ಮಲಯಾಳಂ ನಟ ಜಯಕೃಷ್ಣನ್ ಸಹಿತ ಇಬ್ಬರ ಬಂಧನ
ಮಂಗಳೂರು:- ಕ್ಯಾಬ್ ಚಾಲಕನನ್ನು ಟೆರರಿಸ್ಟ್ ಎಂದು ಅವಹೇಳನಗೈದ ಆರೋಪದ ಮೇರೆಗೆ ಮಲೆಯಾಳಂ ಚಿತ್ರನಟ ಜಯಕೃಷ್ಣನ್ ಸಹಿತ ಇಬ್ಬರನ್ನು ನಗರದ ಉರ್ವ ಠಾಣೆಯ ಪೋಲಿಸ್ ಅಧಿಕಾರಿಗಳು ಬಂಧಿಸಿದ್ದಾರೆ.
ಅ.9 ರಂದು ರಾತ್ರಿ ಕೇರಳದ ಸಂತೋಷ್ ಅಬ್ರಹಾಂ ಜಯಕೃಷ್ಣನ್ ಮತ್ತು ವಿಮಲ್ ಎಂಬವರು uber ಮತ್ತು Rapido captain ಆ್ಯಪ್ ಮೂಲಕ ಕ್ಯಾಬ್ ಬುಕ್ ಮಾಡಿ ನಗರದ ಬಿಜೈ ನ್ಯೂರೂಡ್ ನ ಪಿಕ್ ಅಪ್ ವಿಳಾಸ ನೀಡಿದ್ದರು.
ಅದರಂತೆ ತಾನು ಕರೆ ಮಾಡಿ ಪಿಕ್ ಅಪ್ ಬಗ್ಗೆ ವಿಚಾರಿಸಿದಾಗ ಆ ಕಡೆಯಿಂದ ಹಿಂದಿ ಭಾಷೆಯಲ್ಲಿ ಮಾತನಾಡಿದ ವ್ಯಕ್ತಿ ಮುಸ್ಲಿಂ ತೀವ್ರವಾದಿ ಟೆರರಿಸ್ಟ್ ಎಂದು ಅವಹೇಳನಗೈದು ಮುಸ್ಲಿಮ್ ಟೆರರಿಸ್ಟ್ ಎಂದು ಹಿಂದಿ ಭಾಷೆಯಲ್ಲಿ ಬೊಬ್ಬೆ ಹಾಕಿದಲ್ಲದೇ ಮಲೆಯಾಳಂನಲ್ಲಿ ತಾಯಿಗೆ ಅವ್ಯಾಚ್ಯವಾಗಿ ಬೈದಿರುವುದಾಗಿ ಕ್ಯಾಬ್ ಚಾಲಕ ಅಹ್ಮದ್ ಶಫೀಕ್ ಉರ್ವ ಠಾಣೆಗೆ ದೂರು ನೀಡಿದ್ದರು.
ಅದರಂತೆ ಅ.10 ರಂದು ಉರ್ವ ಪೋಲಿಸ್ ಠಾಣೆಯಲ್ಲಿ ಸೆಕ್ಸನ್ 352 352(2) ಬಿ.ಎನ್ ಎಸ್ ರಂತೆ ಪ್ರಕರಣ ದಾಖಲಿಸಿದ ಪೋಲಿಸರು ಮಲಯಾಳಂನ ಚಿತ್ರನಟ ಜಯಕೃಷ್ಣನ್ ಮತ್ತು ಸಂತೋಷ್ ಅಬ್ರಹಾಂನನ್ನು ಬಂಧಿಸಿದ್ದಾರೆ



