ಒಂದು ಗ್ರಾಂ ಚಿನ್ನಕ್ಕೆ ಬೆಲೆ ಎಷ್ಟು ಗೊತ್ತಾ
ಹೊಸದಿಲ್ಲಿ:- ದಿಲ್ಲಿಯ ಚಿನಿವಾರ ಪೇಟೆಯಲ್ಲಿ ಮಂಗಳವಾರ ಚಿನ್ನದ ಬೆಲೆಯನ್ನು ಮತ್ತೊಮ್ಮೆ ಏರಿಕೆ ಕಂಡು ಬಂದಿದ್ದು 24 ಕ್ಯಾರಟ್ ಚಿನ್ನದ ದರ ಪ್ರತಿ ಗ್ರಾಂ ಗೆ 125 ರೂ ನಷ್ಟು ಏರಿಕೆ ಕಂಡು 12202 ರೂಗೆ ತಲುಪಿತು ಇದೇ ರೀತಿ 22 ಕ್ಯಾರಟ್ ಚಿನ್ನದ ದರ ಪ್ರತಿ ಗ್ರಾಂ ಗೆ 115 ರೂ ನಷ್ಟು ಏರಿಕೆ ಕಂಡು 11185ರೂ ತಲುಪಿದರೆ 18 ಕ್ಯಾರಟ್ ಚಿನ್ನದ ದರ ಪ್ರತಿ ಗ್ರಾಂ ಗೆ 94 ,ರೂ ನಷ್ಟು ಏರಿಕೆ ಕಂಡು 9152 ರೂ ಗೆ ತಲುಪಿದೆ
ಅಮೇರಿಕ ಸರಕಾರ ಸ್ಥಗಿತಗೊಳ್ಳುವ ಗಂಭೀರ ಅಪಾರ ಹಾಗೂ ಭಾರತದಲ್ಲಿನ ಹಬ್ಬದ ಖ್ರುತುವಿನ ಬೇಡಿಕೆ ಹಿನ್ನಲೆಯಲ್ಲಿ ಹೂಡಿಕೆದಾರರ ಸ್ವರ್ಗ ಎಂದೇ ಪರಿಗಣಿಸಲಾಗಿರುವ ಚಿನ್ನಕ್ಕಾಗಿನ ಬೇಡಿಕೆಯಲ್ಲಿ ಏರಿಕೆಯಾಗಿದೆ ಈ ಹಿನ್ನಲೆಯಲ್ಲಿ ಎಲ್ಲಾ ಬಗೆಯ ಪರಿಶುದ್ಧತೆಯ ಚಿನ್ನದ ದರದಲ್ಲಿ ಗಮನಾರ್ಹ ಏರಿಕೆ ಕಂಡು ಬಂದಿತು
ದೇಶದ ಇನ್ನಿತರ ಪ್ರಮುಖ ಚಿನಿವಾರ ಪೇಟೆಗಳಾದ ಮುಂಬೈ ಚೆನೈ ಹೈದರಾಬಾದ್ ಕೋಲ್ಕತಾ ಬೆಂಗಳೂರಿನಲ್ಲೂ ಚಿನ್ನದ ಬೆಲೆಯಲ್ಲಿ ದಾಖಲೆಯ ಜಿಗಿತವಾಗಿದೆ
ಆ ಮೂಲಕ ಭಾರತದಲ್ಲಿನ ಐತಿಹಾಸಿಕ ಚಿನ್ನದ ದರ ಏರಿಕೆಯ ನಾಗಲೋಟ ಮುಂದುವರೆದಿದೆ



