ ಒಂದು ಬದಿಗೆ ಕೆಲವು ವರ್ಷಗಳ ಹಿಂದೆ ಅಳವಡಿಸಲಾಗಿದ್ದ ಇಂಟರ್ ಲಾಕ್ ಈಗ ಕಿತ್ತು ಹೋಗಿದೆ.
ವಾಹನ ಬಿಟ್ಟು ಪಾದಚಾರಿಗಳಿಗೂ ನಡೆದಾಡಲೂ ತೊಂದರೆಯಾಗುತ್ತಿದೆ ಎಂಬ ಆರೋಪ ಕೇಳಿ ಬಂದಿದೆ
ಈಗಾಗಲೇ ಆಕ್ರೋಶಗೊಂಡ ಸಾರ್ವಜನಿಕರು ಶವದ ಆಕ್ರತಿ ರಚಿಸಿ ಈ ರಸ್ತೆ ಕಾಮಗಾರಿಗೆ ಸಂಬಂಧಪಟ್ಟ ಅಧಿಕಾರಿಗಳು ಎಂಜಿನಿಯರ್ ಗಳು ಗುತ್ತಿಗೆದಾರರು ಮಲಗಿದ್ದಾರೆ ಯಾರು ತೊಂದರೆ ಕೊಡಬಾರದು ಎಂದು ಬರೆಯಲಾದ ಬೋರ್ಡ್ ಅಳವಡಿಸಿದ್ದಾರೆ.



