800 ಮೀ, 1500 ಮೀ.400 ಮೀ.ಹರ್ಡೆಲ್ಸ್ ನಲ್ಲಿ ರಾಜ್ಯ ಮತ್ತು ಕ್ಷೇತ್ರ ಮಟ್ಟದಲ್ಲಿ ಪ್ರಥಮ ಸ್ಥಾನ
ಪುತ್ತೂರು:- ಜನಸೇವಾ ವಿದ್ಯಾ ಕೇಂದ್ರ ಚನ್ನೇನಹಳ್ಳಿ ಬೆಂಗಳೂರಿನಲ್ಲಿ ನಡೆದ ವಿದ್ಯಾ ಭಾರತಿ ಕರ್ನಾಟಕ ಇದರ ರಾಜ್ಯ ಮತ್ತು ಕ್ಷೇತ್ರ ಮಟ್ಟದ ಅಥ್ಲೆಟಿಕ್ಸ್ ಕ್ರೀಡಾಕೂಟದಲ್ಲಿ ನರೇಂದ್ರ ಪ.ಪೂ ಕಾಲೇಜಿನ ಪ್ರಥಮ ವಿಜ್ಞಾನ ವಿಭಾಗದ ವಿದ್ಯಾರ್ಥಿನಿ ಪಿ.ಯಶಸ್ವಿ ನಾಯಕ್ ಇವರು 800 ಮೀ.1500ಮೀ.400 ಮೀ.ಹರ್ಡೆಲ್ಸ್ ನಲ್ಲಿ ರಾಜ್ಯ ಮತ್ತು ಕ್ಷೇತ್ರ ಮಟ್ಟದಲ್ಲಿ ಪ್ರಥಮ ಸ್ಥಾನ ಪಡೆದು ಪ್ರಥಮ ಸಮಗ್ರ ಪ್ರಶಸ್ತಿಯನ್ನು ಪಡೆದಿರುತ್ತಾರೆ.
ಹಾಸನದಲ್ಲಿ ನಡೆಯುವ ರಾಷ್ಟ್ರಮಟ್ಟದ ಕ್ರೀಡಾಕೂಟಕ್ಕೆ ಇವರು ಆಯ್ಕೆಯಾಗಿರುತ್ತಾರೆ.
ಇವರು ಪುಣಚ ಗ್ರಾಮದ ಬೈಲುಪದವು ನಿವಾಸಿಯಾದ ಜಿ.ಪರಮೇಶ್ವರ ನಾಯಕ್ , ರೋಹಿನಿ ಎನ್ ಇವರ ಸುಪುತ್ರಿಯಾಗಿರುತ್ತಾರೆ.



