ಪತ್ನಿ ಸಫಿಯ ಅವರಿಗೆ ಸಾಥ್ ನೀಡಿ ಪತಿ ಮುಹಮ್ಮದ್ ನೌಫಲ್
ವಿಟ್ಲ:- ಶಿಕ್ಷಣ ಎಂಬುದು ವಿಕಸನದ ಅತ್ಯಂತ ಮುಖ್ಯವಾದ ಘಟ್ಟವಾಗಿದೆ.
ಮುಸ್ಲಿಂ ಹೆಣ್ಣುಮಕ್ಕಳು ಅನೇಕರು ಶಿಕ್ಷಣದಲ್ಲಿ ಮುಂದೆ ಇದ್ದರೂ ಮದುವೆಯ ನಂತರ ತಮ್ಮ ಶಿಕ್ಷಣವನ್ನು ಮುಂದುವರಿಸಲು ಸಾಧ್ಯವಾಗದ ಅನೇಕ ಹೆಣ್ಣು ಮಕ್ಕಳನ್ನು ನಾವು ಕಾಣಬಹುದಾಗಿದೆ.
ಹೀಗಿರುವಲ್ಲಿ ಪುತ್ತೂರು ತಾಲೂಕಿನ ಗ್ರಾಮೀಣ ಪ್ರದೇಶದ ಹೆಣ್ಣುಮಗಳೊಬ್ಬಳು ಶಿಕ್ಷಣ ಪಡೆಯಲು ನಡೆದು ಬಂದ ದಾರಿಯು ಆಶ್ಚರ್ಯಕರವಾಗಿದೆ.
ತನ್ನ ಬಾಲ್ಯದಲ್ಲೇ ತನಗೆ ಬುದ್ದಿ ಶಕ್ತಿ ಬರುವ ಮೊದಲೇ ತಂದೆಯನ್ನು ಕಳೆದುಕೊಂಡಿರುವ ಈಕೆಯ ಹೆಸರು ಸಫಿಯ ತಂದೆ ಧಾರ್ಮಿಕ ಕ್ಷೇತ್ರದಲ್ಲಿ ಗುರುಗಳಾಗಿದ್ದು ತನ್ನ ಅಣ್ಣ ತಂದೆಯ ಆದರ್ಶದಂತೆ ಧಾರ್ಮಿಕ ಕ್ಷೇತ್ರದಲ್ಲಿ ತೊಡಗಿಸಿಕೊಂಡಿದ್ದಾರೆ.
ಕಷ್ಟದ ಸಮಯದಲ್ಲಿ ಪಿಯುಸಿ ಶಿಕ್ಷಣವನ್ನು ಪೂರೈಸಿದ ಸಂದರ್ಭದಲ್ಲಿ
ಉತ್ತಮ ಸಂಬಂಧವನ್ನು ಮನೆಗೆ ಹುಡುಕಿಕೊಂಡು ಮನೆಗೆ ಬಂದಾಗ ಶಿಕ್ಷಣವನ್ನು ಅರ್ಧಕ್ಕೆ ಮೊಟಕುಗೊಳಿಸಿ ಮನೆಯವರ ಆಶಯದಂತೆ ಉದ್ಯಮಿ ಮಹಮ್ಮದ್ ನೌಫಲ್ ಎಂಬುವರ ಜೊತೆ ವಿವಾಹವಾಗುತ್ತಾರೆ.
ನಂತರ ಒಂದು ಮಗುವಿಗೆ ಜನ್ಮ ನೀಡಿ ಸುಖ ಸಂಸಾರಾದಲ್ಲಿ ಇರುವಾಗ ಸಫಿಯ ಎಂಬ ವಿದ್ಯಾವಂತ ಹೆಣ್ಣುಮಗಳು ತನ್ನ ಗಂಡ ಹಾಗೂ ಮನೆಯವರಲ್ಲಿ ತನ್ನ ಕಲಿಕೆಯ ಕನಸನ್ನ ಹೇಳುತ್ತಾಳೆ ಇದಕ್ಕೆ ಗಂಡನಾದ ನೌಫಲ್ ಹಾಗೂ ಅವರ ಕುಟುಂಬದವರು ಸಕಾರಾತ್ಮಕವಾಗಿ ಸ್ಪಂದಿಸಿ ತನ್ನ ಬಾಲ್ಯದ ಕನಸು ಉತ್ತಮ ವಕೀಲೆ ಆಗಬೇಕೆಂಬ ಕನಸಿಗೆ ಚಿಗುರು ಮೂಡುತ್ತದೆ.
ತನ್ನ ಶಿಕ್ಷಣವನ್ನು ಮುಂದುವರಿಸುವ ನಿಟ್ಟಿನಲ್ಲಿ ತನ್ನ 1 ವರ್ಷ ,2 ತಿಂಗಳ ಮಗುವಿನ ಜೊತೆಗೆ ವಿವೇಕಾನಂದ ಕಾನೂನು ಕಾಲೇಜು ಪುತ್ತೂರಿನಲ್ಲಿ 5ವರ್ಷದ ಕಾನೂನು ಪದವಿ ಶಿಕ್ಷಣ ಪಡೆಯಲು ಪ್ರವೇಶ ಪಡೆದು ಪ್ರಸ್ತುತ 5 ನೇ ವರ್ಷ ಪೂರ್ಣಗೂಳಿಸಿ ಕಾನೂನು ಪದವಿ ಪಡೆದು ಕರ್ನಾಟಕ ರಾಜ್ಯ ವಕೀಲರ ಷರತ್ತಿನಲ್ಲಿ ನೋಂದಣಿಯಾಗಿ ವಕೀಲ ವ್ರತ್ತಿಯನ್ನು ಪ್ರಾರಂಭಿಸಿದ್ದಾರೆ.
ಹೀಗಾಗಿ ಹಲವಾರು ಹೆಣ್ಣು ಮಕ್ಕಳು ಮದುವೆಯ ನಂತರವೂ ಕೂಡ ತಮ್ಮ ಗುರಿಯನ್ನು ಸಾಧಿಸಲು ಶ್ರಮಪಡುತ್ತಿದ್ದಾರೆ ಯಾವುದೇ ಹೆಣ್ಣು ಮಕ್ಕಳು ತಮ್ಮ ಕನಸನ್ನು ಕನಸಾಗಿ ಮಣ್ಣು ಮಾಡುವ ಮೊದಲು ತಮ್ಮ ಹೆತ್ತವರ ಹಾಗೂ ತಮ್ಮ ಗಂಡ ಹಾಗೂ ಅವರ ಮನೆಯವರ ಬಳಿ ವ್ಯಕ್ತಪಡಹೆಣ್ಣುಮಗಳು ಇನ್ನೊಂದು ಸಫಿಯ ನೀವು ಆಗಬಹುದು ಎಂಬುದಕ್ಕೆ ಇದೂಂದು ನಿದರ್ಶನವಾಗಿದೆ.



