ಅಮಿತ್ ಶಾ ಹೇಳಿಕೆ ಬೆನ್ನಲ್ಲೇ ತೀವ್ರ ಆಕ್ರೋಶ ಹೊರ ಹಾಕಿದ ಮುಸ್ಲಿಂ ಸಂಘಟನೆಗಳು
ಹೊಸದಿಲ್ಲಿ:- ಭಾರತದಲ್ಲಿ ಮುಸ್ಲಿಮರ ಜನಸಂಖ್ಯೆಯಲ್ಲಿ ಹೆಚ್ಚಳಕ್ಕೆ ಭಾರಿ ಪ್ರಮಾಣದಲ್ಲಿ ಅಕ್ರಮ ವಲಸೆಯೇ ಕಾರಣ ಹೊರತು ಫಲವತ್ತತೆ ದರವಲ್ಲ ಎಂದು ಕೇಂದ್ರ ಗೃಹ ಸಚಿವ ಅಮಿತ್ ಶಾ ಹೇಳಿದ್ದಾರೆ.
ದೈನಿಕ್ ಜಾಗರಣ್ ಶುಕ್ರವಾರ ಇಲ್ಲಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಒಳನುಸುಳುವಿಕೆ ಜನಸಂಖ್ಯಾ ಬದಲಾವಣೆ ಮತ್ತು ಪ್ರಜಾಪ್ರಭುತ್ವ ಕುರಿತು ಉಪನ್ಯಾಸ ನೀಡಿದ ಶಾ ದೇಶದಲ್ಲಿ ಮುಸ್ಲಿಮರ ಜನಸಂಖ್ಯೆಯು ಶೇ.24.6 ದರದಲ್ಲಿ ಹೆಚ್ಚಳವಾಗಿದೆ.
ಮತ್ತು ಹಿಂದೂಗಳ ಜನಸಂಖ್ಯೆ ಶೇ.4.5 ರಷ್ಟು ಕುಸಿದಿದೆ ಈ ಕುಸಿತಕ್ಕೆ ಕಾರಣ ನುಸುಳುವಿಕಯೇ ಹೊರತು ಫಲವತ್ತತೆ ದರವಲ್ಲ ಭಾರತವು ವಿಭಜನೆಗೊಂಡಾಗ ಭಾರತದ ಇಕ್ಕೆಲಗಳಲ್ಲಿ ಧರ್ಮದ ಆಧಾರದಲ್ಲಿ ಪಾಕಿಸ್ತಾನ ರಚನೆಯಾಗಿತ್ತು ನಂತರ ಅದು ಪಾಕಿಸ್ತಾನ ಮತ್ತು ಬಾಂಗ್ಲಾದೇಶವಾಗಿ ವಿಭಜನೆಗೊಂಡಿತ್ತು.
ಎರಡು ಕಡೆಗಳಿಂದ ಒಳನುಸುಳುವಿಕೆಯು ಜನಸಂಖ್ಯೆಯಲ್ಲಿ ಇಂತಹ ಗಮನಾರ್ಹ ಬದಲಾವಣೆಗೆ ಕಾರಣವಾಗಿದೆ ಎಂದು ಹೇಳಿದರು
1951 ರಿಂದ 2011ರವರೆಗಿನ ಜನಗಣತಿಯಲ್ಲಿ ಎಲ್ಲ ಧರ್ಮಗಳಲ್ಲಿ ಕಂಡು ಬಂದಿದ್ದ ಜನಸಂಖ್ಯಾ ಬೆಳವಣಿಗೆಯಲ್ಲಿನ ಅಸಮಾನತೆಗೆ ಒಳನುಸುಳುವಿಕೆ ಮುಖ್ಯ ಕಾರಣವಾಗಿತ್ತು ಎಂದರು
ತನ್ನ ಪಕ್ಷವು 1950 ರ ದಶಕದಿಂದಲೂ ಪತ್ತೆ ಅಳಿಸಿ ಮತ್ತು ಗಡಿಪಾರು ಎಂಬ ಮೂರು ತತ್ವಗಳನ್ನು ಅಳವಡಿಸಿಕೊಂಡಿತ್ತು.
ಎಂದು ಅವರು ಹೇಳಿದರು.
ಬಿಜೆಪಿ 1980 ರಲ್ಲಿ ಸ್ಥಾಪನೆಗೊಂಡಿದ್ದರೂ 1951 ರಲ್ಲಿ ಸ್ಥಾಪನೆಯಾಗಿದ್ದ ಭಾರತೀಯ ಜನಸಂಘದಲ್ಲಿ ಅದು ತನ್ನ ಬೇರುಗಳನ್ನು ಹೊಂದಿದೆ
ಬಿಜೆಪಿ ಸರಕಾರವು ಅಕ್ರಮ ವಲಸಿಗರನ್ನು ಗುರುತಿಸುತ್ತದೆ.
ಅವರ ಹೆಸರುಗಳನ್ನು ಮತದಾರರ ಪಟ್ಟಿಯಿಂದ ಅಳಿಸಲು ಎಲ್ಲ ಪ್ರಯತ್ನಗಳನ್ನು ಮಾಡುತ್ತದೆ ಮತ್ತು ಅವರನ್ನು ಸ್ವದೇಶಗಳಿಗೆ ಗಡಿಪಾರು ಮಾಡಲು ಶ್ರಮಿಸುತ್ತದೆ ಎಂದು ಶಾ ಹೇಳಿದರು.
ಶಾ ಅವರ ಹೇಳಿಕೆಯನ್ನು ಈಗಾಗಲೇ ಹಲವಾರು ಮುಸ್ಲಿಂ ಸಂಘಟನೆಗಳು ಖಂಡಿಸಿದೆ ಮತ್ತು ಶಾ ಅವರ ಈ ಹೇಳಿಕೆ ಬಾಲೀಷತನದ ಹೇಳಿಕೆಯಾಗಿದೆ ಎಂದು ಮುಸ್ಲಿಂ ಸಂಘಟನೆಗಳು ಆರೋಪ ಮಾಡಿದೆ..



